ಪ್ರಧಾನ ಸುದ್ದಿ

ಕಡಮಕಲ್ಲು ರಕ್ಷಿತ

Published On :

ಸುಬ್ರಹ್ಮಣ್ಯ; ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿಭಾಗ ಕಡಮಕಲ್ಲು ರಕ್ಷಿತಾರಣ್ಯದಲ್ಲಿ ಶುಕ್ರವಾರ ಅರಣ್ಯ ಇಲಾಖೆ ಸಿಬ್ಬಂದಿಗೆ ಕಂಡು ಬಂದ ಶಂಕಿತ ನಕ್ಸಲರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ನಕ್ಸಲ್ ನಿಗ್ರಹ ಪಡೆಯ ಮೂರು ತಂಡ ಸ್ಥಳೀಯ ಪೊಲೀಸರೊಂದಿಗೆ ಕಲ್ಮಕಾರು, ಉಪ್ಪುಕಳ, ಮಡಿಕೇರಿ ಕಡೆಗಳಿಂದ ರಕ್ಷಿತಾರಣ್ಯದೊಳಗೆ ಕೂಂಬಿಂಗ್ ನಡೆಸುತ್ತಿದೆ. ಶನಿವಾರ ಇಡೀ ದಿನ ನಡೆದ ಕಾರ್ಯಾಚರಣೆಯಲ್ಲಿ ನಕ್ಸಲರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ಆದರೆ ನಕ್ಸಲರು ಕಾಡಿನ ಹಾದಿಯಲ್ಲೇ ಹಾಸನ ಕಡೆಗೆ ತೆರಳಿರುವ ಸಾಧ್ಯತೆಯನ್ನು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.
ಪಶ್ಚಿಮ ಘಟ್ಟದ ರಕ್ಷಿತಾರಣ್ಯ ಉಡುಪಿ, ದ.ಕ., ಕೊಡಗು, ಹಾಸನ ಜಿಲ್ಲೆ ಸೇರಿದಂತೆ ಕರ್ನಾಟಕದ ಗಡಿಯಲ್ಲಿನ ಕೇರಳ ರಾಜ್ಯಕ್ಕೂ ವಿಸ್ತರಿಸಿರುವ ದಟ್ಟ ಅರಣ್ಯ. ಇದು ನಕ್ಸಲರು ತಲೆಮರೆಸಿಕೊಳ್ಳಲು ವರದಾನವಾಗಿ ಪರಿಣಮಿಸಿದೆ. 2012, ಸೆ.4ರಂದು ರಾತ್ರಿ ಸುಬ್ರಹ್ಮಣ್ಯ ಸಮೀಪದ ಬಿಳಿನೆಲೆ ಗ್ರಾಮದ ಚೇರು ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದ ನಕ್ಸಲ್ ನಿಗ್ರಹ ಪಡೆ ದಾಳಿಯಲ್ಲಿ ನಕ್ಸಲ್ ಸದಸ್ಯ ಎಲ್ಲಪ್ಪ ಹತನಾಗಿದ್ದ. ಆ ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದ ನಕ್ಸಲ್ ತಂಡ ಬಿಸಿಲೆ ಕಾಡಿನ ಮೂಲಕ ಕೊಡಗು ಜಿಲ್ಲೆ ಸೋಮವಾರಪೇಟೆಯ ಕೆಲವು ಗ್ರಾಮಗಳಲ್ಲಿ ಕಾಣಿಸಿಕೊಂಡು ಅಲ್ಲೂ ಕೂಂಬಿಂಗ್ ಚುರುಕಾದಾಗ ಮತ್ತೆ ಕರ್ನಾಟಕ ಗಡಿ ದಾಟಿ ಕೇರಳಕ್ಕೆ ಪರಾರಿಯಾಗಿತ್ತು. ಸುಮಾರು ಒಂದೂವರೆ ವರ್ಷದ ಬಳಿಕ ಇದೀಗ ನಕ್ಸಲರು ಕೊಡಗು ಹಾಗೂ ದ.ಕ ಜಿಲ್ಲೆಯ ಗಡಿ ಕಡಮಕಲ್ಲು- ಕಿರಿಭಾಗ ಅರಣ್ಯ ವ್ಯಾಪ್ತಿಯ ಉಪ್ಪುಕಳ, ಸುಟ್ಟತ್‌ಮಲೆ ಭಾಗದಲ್ಲಿ ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.