ಪ್ರಧಾನ ಸುದ್ದಿ

ರೈಲು ಹಳಿ ಸ್ಫೋಟ ಸಂಚು

Published On :

ಚಿತ್ತಾಪುರ: ಚಿತ್ತಾಪುರ- ಮಳಖೇಡ ರೈಲು ಹಳಿ ಸ್ಫೋಟ ಯತ್ನ ಪ್ರಕರಣ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಭಾನುವಾರ ಪರಿಶೀಲಿಸಿದರು. ಇಲ್ಲಿನ ಮೊಗಲಾ ಗ್ರಾಮದ ಬಳಿ ರೈಲು ಸೇತುವೆ ಹಾಗೂ ಮಳಖೇಡ ಬಳಿ ಪತ್ತೆಯಾಗಿರುವ ಸ್ಫೋಟಕಗಳ ಬಗ್ಗೆ ಸ್ಥಳೀಯರು, ಕೀ ಮ್ಯಾನ್ ತುಳಜಾರಾಂ ಜೊತೆಗೂ ಚರ್ಚಿಸಿ ಮಾಹಿತಿ ಪಡೆದರು.  ಇದು ನಕ್ಸಲರ ಕೆಲಸವೇ, ಉಗ್ರರ ಸಂಚೇ ಎನ್ನುವ ತನಿಖೆ ನಡೆಯುತ್ತಿದೆ.
ದುಷ್ಕರ್ಮಿಗಳು ಕಪ್ಪು ಟಾಟಾ ಸುಮೋದಲ್ಲಿ ಪರಾರಿಯಾಗಿದ್ದಾರೆ ಎಂದು  ತುಳಜಾರಾಂ ಮಾಹಿತಿ ನೀಡಿದ್ದಾನೆ. ಇದನ್ನಾಧರಿಸಿ ಜಾಡು ಹಿಡಿಯುವ ಪ್ರಯತ್ನ ಸಾಗಿದೆ. ಈ ಹಿನ್ನೆಲೆಯಲ್ಲಿ ಟೋಲ್‌ಗೇಟ್ ಹಾಗೂ ಸಮೀಪದ ಪೆಟ್ರೋಲ್ ಬಂಕ್‌ಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಪರಿಶೀಲಿಸಲಾಗುವ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.