ನೀರೂ ದುಬಾರಿ

ಬೆಂಗಳೂರು: ಸರ್ಕಾರ ಬಸ್ ಪ್ರಯಾಣ ದರ ಏರಿಸಿದ್ದಾಯ್ದು, ವಿದ್ಯುತ್ ದರ ಏರಿಸುವ ಮುನ್ಸೂಚನೆ ಸಿಕ್ಕಿದೆ. ಈಗ ನೀರಿನ ದರ ಏರಿಕೆ ಸರದಿ.
ಇಷ್ಟೂ ವರ್ಷ ದರ ಏರಿಕೆ ಪ್ರಸ್ತಾಪ ಮುಂದೂಡುತ್ತಿದ್ದ ಸರ್ಕಾರ ಈ ಬಾರಿ ಒಪ್ಪಿದೆ. ಹೀಗಾಗಿ ಜಲಮಂಡಳಿ ಈಗ ಸಭೆ ನಡೆಸಿ ದರ ಏರಿಕೆ ಕುರಿತು ಅಂತಿಮ ನಿರ್ಧಾರ ಪ್ರಕಟಿಸುವುದಷ್ಟೇ ಬಾಕಿ ಇದೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ನಂತರ ಜಲಮಂಡಳಿ ಅಧ್ಯಕ್ಷ ಎಂ.ಎಸ್.ರವಿಶಂಕರ್ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಸದ್ಯದಲ್ಲೇ ಸಭೆ ನಡೆಸಿ ಏರಿಕೆ ಎಷ್ಟು ಮಾಡಬೇಕು. ಯಾವ ವರ್ಗಕ್ಕೆ ಎಷ್ಟು ನಿಗದಿಪಡಿಸಬೇಕೆಂದು ತೀರ್ಮಾನಿಸಬೇಕಿದೆ. ದರ ಪರಿಷ್ಕರಣೆಗೆ ಸರ್ಕಾರ ನಿರ್ದೇಶನ ನೀಡಿದೆ. ಆದರೆ ಏಕಾಏಕಿ ದರ ಏರಿಸಲಾಗದು. ಸದ್ಯದಲ್ಲೇ ಮಂಡಳಿ ಸಭೆ ನಡೆಸಿ ಪರಿಷ್ಕರಣೆ ಪ್ರಕಟಿಸಲಾಗುವುದು ಎಂದರು.
ಮುಂದಿನ ಮಾರ್ಚ್ ವೇಳೆಗೆ ಜಲಮಂಡಳಿಯಿಂದ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಕಾವೇರಿ 5ನೇ ಹಂತದ ಕಾಮಗಾರಿ ಸದ್ಯದಲ್ಲೇ ಆರಂಭವಾಗಲಿದೆ. ಇದರಿಂದ ಹೆಚ್ಚುವರಿ 10 ಟಿಎಂಸಿ ದೊರೆಯಲಿದೆ. 4ನೇ ಹಂತ, 2 ಘಟ್ಟದ ಉಳಿಕೆ ಭಾಗ ಶೀಘ್ರ ಪೂರ್ಣಗೊಳಿಸಲಾಗುತ್ತದೆ.
ಇನ್ನು ಬೋರ್‌ವೆಲ್‌ಗಳ ನಿರ್ವಹಣೆಯನ್ನು ಬಿಬಿಎಂಪಿಯಿಂದ ಜಲಮಂಡಳಿಗೇ ಹಸ್ತಾಂತರಿಸಲಾಗುತ್ತದೆ. ಆದರ ವೆಚ್ಚವನ್ನು ಬಿಬಿಎಂಪಿ ಭರಿಸಲಿದೆ. ಹೊಸ ಬೋರ್‌ವೆಲ್‌ಗಳಿಗೆ ಸಂಬಂಧಿಸಿದ ಸಮಿತಿ ಅನುಮತಿ ನೀಡಲಿದ್ದು, ಅಗತ್ಯ ಇರುವೆಡೆ ಮಾತ್ರ ಬೋರ್‌ವೆಲ್ ಕೊರೆಯಲಾಗುತ್ತದೆ. ಈಗಾಗಲೇ ಕೊರೆದಿರುವ ಖಾಸಗಿ ಬೋರ್‌ವೆಲ್‌ಗಳ ನೋಂದಣಿಗೆ ಸಂಬಂಧಿಸಿದಂತೆ ಕಠಿಣ ನಿಯಮ ಜಾರಿಗೊಳಿಸಲು ಕಾನೂನು ತಿದ್ದುಪಡಿ ಬಗ್ಗೆಯೂ ಚಿಂತಿಸಲಾಗುತ್ತಿದೆ ಎಂದರು.
10 ವರ್ಷಗಳಿಂದ ಏರಿರದ ನಗರದ ನೀರಿನ ದರ
250 ಕೋಟಿ ವರ್ಷಕ್ಕೆ ಜಲಮಂಡಳಿಗೆ ನಷ್ಟ
30% ಮಂಡಳಿಯ ವೆಚ್ಚದಲ್ಲಿ ಇಷ್ಟು ವಿದ್ಯುತ್ ಬಿಲ್‌ಗೆ
184 ಕೋಟಿ ಬೋರ್‌ವೆಲ್‌ಗಳ ವಿದ್ಯುತ್ ಬಾಕಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


