ಪ್ರಧಾನ ಸುದ್ದಿ

ಬೇಹುಗಾರಿಕೆಯ ಹಳೇ ರಾಗಾ

ಬೇಹುಗಾರಿಕೆಯ ಹಳೇ ರಾಗಾ
Published On :

ಬೆಂಗಳೂರು/ಶಿರಸಿ/ರಾಯಚೂರು
ರಾಜ್ಯದ ಮೂರು ಕಡೆಗಳಲ್ಲಿ ಪ್ರಚಾರ ನಡೆಸಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ,  ನರೇಂದ್ರ ಮೋದಿ ಅವರು ನಡೆಸಿದ್ದಾರೆ ಎನ್ನಲಾದ ಬೇಹುಗಾರಿಕೆ ಪ್ರಕರಣವನ್ನು ಮತ್ತೆ ಪ್ರಸ್ತಾಪಿಸಿದ್ದಾರೆ. ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಾತನಾಡಿದ ರಾಹುಲ್, ಬಿಜೆಪಿಯವರು ಮಹಿಳೆಗೆ ರಕ್ಷಣೆ ಕೊಡುತ್ತೇವೆ ಎಂದು ಜಾಹೀರಾತು ನೀಡುತ್ತಾರೆ. ಆದರೆ ಗುಜರಾತ್‌ನಲ್ಲಿ ಮಹಿಳೆ ಮೇಲೆ ಬೇಹುಗಾರಿಕೆ ನಡೆಸುತ್ತಾರೆ. ಮಹಿಳೆಯರ ಮೇಲೆ ಗೌರವ ಮತ್ತು ಭರವಸೆ ಇಲ್ಲದವರು ಮಾತ್ರ ಇಂಥ ಕೃತ್ಯ ಎಸಗುತ್ತಾರೆ ಎಂದು ಮೋದಿ ಹೆಸರು ಹೇಳದೆ ವ್ಯಂಗ್ಯವಾಡಿದರು. ಕರ್ನಾಟಕದಲ್ಲಿ ಸಚಿವರೊಬ್ಬರು ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ರಾಜಿನಾಮೆ ನೀಡಿದ್ದರು. ಅದೇ ಸರ್ಕಾರದ ಸಚಿವರು ಅಧಿವೇಶನದಲ್ಲಿ ನೀಲಿಚಿತ್ರ ನೋಡಿದ್ದರು. ಇಂಥವರಿಂದ ಮಹಿಳಾ ಸಶಕ್ತೀಕರಣ ಸಾಧ್ಯವೇ ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.