ತಾಜ್ ಮಹಲ್ ವೀಕ್ಷಣೆಗೆ ಆನ್‌ಲೈನ್ ಬುಕಿಂಗ್

ಇನ್ಮುಂದೆ ಆಗ್ರಾದಲ್ಲಿರುವ ತಾಜ್‌ಮಹಲ್ ವೀಕ್ಷಿಸಲು ಪ್ರವಾಸಿಗರು ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಲು ಕಾಯಬೇಕಿಲ್ಲ...
ತಾಜ್‌ಮಹಲ್
ತಾಜ್‌ಮಹಲ್

ಆಗ್ರಾ: ಇನ್ಮುಂದೆ ಆಗ್ರಾದಲ್ಲಿರುವ ತಾಜ್‌ಮಹಲ್ ವೀಕ್ಷಿಸಲು ಪ್ರವಾಸಿಗರು ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಲು ಕಾಯಬೇಕಿಲ್ಲ. ಯಾಕೆಂದರೆ ಶನಿವಾರದಿಂದ ಇಲ್ಲಿ ಟಿಕೆಟ್‌ಗಾಗಿ ಆನ್‌ಲೈನ್ ಬುಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಪ್ರವಾಸೋದ್ಯಮ ಇಲಾಖೆ ಆನ್ ಲೈನ್ ಬುಕಿಂಗ್‌ಗಾಗಿ ವೆಬ್‌ಸೈಟ್‌ನ್ನು ಪ್ರಾರಂಭಿಸಿದೆ.

ಇದಕ್ಕಾಗಿ ತಾಜ್‌ನ ಪ್ರವೇಶ ದ್ವಾರದಲ್ಲಿ ಬಾರ್ ಕೋಡ್ ಸ್ಕ್ರೀನಿಂಗ್ ಮತ್ತು ಬ್ರಾಡ್‌ಬಾಂಡ್ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ವ್ಯವಸ್ಥೆ ಪ್ರವಾಸಿಗರಿಗೆ ಫಲಪ್ರದವಾದರೆ ಇನ್ನು ಮುಂದೆ ಇತರ ಐತಿಹಾಸಿಕ ಕ್ಷೇತ್ರಗಳಲ್ಲಿಯೂ ಇಂಥದ್ದೇ ವ್ಯವಸ್ಥೆಯನ್ನು ಆರಂಭಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com