ಪ್ರಧಾನ ಸುದ್ದಿ

ಸಾಮರ್ಥ್ಯದ ಗುಟ್ಟು

ಸಾಮರ್ಥ್ಯದ ಗುಟ್ಟು
Published On :

ವಯಸ್ಸು 63. ಆದರೂ ಯುವಕರಲ್ಲಿರುವ ಉತ್ಸಾಹ. ತಿಂಗಳಿಗೆ 100ಕ್ಕೂ ಹೆಚ್ಚು ರ್ಯಾಲಿಗಳಲ್ಲಿ ಭಾಗಿ. ಈಗ ಇಲ್ಲಿದ್ದರೆ, ಸ್ವಲ್ಪ ಸಮಯದಲ್ಲೇ ಮತ್ತೆಲ್ಲೋ ಭಾಷಣ. ನಿರಂತರ ಓಡಾಟ. ಬೇಸಗೆಯ ಬಿಸಿಲ ಝಳವನ್ನೂ ಲೆಕ್ಕಿಸದೇ ದಿನಕ್ಕೆ 5 ಕಡೆ ಭಾಷಣ. ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಅವರ ಈ ದಿನಚರಿ ನೋಡಿದರೆ, ಅವರ ಈ 'ಸೀಕ್ರೆಟ್ ಆಫ್ ಎನರ್ಜಿ' ಏನಿರಬಹುದು ಎಂದನಿಸುವುದಿಲ್ಲವೇ? ಅವರ ದಿನಚರಿ ನೋಡಿ ಸ್ವಲ್ಪ ಟಿಪ್ಸ್ ಪಡೆಯುವುದಿದ್ದರೆ ಇದನ್ನು ಓದಿ.

ದಿನ ಹೀಗಿರುತ್ತೆ
ಬೆಳಗ್ಗೆ 5 ಗಂಟೆಗೆ ಎದ್ದು ಯೋಗಾಭ್ಯಾಸ ಮಾಡುವುದರೊಂದಿಗೆ ದಿನದ ಆರಂಭ
ಬೆಳಗ್ಗಿನ ಉಪಾಹಾರ ದಕ್ಷಿಣ ಭಾರತ ಶೈಲಿಯದ್ದು. ಮಧ್ಯಾಹ್ನದ ಮತ್ತು ರಾತ್ರಿಯ ಊಟ ಗುಜರಾತಿ ಶೈಲಿಯದ್ದು
ಪ್ರತಿ ಭಾಷಣಕ್ಕೂ ಮುನ್ನ ತನ್ನ ತಂಡದಿಂದ ಗುಜರಾತಿ ಭಾಷೆಯಲ್ಲಿ ಭಾಷಣದ ತುಣುಕುಗಳುಳ್ಳ ಚೀಟಿಗಳ ಸ್ವೀಕಾರ
ಹೊರಗಡೆ ಏನನ್ನೂ ತಿನ್ನುವುದಿಲ್ಲ. ಸಮಯ ಉಳಿಸುವುದಕ್ಕೋಸ್ಕರ ವಿಮಾನದಲ್ಲೇ ಗುಜರಾತಿ ಶೈಲಿಯ ಆಹಾರ ಸೇವನೆ
ಗಾಂಧಿನಗರದಲ್ಲಿನ ಚುನಾವಣಾ ಕಚೇರಿ ಜತೆ ನಿರಂತರ ಸಂಪರ್ಕ

ಭಾಷಣ ಬರೆಯುವವರಾರು?
ನರೇಂದ್ರ ಮೋದಿ ಅವರಿಗೆ ಭಾಷಣ
ಬರೆದುಕೊಡುವುದು ಯಾರು ಗೊತ್ತೇ? ಗಾಂಧಿನಗರದಲ್ಲಿರುವ ಮುಖ್ಯಮಂತ್ರಿ
ಕಾರ್ಯಾಲಯದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಎ.ಕೆ. ಶರ್ಮಾ. ಈ ತಂಡದಲ್ಲಿ ಗುಜರಾತ್‌ನ ಮಾಜಿ ಅಧಿಕಾರಿ ಕೆ. ಕೈಲಾಶ್‌ನಾಥನ್, ಇತರರೂ ಇದ್ದಾರೆ. ಪ್ರತಿ ರ್ಯಾಲಿಯಲ್ಲೂ ಮೋದಿ ವೇದಿಕೆ ಹತ್ತುವ ಮೊದಲು ಈ ತಂಡ ಭಾಷಣದ ತುಣುಕುಗಳನ್ನು ಸಣ್ಣ ಸಣ್ಣ ಚೀಟಿಗಳಲ್ಲಿ ಬರೆದು ಮೋದಿಗೆ ಹಸ್ತಾಂತರಿಸುತ್ತದೆ. ಭಾಷಣ ಆರಂಭಿಸುವುದಕ್ಕೂ ಮುನ್ನ ಒಮ್ಮೆ ಈ ಚೀಟಿಗಳತ್ತ ಕಣ್ಣು ಹಾಯಿಸುವ ಮೋದಿ ನಂತರ ಅವುಗಳನ್ನು ಕಿಸೆಗೆ ಹಾಕಿಕೊಳ್ಳುತ್ತಾರೆ. ನಂತರ ಆರಂಭ ಮೋದಿ ಅವರ ಭಾಷಣದ ಅಬ್ಬರ...


ಬಿಸಿ ನೀರೇ ಬೇಕು
ಬೆವರಿಳಿಸುವ ಬಿಸಿಲಿದ್ದರೂ ಮೋದಿ ಅವರು ತಣ್ಣೀರು ಕುಡಿಯುವುದಿಲ್ಲ. ನೀರಷ್ಟೇ ಅಲ್ಲ, ತಣ್ಣಗಿರುವ ಯಾವುದೇ ವಸ್ತುವನ್ನೂ ಅವರು ಸೇವಿಸುವುದಿಲ್ಲ.
ಸತತ ಭಾಷಣ ಮಾಡುವುದರಿಂದ ಗಂಟಲು ನೋಯುವ ಕಾರಣ
ಅವರು ಬಿಸಿನೀರನ್ನೇ ಕುಡಿಯು
ತ್ತಾರಂತೆ. ಅಷ್ಟೇ ಅಲ್ಲ, ಗಂಟಲಿಗೆ
ಸಮಸ್ಯೆಯಾಗದಂತೆ ಅವರು
ಆಯುರ್ವೇದಿಕ್ ಔಷಧವನ್ನೂ
ಸೇವಿಸುತ್ತಾರೆ.

ಅಪ್‌ಡೇಟ್
ದೇಶದಲ್ಲಿ ಏನೆಲ್ಲ ನಡೆಯುತ್ತಿದೆ, ಸಾಮಾಜಿಕ ತಾಣಗಳಲ್ಲಿ ಯಾವುದರ ಬಗ್ಗೆ ಚರ್ಚಿಸಲಾಗುತ್ತಿದೆ ಎಂಬೆಲ್ಲ ವಿಚಾರಗಳ ಮಾಹಿತಿ ಕ್ಷಣ ಕ್ಷಣಕ್ಕೂ ಮೋದಿಯವರಿಗೆ ಲಭಿಸುತ್ತಿರುತ್ತದೆ. ಗುಜರಾತ್ ರಾಜಧಾನಿಯಲ್ಲಿರುವ ಹಿರೇನ್ ಜೋಶಿ ನೇತೃತ್ವದ ಐಟಿ ತಂಡ ಮೋದಿಯವರಿಗೆ ಈ ಎಲ್ಲ ಮಾಹಿತಿಗಳನ್ನು ಒದಗಿಸುತ್ತಿರುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.