ಫಲಿತಾಂಶದ ಹೊತ್ತಿಗೇ ಶಾಕ್
ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬರುವ ಹೊತ್ತಿಗೆ ರಾಜ್ಯದಲ್ಲಿ ವಿದ್ಯುತ್ ದರ ಪ್ರತಿ ಯೂನಿಟ್ಗೆ 66 ಪೈಸೆ ಏರಿಕೆಯಾಗುವ ಸಾಧ್ಯತೆ ಇದೆ.
ರಾಜ್ಯ ವಿದ್ಯುತ್ ನಿಯಂತ್ರಣಾ ಆಯೋಗ ಅನುಮತಿ ನೀಡಿದರೆ ಮೇ ಎರಡನೇ ವಾರ ಹೊಸ ದರ ಜಾರಿ.
ರಾಜ್ಯದಲ್ಲಿ ಯೂನಿಟ್ಗೆ 5.36 ಪೈಸೆ ದರ ನಿಗದಿಯಾಗಿದ್ದು, 66 ಪೈಸೆ ಏರಿಸಿದರೆ ಯೂನಿಟ್ಗೆ 6.2 ನಿಗದಿಯಾಗಲಿದೆ. ಆದರೆ ಇದರಿಂದ ನಿರಂತರ ಜ್ಯೋತಿ, ಕುಟೀರ ಜ್ಯೋತಿ ಹಾಗೂ ಕೈಗಾರಿಕಾ ಪಂಪ್ಸೆಟ್ಗಳಿಗೆ ವಿನಾಯಿತಿ ಇದೆ. ಲೋಡ್ಶೆಡ್ಡಿಂಗ್ ಹೆಚ್ಚುತ್ತಿರುವಾಗಲೇ ಎಸ್ಕಾಂಗಳು ದರ ಪರಿಷ್ಕರಣೆಗೆ ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಆಯೋಗ ಜನಾಭಿಪ್ರಾಯ ಸಂಗ್ರಹ ಆರಂಭಿಸಿದೆ.
ಜನಾಭಿಪ್ರಾಯ ಸಂಗ್ರಹ ಏ. 30ವರೆಗೂ ನಡೆಯಲಿದ್ದು, ಇದನ್ನಾಧರಿಸಿ ಆಯೋಗ ತೀರ್ಮಾನ ತೆಗೆದುಕೊಳ್ಳಲಿದೆ. ಎಸ್ಕಾಂಗಳ ಬಳಕೆ, ಬೇಡಿಕೆಗಳಿಗೆ ಅನುಗುಣದರ ಏರಿಕೆ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದು ಆಯೋಗದ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ ತಿಳಿಸಿದರು.
ಆರ್ಟಿಪಿಎಸ್ ಸ್ಥಗಿತವಾದಾಗ ಬೆಸ್ಕಾಂ 2,868 ಕೋಟಿಯ ವಿದ್ಯುತ್ತನ್ನು ಉಡುಪಿ ಸ್ಥಾವರದಿಂದ ಖರೀದಿಸಿದೆ. ಇದಕ್ಕೆ ಅನುಮತಿ ಪಡೆದಿಲ್ಲ. ಇದರಿಂದ ಆರ್ಥಿಕ ಅಶಿಸ್ತು ಹೆಚ್ಚಾಗಿದ್ದು, ಇದನ್ನು ಸರಿಪಡಿಸದೆ ದರ ಹೆಚ್ಚಳ ಬೇಡ ಎಂದರು ಸಣ್ಣ ಕೈಗಾರಿಕೆ ಸಂಘದ ಕಾರ್ಯದರ್ಶಿ ರಾಜಗೋಪಾಲ್. ಎಫ್ಕೆಸಿಸಿಐನ ಪ್ರಭು ಮಾತನಾಡಿ, ಸಂಕಷ್ಟದಲ್ಲಿ ದರ ಏರಿಕೆಗೆ ಅವಕಾಶ ನೀಡಬಾರದು. ರೈತರು ಮತ್ತು ಕೈಗಾರಿಕೋದ್ಯಮಿಗಳ ಹಿತರಕ್ಷಣೆ ಮಾಡುವ ಸಲುವಾಗಿ ದರ ಏರಿಕೆ ಕೈಬಿಡಬೇಕೆಂದು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

