ಪ್ರಧಾನ ಸುದ್ದಿ

ಗೌರವ ವಾಪಸ್ ನೀಡಿದ ಬಸಂತ

Published On :

ಕ.ಪ್ರ.ವಾರ್ತೆ  ಬೆಂಗಳೂರು  ಅ. 5
ಚೆನ್ನೈನಲ್ಲಿ ನಡೆದ ಭಾರತೀಯ ಚಿತ್ರರಂಗದ ನೂರರ ಸಂಭ್ರಮದ ಸುತ್ತ ಎದ್ದ ಅಸಮಾಧಾನದ ಹೊಗೆ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಸಮಾರಂಭದಲ್ಲಿ ಉಂಟಾದ ಅವ್ಯವಸ್ಥೆ ಕಂಡು ಬೇಸರಗೊಳ್ಳುತ್ತಿರುವವರ ಸಾಲಿಗೆ ನಿರ್ಮಾಪಕ ಬಸಂತ್‌ಕುಮಾರ್ ಪಾಟೀಲ್ ಹೊಸದಾಗಿ ಸೇರ್ಪಡೆಯಾಗಿದ್ದಾರೆ.
ನೂರರ ಸಂಭ್ರಮದ ವೇದಿಕೆಯಲ್ಲಿ ಸ್ವೀಕರಿಸಿದ ಸನ್ಮಾನ ಹಾಗೂ ನೆನಪಿನ ಕಾಣಿಕೆ ಹಿಂದಿರುಗಿಸುವ ಮೂಲಕ ಬಸಂತ್‌ಕುಮಾರ್ ಪಾಟೀಲ್, ಆಯೋಜಕರ ವಿರುದ್ಧ ತಮ್ಮ ಬೇಸರ ಹಾಗೂ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ನೂರರ ಗೌರವವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ವಾಪಸ್ ನೀಡಿರುವ ಪಾಟೀಲ್, ಅರ್ಹತೆ ಇಲ್ಲದವರ ಸಾಲಿನಲ್ಲಿ ನಿಂತು ಸನ್ಮಾನ ಮಾಡಿಸಿಕೊಂಡಿದ್ದೇನೆ. ಸನ್ಮಾನಿತರ ಪಟ್ಟಿಯಲ್ಲಿ ಇದ್ದ ಹೆಸರೇ ಬೇರೆ. ಅಲ್ಲಿ ಸನ್ಮಾನಗೊಂಡವರೇ ಬೇರೆ. ಸಮಾರಂಭದ ಆಯೋಜಕರ
ಈ ತಾರತಮ್ಯ ಹಾಗೂ ಲಾಭಿ ಪ್ರತಿಭಟಿಸುವ ನಿಟ್ಟಿನಲ್ಲಿ ನೂರರ ಸಂಭ್ರಮದ ಸನ್ಮಾನ ಹಿಂದಿರುಗಿಸುತ್ತಿದ್ದೇನೆ ಎಂದು ಹೇಳಿದರು.
'ವೀರೇಶ್ ಚಿತ್ರಮಂದಿರದ ಮಾಲೀಕ ವೀರಣ್ಣ ಕೇವಲ ಮೂವತ್ತು ಮೂವತ್ತೈದು ವರ್ಷಗಳ ಹಿಂದಷ್ಟೆ ಬಂದವರು. ಇವರಿಗೆ ರಾಷ್ಟ್ರಪತಿಗಳಿಂದ ಸನ್ಮಾನ ಮಾಡಿಸಲಾಯಿತು. ಆದರೆ, ಚಿತ್ರೋದ್ಯಮಕ್ಕೆ ಹೆಸರು ತಂದುಕೊಟ್ಟ ಗಿರೀಶ್ ಕಾಸರವಳ್ಳಿ, ಟಿ.ಎಸ್. ನಾಗಾಭರಣ, ಪಿ. ಶೇಷಾದ್ರಿ ಥರದವರು ನಮ್ಮ ಉದ್ಯಮಕ್ಕೆ ಕಾಣದೇ ಹೋಗಿದ್ದು ದುರಂತ. ಯಾರದೋ ಒತ್ತಾಯಕ್ಕೆ, ಶಿಫಾರಸ್ಸಿಗೆ ಮಣಿದು ಸನ್ಮಾನದ ಪಟ್ಟಿ ತಯಾರಿಸುವವರಿಂದ ನಾನು ಸನ್ಮಾನ ಮಾಡಿಸಿಕೊಳ್ಳಬೇಕಿತ್ತೆ? ಎನ್ನುವ ಬೇಸರದಲ್ಲಿ ನೂರರ ಸನ್ಮಾನವನ್ನು ಹಿಂದಿರುಗಿಸಿದ್ದೇನೆ' ಎಂದು ನಿರ್ಮಾಪಕ ಬಸಂತ್‌ಕುಮಾರ್ ಪಾಟೀಲ್ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ವೀರಣ್ಣ ಅವರಿಗೆ ಸನ್ಮಾನ ಮಾಡಲೇ ಬಾರದಿತ್ತು ಎನ್ನುವುದು ನನ್ನ ಅಭಿಪ್ರಾಯವಲ್ಲ ಎಂದ ಬಸಂತ್‌ಕುಮಾರ್ ಪಾಟೀಲ್, ರಾಷ್ಟ್ರಪತಿಗಳಿಂದ ಸನ್ಮಾನ ಮಾಡಿಸಿಕೊಳ್ಳುವಷ್ಟರ ಮಟ್ಟಿಗೆ ವೀರಣ್ಣ ಚಿತ್ರರಂಗಕ್ಕೆ ಕೊಡುಗೆ ನೀಡಿಲ್ಲ. ಈ ಬಗ್ಗೆ ಆಯೋಜಕರಿಗೆ ತಿಳಿವಳಿಕೆ ಇರಬೇಕಿತ್ತು. ಹೀಗಾಗಿ ನನ್ನ ಬೇಸರವನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರ ಬಳಿ ಹೇಳಿಯೇ ನನಗೆ ನೀಡಿರುವ ಸನ್ಮಾನ ಮತ್ತು ನೆನಪಿನ ಕಾಣಿಕೆಯನ್ನು ವಾಪಸ್ ಕೊಟ್ಟಿದ್ದೇನೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.