ಚಿರಂಜೀವಿಯಾಗಿಸದ ಅಭಿಮಾನ

ಬೆಂಗಳೂರು: ವಿವಾಹ ಸಂಭ್ರಮವಿದ್ದ ಮನೆಯಲ್ಲಿ ಸೂತಕದ ಛಾಯೆ...
ಬುಧವಾರ ಬೆಳಗ್ಗೆ ವರೆಗೆ ಆ ಮನೆಯಲ್ಲಿ ಮದುವೆ ಸಂಭ್ರಮ ಕುಣಿದಾಡುತ್ತಿತ್ತು. ಸಡಗರ ಎದ್ದು ಕಾಣುತ್ತಿತ್ತು. ಮನೆಯವರೆಲ್ಲರೂ ವಿವಾಹ ಸಿದ್ಧತೆಯಲ್ಲಿ ತೊಡಗಿದ್ದರು.
ಆದರೆ, ಬುಧವಾರ ಬೆಳಗ್ಗೆ ಕುಟುಂಬದವರು ನಿದ್ದೆಯಿಂದ ಏಳುವ ಮುನ್ನವೇ ಮನೆಯ ಇಡೀ ವಾತಾವರಣ ಬದಲಾಯಿತು. ಅಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ರೋದನ ತಾರಕಕ್ಕೇರಿತ್ತು. ಕಾರಣ, ಅಂಥದ್ದೊಂದು ಸುದ್ದಿ ಬರಸಿಡಿಲಿನಂತೆ ಬಂದೆರಗಿತ್ತು.
ಅಖಲ ಕರ್ನಾಟಕ ಅಣ್ಣಯ್ಯ ಚಿರಂಜೀವಿ ಫ್ಯಾನ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ವೆಂಕಟೇಶ್ ಮನೆ ಅದು.
ವೆಂಕಟೇಶ್ ತಮ್ಮ ಸಹೋದರಿ ಅನಿತಾ ಮಗಳ ಲಗ್ನ ಪತ್ರಿಕೆ ನೀಡಲು ಹೈದ್ರಾಬಾದ್ಗೆ ತೆರಳುತ್ತಿದ್ದರು. ಅನಿತಾ ಮೊದಲ ಪುತ್ರಿ ಅನುಷಾ ಮದುವೆ ನ.15ಕ್ಕೆ ನಿಶ್ಚಯವಾಗಿತ್ತು. ಈ ಹಿನ್ನೆಲೆಯಲ್ಲಿ ವೆಂಕಟೇಶ್ ಮನೆಯಲ್ಲೂ ವಿವಾಹ ಸಿದ್ಧತೆ ಸಾಗಿತ್ತು.
ಅಣ್ಣ-ತಂಗಿ ಇಬ್ಬರೂ ಬಂಧುಗಳಿಗೆ ಮತ್ತು ಚಿರಂಜೀವಿ ಅವರಿಗೆ ವಿವಾಹದ ಆಮಂತ್ರಣ ಪತ್ರಿಕೆ ಕೊಡಲು ಹೈದರಾಬಾದ್ಗೆ ಹೊರಟಿದ್ದರು. ಮನೆಯ ಹತ್ತಿರದಲ್ಲೇ ಇರುವ ಜಬ್ಬಾರ್ ಟ್ರಾವೆಲ್ಸ್ನಿಂದ ಹೊರಟ ಬಸ್ನಲ್ಲಿ ಲಗ್ನ ಪತ್ರಿಕೆ ತೆಗೆದುಕೊಂಡು ಮಂಗಳವಾರ ರಾತ್ರಿ ಹೋಗಿದ್ದರು.
ನನಗೆ ಅಪ್ಪ ಬೇಕು....
'ಏನು ಬೇಕಾದರೂ ಅಪ್ಪ ನನ್ನನ್ನೇ ಕೇಳುತ್ತಿದ್ದರು. ರಾತ್ರಿ ಮಲಗುವಾಗ ಕಾಲು ಒತ್ತಮ್ಮ ಎನ್ನುತ್ತಿದ್ದರು. ಆಗುವುದಿಲ್ಲ ಎಂದರೆ, ಏನಾದರೂ ಆಸೆ ತೋರಿಸಿ ಒತ್ತಿಸಿಕೊಳ್ಳುತ್ತಿದ್ದರು. ಇನ್ನು ಮುಂದೆ ನಾನು ಯಾರ ಕಾಲು ಒತ್ತಲಿ? ನನ್ನನ್ನು ಕೇಳುವವರು ಯಾರು. ನನಗೆ ಅಪ್ಪ ಬೇಕು' ಎಂದು ವೆಂಕಟೇಶ್ ಪುತ್ರಿ ಐಶ್ವರ್ಯ ರೋದಿಸುತ್ತಿದ್ದ ದೃಶ್ಯ ಮನಕಲುಕುವಂತಿತ್ತು.
'ಮಂಗಳವಾರ ರಾತ್ರಿ ಬಸ್ ಹತ್ತುವ ಮುನ್ನ, ಮನೆ ಹತ್ತಿರದ ಹುಡುಗಿಯೊಬ್ಬಳ ಹುಟ್ಟು ಹಬ್ಬಕ್ಕೆ ಆಕೆ ಅಪರಿಚಿತಳಾದರೂ ಕೇಕ್ ಕೊಡಿಸಿದ್ದರು. ಹೈದರಾಬಾದ್ನಿಂದ ಮರಳುವಾಗ ಏನಾದರೂ ಉಡುಗೊರೆ ತಂದು ಕೊಡುವುದಾಗಿ' ಹೇಳಿ ಹೋಗಿದ್ದರು ಎಂದು ಹೇಳುವಾಗ ಐಶ್ವರ್ಯಾಳ ಕಣ್ಣಲ್ಲಿ ನೀರು ತುಂಬಿತ್ತು. ಐಶ್ವರ್ಯಳನ್ನು ಸಮಾಧಾನ ಮಾಡಲು ಕುಟುಂಬ ಸದಸ್ಯರು ಪರದಾಡುತ್ತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


