ಪ್ರಧಾನ ಸುದ್ದಿ

ರ್ಯಾಂಕ್ ಮಾತು

Published On :

ಪೋಷಕರು ಒತ್ತಡ ಹೇರಿರಲಿಲ್ಲ
ಶೈಕ್ಷಣಿಕ ವರ್ಷದ ಆರಂಭದಿಂದಲೇ ಪರೀಕ್ಷೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೆ. ಮನೆಯಲ್ಲಿ ಪೋಷಕರು ಯಾವುದೇ ಒತ್ತಡ ಹೇರದೆ ನನ್ನ ಪಾಡಿಗೆ ಓದಲು ಬಿಟ್ಟಿದ್ದರು. ನಮ್ಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಿತು. ಪರೀಕ್ಷೆಯಲ್ಲಿ ಮೊದಲ 10 ಮಂದಿಯಲ್ಲಿ ನಾನು ಒಬ್ಬಳಾಗುತ್ತೇನೆ ಅಂದುಕೊಂಡಿದ್ದೆ. ಆದರೆ, ಪ್ರಥಮ ಸ್ಥಾನ ಬಂದಿರುವುದು ಖುಷಿಯಾಗಿದೆ.
< ಬಿ.ಎ. ನಿತ್ಯಾಸುರಭಿ, 1ನೇ ರ್ಯಾಂಕ್
ಮರಿಮಲ್ಲಪ್ಪ ಶಾಲೆ, ಮೈಸೂರು

ಕಠಿಣ ಪರಿಶ್ರಮದಿಂದ ಈ ಸಾಧನೆ
ಫಲಿತಾಂಶ ಕೇಳಿ ಬಹಳ ಅಚ್ಚರಿಯಾಯಿತು. ನನಗೆ ಶೇ.90ರ ಮೇಲೆ ನಿರೀಕ್ಷೆ ಇತ್ತು. ಆದರೆ, ಇಷ್ಟು ಸಾಧನೆ ಮಾಡುತ್ತೇನೆ ಎಂದುಕೊಂಡಿರಲಿಲ್ಲ. ರಾಜ್ಯಕ್ಕೆ ಎರಡನೇ ರ್ಯಾಂಕ್ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಕಠಿಣ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ನಾನು ದಿನಕ್ಕೆ 6-8 ತಾಸು ಓದುತ್ತಿದ್ದೆ. ಕಷ್ಟಪಟ್ಟಿದ್ದಕ್ಕೆ ಖುಷಿಯಾಗಿದೆ.
< ಮೈತ್ರಿ ಹೆಗಡೆ,  2ನೇ ರ್ಯಾಂಕ್
ಬೇಣದಮನೆ, ಕಡಕಿನಕೊಪ್ಪ
ಶ್ರೀ ಲಕ್ಷ್ಮೀನರಸಿಂಹ ಪ್ರೌಢಶಾಲೆ ಸಾಲ್ಕಣಿ


ಶ್ರದ್ಧೆಯಿಂದ ಓದಿದ ಪರಿಣಾಮ
ಎಲ್ಲ ಮಕ್ಕಳಂತೆ ನಾನೂ ಟಿವಿ ನೋಡಿ, ಆಟವಾಡಿದ್ದೇನೆ. ಆದರೆ, ಅಭ್ಯಾಸದ ಸಮಯದಲ್ಲಿ ಶ್ರದ್ಧೆಯಿಂದ ಓದಿದ ಪರಿಣಾಮವೇ ಇಷ್ಟೊಂದು ಸಾಧನೆ ಮಾಡಲು ಸಾಧ್ಯವಾಗಿದೆ. ತಂದೆ, ತಾಯಿ ಮಾರ್ಗದರ್ಶನವೂ ಸಿಕ್ಕಿದೆ. ರಾಜ್ಯಕ್ಕೆ ತೃತೀಯ ಸ್ಥಾನ ಪಡೆಯುತ್ತೇನೆಂದು ನಿರೀಕ್ಷಿಸಿರಲಿಲ್ಲ. ತಾಲೂಕು, ಜಿಲ್ಲೆಗೆ ಪ್ರಥಮ ಬರಬಹುದು ಎಂದುಕೊಂಡಿದ್ದೆ. ಈ ಫಲಿತಾಂಶ ನೋಡಿ ಬಹಳ ಖುಷಿಯಾಗಿದೆ. ಮುಂದೆ ವಿಜ್ಞಾನ ವಿಭಾಗ ವಿಷಯ ಆಯ್ದುಕೊಂಡು ಸಾಫ್ಟ್ವೇರ್ ಎಂಜಿನಿಯರ್ ಆಗುವ ಕನಸಿದೆ.
< ನೇಹಾ ಕಾಮತ್, 3ನೇ ರ್ಯಾಂಕ್
ಜ್ಞಾನಗಂಗಾ ಶಿಕ್ಷಣ ಸಮಿತಿ ಹೈಸ್ಕೂಲ್,  ಹಾವೇರಿ

ಪರಿಶ್ರಮದಿಂದ ಮಾತ್ರ ಪ್ರತಿಫಲ
ಪರಿಶ್ರಮದಿಂದ ಮಾತ್ರ ಪ್ರತಿಫಲ ನಿರೀಕ್ಷೆ ಮಾಡಬಹುದು. ನನ್ನ ಸಾಧನೆ ಹಿಂದೆ ತಾಯಿ, ಶಿಕ್ಷಕರು, ಪಾಲಕರ ಪಾತ್ರ ಹಿರಿದಾಗಿದೆ. ನಾನು ಓದುತ್ತಿರುವ ಶಾಲೆಯಲ್ಲಿ ಹಿಂದಿನ ವರ್ಷದಲ್ಲಿ ಗಣೇಶಕುಮಾರ ಶೇ.98.8 ಅಂಕಗಳನ್ನು ಪಡೆದು ರಾಜ್ಯಕ್ಕೆ 3ನೇ ಸ್ಥಾನ ಪಡೆದಿದ್ದ. ಆತನ ಸಾಧನೆಯೇ ನನಗೆ ಸ್ಫೂರ್ತಿಯಾಗಿತ್ತು. ನಾಲ್ಕನೇ ರ್ಯಾಂಕ್ ಬಹಳ ಖುಷಿ ತಂದಿದೆ. ನಾನು ಯಾವುದೇ ಟ್ಯೂಷನ್ ಮೊರೆ ಹೋಗಿಲ್ಲ.
< ಪ್ರಸನ್ನ ಭಟ್ಟ, ಹೊಸ್ತೋಟ,  4ನೇ ರ್ಯಾಂಕ್
ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಹೆಗ್ಗರಣಿ

ಪರೀಕ್ಷೆಗಾಗಿ ಆರಂಭದಿಂದಲೇ ಸಿದ್ಧತೆ ಮಾಡಿಕೊಂಡಿದ್ದೆ. ಪ್ರತಿ ದಿನ ಆರು ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದೆ. ಎಲ್ಲ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನವನ್ನೇ ಪಡೆಯುತ್ತಿದ್ದೆ. ಆದರೆ ರಾಜ್ಯಕ್ಕೇ ಪ್ರಥಮ ಸ್ಥಾನ ಬರುತ್ತೇನೆ ಎಂದು ಎಣಿಸಿರಲಿಲ್ಲ. ಫಲಿತಾಂಶ ನೋಡಿ ತುಂಬಾ ಖುಷಿಯಾಗಿದೆ. ಕನ್ನಡ ಮಾಧ್ಯಮದಲ್ಲಿ ಓದಿದರೂ ಯಾವುದೇ ತೊಂದರೆ ಇಲ್ಲ. ಉತ್ತಮ ಅಂಕ ಗಳಿಸಬಹುದು.
< ವಿಶಾಲು ಸಂಗನಬಸವ ಗದಗ
ಹಾರೂಗೇರಿ ಜನತಾ ಶಿಕ್ಷಣ ಸಂಸ್ಥೆಯ ಪ್ರಗತಿ ಪ್ರೌಢಶಾಲೆ, ಚಿಕ್ಕೋಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.