ಗೋ ಏರ್ ಟಿಕೆಟ್ ದರದಲ್ಲಿ ಕಡಿತ

ವಾಡಿಯಾ ಗ್ರೂಪ್‌ನ ಬಜೆಟ್ ಪರ ವಿಮಾನ ಗೋ ಏರ್ ಟಿಕೆಟ್ ದರದಲ್ಲಿ ಕಡಿತ ನೀಡುವುದಾಗಿ ಭಾನುವಾರ ಘೋಷಿಸಿದ್ದು...
ಗೋ ಏರ್  ವಿಮಾನ
ಗೋ ಏರ್ ವಿಮಾನ

ನವದೆಹಲಿ: ವಾಡಿಯಾ ಗ್ರೂಪ್‌ನ ಬಜೆಟ್ ಪರ ವಿಮಾನ ಗೋ ಏರ್ ಟಿಕೆಟ್ ದರದಲ್ಲಿ ಕಡಿತ ನೀಡುವುದಾಗಿ ಭಾನುವಾರ ಘೋಷಿಸಿದ್ದು,  1.7 ಮಿಲಿಯನ್ ಸೀಟುಗಳಲ್ಲಿ ಡಿಸ್ಕೌಂಟ್ ನೀಡಿದೆ.

ಮುಂದಿನ ವರ್ಷ ಪ್ರಯಾಣ ಮಾಡುವವರಿಗೆ ಅತೀ ಕಡಿಮೆ ಟಿಕೆಟ್ ದರ ರು. 1,469 ಆಗಿದ್ದು, ಇದಕ್ಕಾಗಿ 5 ದಿನಗಳ  ಬುಕ್ಕಿಂಗ್ ಅವಧಿ ಸೋಮವಾರ ಆರಂಭವಾಗಿದೆ.

ಜನವರಿ 1 ರಿಂದ ಮಾರ್ಚ್ 31ರ ನಡುವಿನ ಅವಧಿಯಲ್ಲಿ ಪ್ರಯಾಣ ಮಾಡುವವರಿಗೆ ಗೋ ಏರ್ ನೆಟ್ವರ್ಕ್‌ನಲ್ಲಿರುವ ವಿಮಾನದಲ್ಲಿ ಈ ವಿಶೇಷ ಆಫರ್ ಲಭ್ಯವಾಗಲಿದೆ.

ಈ ಆಫರ್ ಬಯಸುವವರು ಡಿಸೆಂಬರ್ 21 ಮತ್ತು ಡಿಸೆಂಬರ್ 25ರ ನಡುವೆ ಬುಕ್ಕಿಂಗ್ ಮಾಡಬೇಕೆಂದು ಗೋಏರ್ ವಿಮಾನಯಾನ ಸಂಸ್ಥೆ ಹೇಳಿದೆ.

ಜನವರಿ-ಮಾರ್ಚ್ ತೈಮಾಸಿಕದಲ್ಲಿನ ಪ್ರಯಾಣವನ್ನು ಸುಗಮಗೊಳಿಸುವ ಸಲುವಾಗಿ ಬೆಲೆ ಕಡಿತ ನೀಡಲಾಗಿದೆ ಎಂದು ಗೋಏರ್ ಚೀಫ್ ಎಕ್ಸಿಕ್ಯೂಟಿವ್ ಜಿಯಾರ್‌ಜಿಯೋ ಡಿ ರೋನಿ ಹೇಳಿದ್ದಾರೆ.

ಮುಂಬೈ ಮೂಲದ ಈ ವಿಮಾನಯಾನ ಸಂಸ್ಥೆ ದೇಶಾದ್ಯಂತ 22 ಸ್ಥಳಗಳಲ್ಲಿ ಸಂಚಾರ ವ್ಯವಸ್ಥೆ ಕಲ್ಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com