ಎನ್ಡಿಎಗೆ ಟಿಡಿಪಿ ಬಲ

-ಬರೋಬ್ಬರಿ ಹನ್ನೆರಡು ವರ್ಷಗಳ ಬಳಿಕ ಬಿಜೆಪಿ ಜತೆಗೆ ಟಿಡಿಪಿ ಮೈತ್ರಿಗೆ ಒಪ್ಪಿದೆ. ದೇಶದಲ್ಲಿ ಎದ್ದಿರುವ ಮೋದಿ ಅಲೆ ಬಳಸಿಕೊಂಡು ಆಂಧ್ರಪ್ರದೇಶದಲ್ಲಿ ತನ್ನ ಪ್ರಭಾವ ವೃದ್ಧಿಸಿಕೊಳ್ಳಲು ಬಿಜೆಪಿ ಮುಂದಾಗಿದೆ.
ಹೈದರಾಬಾದ್: ದಕ್ಷಿಣ ಭಾರತದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎಗೆ ಭಾರಿ ಬಲ ಬಂದಿದೆ.
ಆಂಧ್ರ ಪ್ರದೇಶದ ಪ್ರಮುಖ ಪಕ್ಷ, ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಾರ್ಟಿ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿವೆ.
ಈ ಕುರಿತಂತೆ ಭಾನುವಾರ ಮಧ್ಯಾಹ್ಮ ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಮತ್ತು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅಧಿಕೃತವಾಗಿ ಪ್ರಕಟಿಸಿದರು.
ಈ ಎರಡೂ ಪಕ್ಷಗಳ ನಡುವೆ ಮೈತ್ರಿ ಗಟ್ಟಿಯಾಗಲು ಕಾರಣ, ಶಿರೋಮಣಿ ಅಕಾಲಿ ದಳದ ಸಂಸದ ನರೇಶ್ ಗುಜ್ರಾಲ್. ಇವರು ಹೈದರಾಬಾದ್ಗೆ ಆಗಮಿಸಿ ಎರಡೂ ಪಕ್ಷಗಳ ನಾಯಕರ ಜೊತೆ ಮಾತುಕತೆ ನಡೆಸಿದ್ದರು. ಬಳಿಕವಷ್ಟೇ ಸ್ಥಾನ ಹಂಚಿಕೆ ವಿಚಾರದಲ್ಲಿ ತಲೆ ದೋರಿದ್ದ ಸಮಸ್ಯೆ ಬಗೆಹರಿದಿತ್ತು.
ಎರಡೂ ಪಕ್ಷಗಳ ನಡುವಿನ ಮೈತ್ರಿಯನ್ನು ಚಂದ್ರಬಾಬುನಾಯ್ಡು 'ಲಕಿ ಒನ್' ಎಂದು ಬಣ್ಣಿಸಿದರು. ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿಯತ್ತ ಸಾಗಲಿದೆ. ಎಲ್ಲಾ ಜಾತಿ, ಮತ, ಧರ್ಮಗಳ ಜನರೂ ಮೋದಿಯನ್ನು ಬೆಂಬಲಿಸಲಿದ್ದಾರೆ ಎಂದು ನಾಯ್ಡು ಹೇಳಿದರು.
ಪ್ರಕಾಶ್ ಜಾವಡೇಕರ್ ಮಾತನಾಡಿ, ಬೆಳಗ್ಗೆಯಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತು ಉಪಾಧ್ಯಕ್ಷ ಅರುಣ್ ಜೇಟ್ಲಿ ಚಂದ್ರಬಾಬು ನಾಯ್ಡು ಜೊತೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ನಮಗೂ ನಾಯ್ಡು ಜೊತೆ ಮೈತ್ರಿ ಮಾಡಿಕೊಳ್ಳುತ್ತಿರುವುದಕ್ಕೆ ಸಂತಸವಾಗಿದೆ. ದೇಶ ಕಷ್ಟದಲ್ಲಿದ್ದಾಗಲೆಲ್ಲಾ ನಾಯ್ಡು ಕೈ ಹಿಡಿದಿದ್ದಾರೆ ಎಂದು ಹೇಳಿದ್ದಾರೆ.
ಜಾವಡೇಕರ್ ಮತ್ತು ನಾಯ್ಡು ಮೈತ್ರಿ ಬಗ್ಗೆ ಪ್ರಕಟಿಸುವಾಗ ಗುಜ್ರಾಲ್ ಕೂಡ ಇದ್ದರು.
ಶಾ ನಿಷೇಧಿಸಿ
ಉತ್ತರ ಪ್ರದೇಶದ ಮುಜಾಫರನಗರದಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಅಮಿತ್ ಶಾ ವಿರುದ್ಧ ಆಯೋಗ ಕಠಿಣ ಕ್ರಮ ತೆಗೆದುಕೊಳ್ಳಬೇಕು.ಅವರನ್ನು ಪ್ರಚಾರದಿಂದಲೇ ನಿಷೇಧಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ನಾಯಕ ಬೇಣಿ ಪ್ರಸಾದ್ ವರ್ಮಾ ಆಗ್ರಹಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಎಸ್ಪಿ ಮತ್ತು ಬಿಜೆಪಿ ಒಂದಾಗಿವೆ. ಇವು ಧರ್ಮಗಳನ್ನು ಒಡೆದು ಮತ ಗಳಿಕೆಗೆ ಯತ್ನಿಸುತ್ತಿವೆ ಎಂದು ಹೇಳಿದ್ದಾರೆ.
ಎರಡೂ ಹೊಸ ರಾಜ್ಯಗಳಲ್ಲಿ ಮೈತ್ರಿ
ಸೀಮಾಂಧ್ರ ಭಾಗದಲ್ಲಿ ಬಿಜೆಪಿಗೆ 5 ಲೋಕಸಭಾ ಕ್ಷೇತ್ರ, 15 ವಿಧಾನಸಭಾ ಕ್ಷೇತ್ರಗಳು ಮತ್ತು ತೆಲಂಗಾಣ ಭಾಗದಲ್ಲಿ 8 ಲೋಕಸಭಾ ಮತ್ತು 47 ವಿಧಾನಸಭಾ ಕ್ಷೇತ್ರಗಳನ್ನು ಬಿಟ್ಟುಕೊಡಲು ಟಿಡಿಪಿ ನಿರ್ಧರಿಸಿದೆ. ಹೀಗಾಗಿ ಈ ಬಾರಿ ಎರಡೂ ಪಕ್ಷಗಳು ಒಟ್ಟಾಗಿಯೇ ಚುನಾವಣೆ ಎದುರಿಸಲಿವೆ.
ಸೀಮಾಂಧ್ರ (ಬಿಜೆಪಿ ಪಾಲು)
30ಏಪ್ರಿಲ್ ಮತದಾನ
175ಒಟ್ಟು ವಿಧಾನಸಭಾ ಕ್ಷೇತ್ರ
05 ಲೋಕಸಭಾ ಕ್ಷೇತ್ರ
15ವಿಧಾನಸಭಾ ಕ್ಷೇತ್ರ
25ಒಟ್ಟು ಲೋಕಸಭಾ ಕ್ಷೇತ್ರ
ಒಪ್ಪಂದವೇನು?
ತೆಲಂಗಾಣ (ಬಿಜೆಪಿ ಪಾಲು)
07ಮೇ ಮತದಾನ
119ಒಟ್ಟು ವಿಧಾನಸಭಾ ಕ್ಷೇತ್ರ
08ಲೋಕಸಭಾ ಕ್ಷೇತ್ರ
47ವಿಧಾನಸಭಾ ಕ್ಷೇತ್ರ
17ಒಟ್ಟು ಲೋಕಸಭಾ ಕ್ಷೇತ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


