ಪ್ರಧಾನ ಸುದ್ದಿ

ಪಾಕ್ ಕೈಲಿ ಐಎಂ ಸೂತ್ರ!

Published On :

ನವದೆಹಲಿ: ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆ ಭಾರತದಲ್ಲೇ ಸ್ಥಾಪಿತವಾಗಿ, ಇಲ್ಲಿಂದಲೇ ಕಾರ್ಯನಿರ್ವಹಿಸುತ್ತಿದೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಈ ಸಂಘಟನೆಯನ್ನು ಹುಟ್ಟುಹಾಕಿದ್ದು ಬೇರ್ಯಾರೂ ಅಲ್ಲ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ!
ಇಂತಹುದೊಂದು ಆತಂಕಕಾರಿ ಹಾಗೂ ಅಚ್ಚರಿಯ ಸಂಗತಿಯನ್ನು ಹೊರಹಾಕಿದ್ದು ಉಗ್ರ ಯಾಸೀನ್ ಭಟ್ಕಳ್. ನಿಜವಾಗಿ ಇಂಡಿಯನ್ ಮುಜಾಹಿದೀನ್ (ಐಎಂ) ಸಂಘಟನೆ ಸ್ಥಾಪಿಸಿದ್ದು ಭಾರತೀಯರಲ್ಲ. ಇದನ್ನು ರಚಿಸಿರುವುದು, ನಿರ್ವಹಿಸುತ್ತಿರುವುದು ಪಾಕ್ ಐಎಸ್‌ಐ.
ಐಎಸ್‌ಐ ತಂತ್ರವಿದು: ದೇಶದಲ್ಲಿ ಪ್ರತಿಯೊಂದು ಉಗ್ರ ಕೃತ್ಯ ಸಂಭವಿಸಿದಾಗಲೂ ಅದನ್ನು ನಡೆಸಿರುವುದು ಭಾರತದೊಳಗೇ ಹುಟ್ಟಿಕೊಂಡ ಸಂಘಟನೆ ಎಂಬ ಭಾವನೆ ಎಲ್ಲರಲ್ಲೂ ಬರುತ್ತದೆ.
ಇಂತಹ ಭಾವನೆ ಬರಬೇಕೆಂದೇ ಐಎಸ್‌ಐ ಈ ತಂತ್ರ ಮಾಡಿದೆ. ಪಾಕಿಸ್ತಾನವು ಇಂಡಿಯನ್ ಮುಜಾಹಿದೀನ್ ಸಂಘಟನೆಗೆ ಬೇಕಾದ ಹಣ ಪೂರೈಸಿ, ಅದನ್ನು ನಿಯಂತ್ರಿಸುತ್ತಿದೆ ಎಂಬ ವಿಚಾರ ಯಾರಿಗೂ ಗೊತ್ತಾಗಬಾರದು. ಆಗ ಉಗ್ರಕೃತ್ಯಗಳಲ್ಲಿ ಪಾಕ್ ಕೈವಾಡವಿರುವ ಸುಳಿವೇ ಸಿಗುವುದಿಲ್ಲ ಎಂಬುದು ಯೋಚನೆ.    
ಈ ರೀತಿಯಾಗಿ ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ 'ಪಾಪಿ'ಸ್ತಾನ.  ಭಟ್ಕಳ್ ತನಿಖೆಯಿಂದ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಈ ಎಲ್ಲ ವಿಚಾರಗಳು ಒಂದೊಂದಾಗಿ ಗೊತ್ತಾಗುತ್ತಿದೆ.
ಐಎಂನ ಆಪರೇಷನ್‌ಗಳು ನಾವಂದುಕೊಂಡಿದ್ದಕ್ಕಿಂತಲೂ ದೊಡ್ಡ ಪ್ರಮಾಣದ್ದು ಎಂಬುದು ಈಗ ಎನ್‌ಐಎಗೆ ತಿಳಿಯುತ್ತಿದೆ. ಭಾರತದಲ್ಲಿರುವ ವಿದ್ಯಾವಂತ ಯುವಕರ ಮನವೊಲಿಸಿ ಜಿಹಾತ್‌ನತ್ತ ಆಕರ್ಷಿತರಾಗುವಂತೆ ಮಾಡಲು ಯಾಸೀನ್ ಭಟ್ಕಳ್‌ಗೆ ಐಎಸ್‌ಐ ಪರವಾಗಿ ಇಕ್ಬಾಲ್ ಭಟ್ಕಳ್ ಸೂಚನೆ ನೀಡುತ್ತಾನೆ. ಅದರಂತೆ ಇಲ್ಲಿನ ಯುವಕರನ್ನು ಉಗ್ರರನ್ನಾಗಿ ಬದಲಾಯಿಸಲಾಗುತ್ತದೆ. 2007ರ ಹೈದರಾಬಾದ್ ಸ್ಫೋಟ ನಡೆಸಲು ಅಕ್ಬರ್ ಇಸ್ಮಾಯಿಲ್ ಚೌಧರಿ ಹಾಗೂ ಮೊಹ್ಸಿನ್ ಚೌಧರಿಗೆ ಚಿಕ್ಕಮಗಳೂರಿನಲ್ಲಿ ತರಬೇತಿ ನೀಡಿದವನೇ ನಾನು ಎಂದು ಸ್ವತಃ ಯಾಸೀನ್ ಭಟ್ಕಳ್ ಒಪ್ಪಿಕೊಂಡಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.