ಪ್ರಧಾನ ಸುದ್ದಿ

ಗೋವಾ ಕನ್ನಡ ಸಂಘಟನೆಗಳ ಭೇಟಿಯಾದ ಜಾರಕಿಹೊಳಿ

ಗೋವಾ ಕನ್ನಡ ಸಂಘಟನೆಗಳ ಭೇಟಿಯಾದ ಜಾರಕಿಹೊಳಿ
Published On :

ವಾಸ್ಕೊ: ಗೋವಾದಲ್ಲಿ ಕನ್ನಡಿಗರ ಮೇಲಾಗುತ್ತಿರುವ ದೌರ್ಜನ್ಯ ಕುರಿತು ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ವಾಸ್ಕೋದಲ್ಲಿ ಕನ್ನಡಪರ ಸಂಘಟನೆಯ ಮುಖಂಡರಿಂದ ಸೋಮವಾರ ಮಾಹಿತಿ ಪಡೆದಿದ್ದಾರೆ.
ಜತೆಗೆ, ಬೀದಿಪಾಲಾಗಿರುವ ಕನ್ನಡಿಗರ ಸಮಸ್ಯೆ ಕುರಿತು ಮುಖ್ಯಮಂತ್ರಿ ಜತೆ ಖುದ್ದಾಗಿ ಮಾತುಕತೆ ನಡೆಸುತ್ತೇನೆ ಮತ್ತು ಈ ಕುರಿತು ಗೋವಾ ಮುಖ್ಯಮಂತ್ರಿ ಮನೋಹರ್ ಫರಿಕ್ಕರ್ ಅವರೊಂದಿಗೂ ಸರ್ಕಾರ ಮಟ್ಟದಲ್ಲಿ ಮಾತುಕತೆ ನಡೆಸುವ ಭರವಸೆ ನೀಡಿದ್ದಾರೆ.
ಬೆಂಗಳೂರಿಗೆ ತೆರಳಲು ವಾಸ್ಕೋ ವಿಮಾನ ನಿಲ್ದಾಣ ತೆರಳುವ ಮಾರ್ಗ ಮಧ್ಯೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರ ಜತೆ ಅರ್ಧಗಂಟೆ ಮಾತುಕತೆ ನಡೆಸಿದ ಅವರು ಈ ವಿಚಾರ ತಿಳಿಸಿದ್ದಾರೆ. ಈ ವೇಳೆ ಸುರಿಯುತ್ತಿರುವ ಮಳೆಯ ನಡುವೆಯೇ ಕನ್ನಡಿಗರ 75 ಮನೆಗಳನ್ನು ಕೆಡವಿದ ಗೋವಾ ಸರ್ಕಾರದ ಕ್ರಮದ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಮೂರು ಕಿ.ಮೀ. ದೂರದಲ್ಲಿದ್ದ ಕನ್ನಡಿಗರನ್ನು ಭೇಟಿಯಾಗದಿದ್ದದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮಾಧ್ಯಮಕ್ಕೆ ನಿಷೇಧ: ನಿರಾಶ್ರಿತರಿಗೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಬೆಂಬಲ ಹಿನ್ನೆಲೆಯಲ್ಲಿ ಪೊಲೀಸರು ಸದ್ಯ ಬೈನಾ ಬೀಚ್‌ನಲ್ಲಿ ಫೊಟೋ ತೆಗೆಯುವುಕ್ಕೆ ನಿಷೇಧ ಹೇರಿದ್ದಾರೆ. ಮಾಧ್ಯಮದವರು ಸ್ಥಳಕ್ಕೆ ತೆರಳದಂತೆಯೂ ಕಟ್ಟಾಜ್ಞೆ ಹೊರಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.