ಪ್ರಧಾನಿ ಕೆಟ್ಟ ಡಾಕ್ಟರ್
ಅಂಬಿಕಾಪುರ(ಛತ್ತೀಸ್ಗಡ): ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿಸಲಾಗಿರುವ ಮೋದಿ ಅವರಿಗೆ ಶನಿವಾರ 'ಕೆಂಪುಕೋಟೆ'ಯಲ್ಲಿ ಭಾಷಣ ಮಾಡುವ ಅದೃಷ್ಟ ಒದಗಿ ಬಂದಿತ್ತು. ಆದರೆ ಇದು ನಿಜವಾದ ಕೆಂಪುಕೋಟೆಯಲ್ಲ, ಅದರ ಪಡಿಯಚ್ಚು ಮಾತ್ರ!
ಈ ವರ್ಷಾಂತ್ಯದಲ್ಲಿ ಛತ್ತೀಸ್ಗಡದ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ಪ್ರಚಾರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನಿ ಸಿಂಗ್ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಛತ್ತೀಸ್ಗಡ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಚಿಕಿತ್ಸೆ ನೀಡುವ ಡಾಕ್ಟರ್ ಆದರೆ, ಪ್ರಧಾನಿ ಸಿಂಗ್ ಅವರು ಡಾಕ್ಟರೇಟ್ ಪಡೆಯುವ ಮೂಲಕ 'ಡಾ.' ಎನ್ನಿಸಿಕೊಂಡಿದ್ದಾರೆ. ಆದರೆ ಇವರಿಬ್ಬರಲ್ಲೂ ಭಾರಿ ವ್ಯತ್ಯಾಸವಿದೆ. ರಮಣ್ ಸಿಂಗ್ ಅವರು ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ನೀಡಿದ್ದರೆ, ಸಿಂಗ್ ಅವರು, ರುಪಾಯಿಯನ್ನು ಐಸಿಯುವಿನಲ್ಲಿ ಸೇರಿಸಿಬಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು. ರಮಣ್ ಸಿಂಗ್ ಅವರು ದೆಹಲಿಯ ಯಾವುದೇ ಅನುದಾನ ಕೇಳದೇ ರಾಜ್ಯವನ್ನು ಅಭಿವೃದ್ಧಿಗೊಳಿಸಿದ್ದಾರೆ ಎಂದು ಅವರನ್ನು ಹೊಗಳಿದರು.
ಈ ಹಿಂದೆ ವಾಜಪೇಯಿ ಸರ್ಕಾರವಿದ್ದಾಗ ಮೂರು ಹೊಸ ರಾಜ್ಯಗಳನ್ನು ರಚಿಸಲಾಯಿತು. ಆಗ ಎಲ್ಲರಲ್ಲೂ ಖುಷಿ ಇತ್ತು. ಆದರೆ ಈಗ ತೆಲಂಗಾಣ ರಚನೆಯಲ್ಲಿ ಬರೀ ಕರ್ಫ್ಯೂ, ಪ್ರತಿಭಟನೆಗಳೇ ಆಗುತ್ತಿವೆ. ಇದು ಕಾಂಗ್ರೆಸ್ನ ಆಡಳಿತದ ವೈಖರಿ ಎಂದರು.
ಇತ್ತೀಚೆಗಷ್ಟೇ ರಾಹುಲ್ ಗಾಂಧಿ ಅವರು ಬಡತನ ಕೇವಲ ಮನೋಭಾವ ಎಂದಿದ್ದರು. ಈ ಮೂಲಕ ಬಡವರನ್ನು ಅವರು ಹಂಗಿಸಿದ್ದರು. ಒಂದು ವೇಳೆ ಇಂದಿರಾಗಾಂಧಿ ಅವರು ಇಂದು ಬದುಕಿದ್ದರೆ, ಅವರು ಮನಸ್ಸಿಗೆ ತುಂಬಾ ನೋವು ಮಾಡಿಕೊಳ್ಳುತ್ತಿದ್ದರು ಎಂದು ಮೋದಿ ರಾಹುಲ್ ಕುರಿತು ಲೇವಡಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

