ಅತೀ ಹೆಚ್ಚು ತಪ್ಪುಬಳಕೆಯಾದ ಪದ 'ಜಿಹಾದ್': ಸಲ್ಮಾನ್ ಖಾನ್

ಜಿಹಾದ್ ಹೆಸರಲ್ಲಿ ಮುಗ್ಧ ಮನುಷ್ಯರನ್ನು ಸಾಯಿಸಲಾಗುತ್ತದೆ ಎಂದು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್...
ಸಲ್ಮಾನ್ ಖಾನ್
ಸಲ್ಮಾನ್ ಖಾನ್
Updated on: 

ಮುಂಬೈ: ಜಿಹಾದ್ ಹೆಸರಲ್ಲಿ ಮುಗ್ಧ ಮನುಷ್ಯರನ್ನು ಸಾಯಿಸಲಾಗುತ್ತದೆ ಎಂದು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ಸಲ್ಲು, ಜಿಹಾದ್ ಅಂದ್ರೆ ಹೋರಾಟ. ಒಳ್ಳೆಯದಕ್ಕಾಗಿ ಹೋರಾಟ ಮಾಡಬೇಕು. ಪ್ರಸ್ತುತ ಕಾಲದಲ್ಲಿ ಅತೀ ಹೆಚ್ಚು ತಪ್ಪು ಬಳಕೆಗೊಳಗಾದ ಪದ ಜಿಹಾದ್. ಜನರು ಅರಾಜಕತಾವಾದವನ್ನೇ ಜಿಹಾದ್ ಎಂದು ಗ್ರಹಿಸಿದ್ದಾರೆ.


ಮಹಿಳೆಯರು ಪುರುಷರಿಗೆ ಸಮಾನರು, ಅವರಿಗೆ ಸಮಾನವಾದ ಹಕ್ಕು ಇದೆ. ಧರ್ಮದ ಹೆಸರಲ್ಲಿ ಜನರನ್ನು ಹತ್ಯೆಗೈಯ್ಯುವವರು ಧಾರ್ಮಿಕ ಗ್ರಂಥಗಳನ್ನು ಓದಿರಲ್ಲ ಎಂದು ಸಲ್ಮಾನ್ ಖಾನ್ ಟ್ವೀಟರ್‌ನಲ್ಲಿ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com