ನಗರ ಹಸನು ಮಾಡಲು ಉದಾಸೀನ
ಹಾಸನ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಆದರೆ, ನಗರಸಭೆ ಸಾರ್ವಜನಿಕರ ಹಣವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೆ ವ್ಯರ್ಥಮಾಡುತ್ತಿದೆ. ಅನುದಾನ ಸರಿಯಾಗಿ ಬಳಕೆಯಾಗದ ಕಾರಣ, ಹೊಳೆಯಲ್ಲಿ ಹುಣಸೆ ತೊಳೆದಂತಾಗಿದೆ ನಗರಸಭೆಯ ಪರಿಸ್ಥಿತಿ.
ಮೂಲೆ ಸೇರಿದ ಸ್ಪಚ್ಛತಾ ವಾಹನ: ಸ್ಪಚ್ಛತಾ ನಗರಸಭೆಯು ಸ್ಪಚ್ಛತಾ ಕಾರ್ಯಕ್ಕಾಗಿ ಲಕ್ಷಾಂತರ ರು. ವೆಚ್ಚ ಮಾಡಿ ಕಂಟೇನರ್ (ಕಸ ಸಾಗಾಣಿಕೆ ಮಾಡುವ ಲಾರಿಗಳು) ಹೊಸ ವಾಹನಗಳನ್ನು ಖರೀದಿಸಿದ್ದರೂ ಹಲವು ವರ್ಷಗಳಿಂದ ವಾಹನಗಳನ್ನು ಉಪಯೋಗಿಸಿಕೊಳ್ಳದೆ ತುಕ್ಕು ಹಿಡಿದು ಮೂಲೆ ಸೇರುವಂತೆ ಮಾಡಲಾಗಿದೆ. ಇದಕ್ಕಾಗಿ ವೆಚ್ಚ ಮಾಡಿದ ಸಾರ್ವಜನಿಕರ ಹಣ ವ್ಯರ್ಥವಾಗಿದೆ.
ಸ್ವಚ್ಛತೆಗಾಗಿ ನಗರಸಭೆ ಪ್ರತಿ ತಿಂಗಳು ಲಕ್ಷಾಂತರ ರು. ವೆಚ್ಚ ಮಾಡುತ್ತದೆ. ಈ ನಿಟ್ಟಿನಲ್ಲಿ ಒಂದು ವರ್ಷದ ಸ್ವಚ್ಛತೆಗಾಗಿಯೇ ಕೋಟ್ಯಾಂತರ ರು.ಹಣವನ್ನು ಅಯವ್ಯಯದಲ್ಲಿ ಮೀಸಲಿಟ್ಟಿದೆ. ಅದರಂತೆ ನಗರದ ಸ್ವಚ್ಛಗೆ ಸಂಬಂಧಿಸಿದಂತೆ ಟೆಂಡರ್ ಕರೆದು ಗುತ್ತಿಗೆ ನೀಡಲಾಗಿದೆ. ಆದರೆ ಸ್ವಚ್ಛತೆ ಎಂಬುದು ಮಾತ್ರ ಅದೆಕೋ ಮರಿಚಿಕೆಯಾಗಿಯೇ ಉಳಿದಿದೆ.
ಒಂದು ಕಂಟೇನರ್ ಮಾತ್ರ ಚಾಲ್ತಿಯಲ್ಲಿ: ಸ್ವಚ್ಛತೆ ಕಾರ್ಯಕ್ಕೆಂದು ನಗರಸಭೆ ಹಲವು ವರ್ಷಗಳ ಹಿಂದೆಯೇ ಖರೀದಿಸಿದ 5 ಕಂಟೇನರ್ ಲಾರಿಗಳಲ್ಲಿ ಕೇವಲ ಒಂದು ಕಂಟೇನರ್ ಮಾತ್ರ ಚಾಲ್ತಿಯಲ್ಲಿದೆ. ಉಳಿದೆಲ್ಲ ಕಂಟೇನರ್ಗ್ಳು ಚಾಲ್ತಿ ಇಲ್ಲದೆ ಬಿಸಿಲು ಮಳೆಗೆ ಸಿಲುಕಿ ತುಕ್ಕು ಹಿಡಿದು ಮೂಲೆ ಸೇರಿವೆ. ಈ ವಾಹನಗಳಿಗೆ ಹೇಳುವವರು ಹಾಗೂ ಕೇಳುವವರು ಯಾರಿ ಇಲ್ಲದಂತಾಗಿದ್ದು, ಹಳೇ ವಾಹನಗಳನ್ನು ಗುಜರಿಗೆ ಹಾಕುವಂತೆ ಹೊಸ ವಾಹನಗಳನ್ನು ಮೂಲೆಗೆ ತಳ್ಳಲಾಗಿದೆ.
ನಗರಸಭೆ ಆವರಣದಲ್ಲಿ ವಿಶ್ರಾಂತಿ: ವಾಹನಗಳನ್ನು ಖರೀದಿ ಮಾಡಿದ ಒಂದೆರಡು ವರ್ಷಗಳು ಮಾತ್ರ ವಾಹನಗಳನ್ನು ಉಪಯೋಗಿಸಿಕೊಳ್ಳಲಾಗಿದೆ. ಉಳಿದ 4 ವಾಹನಗಳು ಮಾತ್ರ ನಗರಸಭೆ ಆವರಣದಲ್ಲಿ ವಿಶ್ರಾಂತಿ ಪಡೆಯುತ್ತಿದೆ. ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಚಾಲಕರ ಕೊರತೆ ಹಾಗೂ ಇತರೆ ಸಮಸ್ಯೆಗಳಿಂದ ವಾಹನಗಳನ್ನು ನಿಲ್ಲಿಸಲಾಗಿದೆ ಎಂದು ಆಡಳಿತ ವಿಭಾಗವು ಹೇಳುತ್ತಿದೆ. ಆದರೆ 4 ಮಂದಿ ಚಾಲಕರನ್ನು ನೇಮಿಸಿಕೊಳ್ಳಲು ಮೂರ್ನಾಲ್ಕು ವರ್ಷಗಳಿಂದ ನಗರಸಭೆಗೆ ಇನ್ನೂ ಸಾಧ್ಯವಾಗುತ್ತಿಲ್ಲ.
ಜೆಸಿಬಿ ಯಂತ್ರವೂ ಇದೆ: ಜೆಸಿಬಿ ಯಂತ್ರವನ್ನು ಎರಡೂವರೆ ವರ್ಷಗಳ ಹಿಂದೆ ಖರೀದಿ ಮಾಡಲಾಗಿದೆ. ಆದರೆ, ಜೆಸಿಬಿ ಯಂತ್ರವನ್ನು ಸರಿಯಾಗಿ ಸ್ಪಚ್ಛತೆ ಕಾರ್ಯಕ್ಕೆ ಬಳಸಿಕೊಳ್ಳದೆ ತುಕ್ಕು ಹಿಡಿಸುತ್ತಿದ್ದರು. ವಾರ್ಡ್ಗಳ ಸ್ವಚ್ಛತೆ ಕಾರ್ಯಕ್ಕೆ ನಗರಸಭೆ ಸದಸ್ಯರು ಜೆಸಿಪಿ ಯಂತ್ರಗಳನ್ನು ಕಳುಹಿಸುವಂತೆ ಸೂಚಿಸದರೆ ಸಂಬಂಧ ಪಟ್ಟ ಅಧಿಕಾರಿಗಳು ಖರೀಸಿದ ಕೆಲವೇ ದಿನಗಳಲ್ಲಿ ಜೆಸಿಪಿ ಯಂತ್ರವನ್ನು ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ ಕೆಲ ದಿನಗಳ ಕಾಲ ಕೆಟ್ಟು ನಿಂತಿತ್ತು.
ಖರೀಸಿರುವಂತಹ ಜೆಸಿಬಿ ಯಂತ್ರವನ್ನು ರಿಪೇರಿಗೆ ತಂದು ಇತರೆ ಖಾಸಗಿ ವ್ಯಕ್ತಿಗಳಿಂದ ಜೆಸಿಬಿ ಯಂತ್ರಗಳನ್ನು ಪಡೆದುಕೊಂಡು ಕೆಲಸ ಸರಿಯಾಗ ಮಾಡಿಸದೆ ತಿಂಗಳಿಗೆ 8-10ಲಕ್ಷಗಳಷ್ಟು ಹಣವನ್ನು ಬಿಲ್ ಮಾಡಿಕೊಂಡು ಹಣ ಪಡೆದುಕೊಳ್ಳಲಾಗಿತ್ತು. ಆದರೆ, ಇದುವರೆಗೂ ಜೆಸಿಪಿಯನ್ನು ರಿಪೇರಿ ಮಾಡುವಂತಹ ಗೋಜಿಗೆ ನಗರಸಭೆ ಹೋಗಿಲ್ಲ. ಖಾಸಗಿ ಜೆಸಿಬಿ ಯಂತ್ರಕ್ಕೆ ತಿಂಗಳಿಗೆ ಲಕ್ಷಾಂತರ ರು.ಹಣವನ್ನು ವೆಚ್ಚ ಮಾಡುತ್ತಿರುವುದರಿಂದ ನಗರಸಭೆ ಸದಸ್ಯರು ಹಲವು ಬಾರಿ ವಿರೋಧ ವ್ಯಕ್ತಪಡಿಸಿದ್ದರಿಂದ. ಈಗ ಜೆಸಿಬಿ ಯಂತ್ರವನ್ನು ರಿಪೇರಿ ಮಾಡಿ ಬಳಸಲಾಗುತ್ತಿದೆ. ಆದರೆ ಈಗಲೂ ಆ ಯಂತ್ರ ಕುಂಟುತ್ತಾ ಕುಂಟುತ್ತಾ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ.
ಸರಿಯಾದ ನಿರ್ವಹಣೆ ಇಲ್ಲ: ಹೊಸದಾಗಿ ಖರೀದಿ ಮಾಡಿದ ಯಂತ್ರಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಮೂಲೆ ಸೇರಿರುವ ಕಂಟೇನರ್ಗಳನ್ನು ಸರಿಪಡಿಸಿ ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳುವಂತಹ ಗೋಚಿಗೆ ನಗರಸಭೆ ಇನ್ನೂ ಮುಂದಾಗಿಲ್ಲ.
ಸಿಬ್ಬಂದಿಗಂತೂ ಕಾಳಜಿಯೇ ಇಲ್ಲ: ನಗರಸಭೆಯ ದಿವ್ಯ ನಿರ್ಲಕ್ಷ್ಯ ಹಾಗೂ ಅವೈಜ್ಞಾನಿಕ ನೀತಿಯಿಂದ ಖರೀಸಿದಂತಹ ವಾಹನಗಳು ಜಡ್ಡು ಹಿಡಿದಿವೆ. ವಾಹನಗಳ ಮೇಲೆ ಗಿಡಗಂಟಿಗಳು ಬೆಳೆದು ನಶಿಸಿಹೋಗುತ್ತಿದ್ದರೂ ಯಾರಿಗೂ ಇದರ ಬಗ್ಗೆ ಕಾಳಜಿ ಇಲ್ಲ. ವಾಹನಗಳ ಚಕ್ರಗಳು ಇನ್ನೂ ಸವಿಯದೆ ಹೊಸ ಚಕ್ರದಂತೆ ಇದೆ. ವಾಹನಗಳ ಚಕ್ರವನ್ನು ನೋಡಿ ಎಷ್ಟು ದಿನಗಳು ವಾಹನವನ್ನು ಚಲಾಯಿಸಲಾಗಿದೆ ಎಂದು ಸಾರ್ವಜನಿಕರು ಊಹಿಸಬಹುದಾಗಿದೆ.
ಖಾಸಗಿ ವ್ಯಕ್ತಿಗಳಿಂದ ವಾಹನಗಳನ್ನು ಬಾಡಿಗೆಗೆ ತೆಗೆದುಕೊಂಡು ನಗರಸಭೆಯ ವಾಹನಗಳನ್ನು ಮೂಲೆಗೆ ತಳ್ಳಿ ಸಾರ್ವಜನಿಕರ ಹಣಕ್ಕೆ ಕತ್ತರಿ ಹಾಕಲಾಗುತ್ತಿದೆ.
- ಪಿ.ರವಿಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

