ಟಯರ್ ಸಿಡಿದು ಮೂವರ ಸಾವು
ಉಡುಪಿ: ಕಾರಿನ ಚಕ್ರ ಸಿಡಿದು ಮೂವರು ಸ್ಥಳದಲ್ಲೇ ಮೃತಪಟ್ಟು ಇನ್ನೊಬ್ಬರು ಗಂಭೀರ ಗಾಯಗೊಂಡ ಘಟನೆ ರಾ.ಹೆ. 66ರ ಕಟಪಾಡಿ ಸಮೀಪ ಗುರುವಾರ ನಡೆದಿದೆ. ಛಾಯಾ ಶೆಟ್ಟಿ (56), ಧೃತಿ (5) ಮತ್ತು ಚೇತನ್ (26) ಮೃತರು. ಉಡುಪಿ ಇಂದ್ರಾಳಿ ಕ್ರಾಸ್ ನಿವಾಸಿ ರಮೇಶ್ ಶೆಟ್ಟಿ ಎಂಬವರು ಉಚ್ಚಿಲ ಸಮೀಪದ ಪೊಲ್ಯ ಎಂಬಲ್ಲಿ ನೂತನವಾಗಿ ಮನೆ ನಿರ್ಮಿಸಿದ್ದು, ಅದರ ಗೃಹಪ್ರವೇಶಕ್ಕೆ ದಿನ ನಿಗದಿ ಮಾಡಿದ್ದರು. ಮನೆಗೆ ವಿದ್ಯುತ್ ದೀಪಾಲಂಕಾರ ಮಾಡಿಸಲು ಎಲೆಕ್ಟ್ರಿಷಿಯನ್ ಚೇತನ್ ಎಂಬವರನ್ನು ತಮ್ಮ ಮಾರುತಿ ವ್ಯಾಗನ್ ಆರ್ನಲ್ಲಿ ಕರೆದುಕೊಂಡು ಹೋಗಿ ಮನೆ ತೋರಿಸಿ ವಾಪಾಸು ಬರುತ್ತಿದ್ದರು. ಈ ವೇಳೆ ದಾರಿಯಲ್ಲಿ ಮೂಡುಬೆಟ್ಟು ಗ್ರಾಮದ ಕಂಬಳಗದ್ದೆ ಸಮೀಪ ಬರುವಾಗ ಕಾರಿನ ಎದುರಿನ ಬಲ ಭಾಗದ ಟಯರ್ ಸಿಡಿದು ಕಾರು ಪಕ್ಕದ ಗದ್ದೆಗೆ ಉರುಳಿದೆ. ಈ ಸಂದರ್ಭದಲ್ಲಿ ಗೃಹಪ್ರವೇಶದ ಆಮಂತ್ರಣ ಪತ್ರಿಕೆ ವಿತರಿಸಲು ರಮೇಶ್ ಶೆಟ್ಟಿ ಅವರೊಂದಿಗೆ ಆಗಮಿಸಿದ್ದ ಛಾಯಾ, ಧೃತಿ ಹಾಗೂ ಎಲೆಕ್ಟ್ರಿಷಿಯನ್ ಚೇತನ್ ಸ್ಥಳದಲ್ಲೇ ಮೃತಪಟ್ಟರು. ಕಾರು ಸಂಪೂರ್ಣ ಜಖಂಗೊಂಡಿದೆ. ಗಂಭೀರವಾಗಿ ಗಾಯಗೊಂಡ ರಮೇಶ್ ಶೆಟ್ಟಿ ಅವರನ್ನು ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಬಿಗಡಾಯಿಸಿದ ಕಾರಣ ಅವರನ್ನು ಅಲ್ಲಿಂದ ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ರವಾನಿಸಲಾಗಿದೆ. ಕಾಪು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

