ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ; ಪಿಕೆ ನಿಷೇಧಕ್ಕೆ ಮನವಿ

ಅಮಿರ್ ಖಾನ್ ನಟನೆಯ ಪಿಕೆ ಸಿನಿಮಾ ಹಿಂದೂ ಧರ್ಮದವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ...
ಪಿಕೆ ಚಿತ್ರದ ಪೋಸ್ಟರ್
ಪಿಕೆ ಚಿತ್ರದ ಪೋಸ್ಟರ್

ಪಣಜಿ: ಅಮಿರ್ ಖಾನ್ ನಟನೆಯ ಪಿಕೆ ಸಿನಿಮಾ ಹಿಂದೂ ಧರ್ಮದವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಹಿಂದೂ ಜನಜಾಗೃತಿ ಸಮಿತಿ (ಹೆಚ್‌ಜೆಎಸ್) ಪಿಕೆ ಸಿನಿಮಾ ನಿಷೇಧಿಸುವಂತೆ ಪೊಲೀಸರಿಗೆ ದೂರು ನೀಡಿದೆ.

ಪಣಜಿಯ ಮೀನಾ ಕಾಮತ್ ಅವರ ನೇತೃತ್ವದಲ್ಲಿ ಹೆಚ್‌ಜೆಎಸ್ ಈ ನಡೆ ಸ್ವೀಕರಿಸಿದೆ.

ರಾಜ್ ಕುಮಾರ್ ಹಿರಾನಿ ನಿರ್ದೇಶಿಸಿದ ಪಿಕೆ ಚಿತ್ರದಲ್ಲಿ ಅಮಿರ್ ಖಾನ್ ಮತ್ತು ಅನುಷ್ಕಾ ಶರ್ಮಾ ಪ್ರಮುಖ ಪಾತ್ರವಹಿಸಿದ್ದಾರೆ.

ಈ ಸಿನಿಮಾ ಲವ್ ಜಿಹಾದ್‌ನ್ನು ಪ್ರೋತ್ಸಾಹಿಸುತ್ತಿದ್ದು, ಪಾಕಿಸ್ತಾನಿ ಮುಸ್ಲಿಂ ಯುವಕನ್ನು ವೈಭವೀಕರಿಸಿ ಹೇಳಲಾಗಿದೆ. ಇಂಥಾ ಕಥಾವಸ್ತುಗಳು ಹಿಂದೂಗಳ ಮನಸ್ಸಲ್ಲಿ ಗೊಂದಲ ಸೃಷ್ಟಿಸುತ್ತವೆ. ಆದ್ದರಿಂದ ಪ್ರಸ್ತುತ ಸಿನಿಮಾದ ವಿರುದ್ಧ ಅಪರಾಧ ಕಾಯ್ದೆ 153 ಎ, 295 ಎ ಮತ್ತು 34ರಡಿಯಲ್ಲಿ ಕೇಸು ದಾಖಲಿಸಿ, ಶೀಘ್ರವೇ ಸಿನಿಮಾವನ್ನು ನಿಷೇಧಿಸಬೇಕೆಂದು ಸಂಘಟನೆ ತಮ್ಮ ದೂರಲ್ಲಿ ಒತ್ತಾಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com