ಪ್ರಧಾನ ಸುದ್ದಿ

ಸಣ್ ಸಣ್ಣ ಸುಲಿಗೆ...

ಸಣ್ ಸಣ್ಣ ಸುಲಿಗೆ...
Published On :

ಬೆಂಗಳೂರು: ಪರೀಕ್ಷಾ ಶುಲ್ಕಕ್ಕಿಂತ ಉತ್ತರ ಪತ್ರಿಕೆ ಛಾಯಾಪ್ರತಿಗೆ ಎರಡು ಪಟ್ಟು, ಮರುಮೌಲ್ಯಮಾಪನಕ್ಕೆ 5 ಪಟ್ಟು ಹೆಚ್ಚು ಹಣ. ಆದರೆ ಉಪನ್ಯಾಸಕರಿಗೆ ಕೊಡುವ ಗೌರವ ಧನ ಇದರ ಶೇ.2ರಷ್ಟು ಮಾತ್ರ!
ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಇಂಥ ದ್ದೊಂದು ಅಸಂಬದ್ಧ ವ್ಯವಸ್ಥೆ ಜಾರಿಯಲ್ಲಿದೆ. ಹಣಕಾಸು ಇಲಾಖೆಯ ಪಕ್ಕಾ ಚೌಕಾಸಿ ಬುದ್ಧಿಯಿಂದ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಂದ ಶುಲ್ಕ ಪಡೆಯುವ ಬದಲು, ನೈಜಾರ್ಥದಲ್ಲಿ ವ್ಯವಹಾರಕ್ಕಿಳಿದಿದೆ.
ಝೆರಾಕ್ಸ್ ನೀಡಲು 100 ಕೂಡ ಖರ್ಚಾಗದು. ಆದರೆ ಪರೀಕ್ಷಾ ವಿಭಾಗ ವಿದ್ಯಾರ್ಥಿಗಳಿಂದ ಪ್ರತಿ ವಿಷಯಕ್ಕೆ ಬರೋಬ್ಬರಿ ರು. 501 ತೆಗೆದುಕೊಳ್ಳುತ್ತಿದೆ. ಕೇವಲ ಝೆರಾಕ್ಸ್ನಿಂದಲೇ ಇಲಾಖೆ ವರ್ಷಕ್ಕೆ ಸುಮಾರು 2 ಕೋಟಿ ಬಾಚುತ್ತಿದೆ. ವಿದ್ಯಾರ್ಥಿಗಳ ನೆರವಿಗಿರುವ ವ್ಯವಸ್ಥೆ ಮೂಲಕ ಸರ್ಕಾರವೇ ಹಣ ಮಾಡುತ್ತಿದೆ!
ದ್ವಿತೀಯ ಪಿಯುಸಿ ಪರೀಕ್ಷೆ ಶುಲ್ಕ 252. ಪರಿಶಿಷ್ಟ ಜಾತಿ, ಪಂಗಡದವರು ಹಾಗೂ ಬಾಲಕಿಯರಿಗೆ ಶುಲ್ಕ ಇಲ್ಲ. ಆದರೆ ಮರುಮೌಲ್ಯಮಾಪನಕ್ಕೆ 1260 ಹಾಗೂ ಮರು ಎಣಿಕೆಗೆ 336 ನಿಗದಿ ಮಾಡಲಾಗಿದೆ. ಅಂದರೆ ಪ್ರಚಾರಕ್ಕೆ ಒಂದೆಡೆ ಶುಲ್ಕ ವಿನಾಯಿತಿ, ಮತ್ತೊಂದೆಡೆ ವಸೂಲಿ ನಡೆಯುತ್ತಿರುವುದು ಸ್ಪಷ್ಟ.
ಇನ್ನೊಂದೆಡೆ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಉಪನ್ಯಾಸಕರಿಗೆ ನೀಡುವ ಗೌರವ ಧನ ಕೇವಲ 21. ಅಂದರೆ ಇಲಾಖೆ ಪ್ರಕಾರ ಮೌಲ್ಯ ಮಾಪನಕ್ಕಿಂತ ಉತ್ತರ ಪತ್ರಿಕೆ ಝೆರಾಕ್ಸ್ ತೆಗೆಸುವುದೇ  ದೊಡ್ಡ ಕೆಲಸ! ಹಿಂದಿನ ವರ್ಷಗಳಲ್ಲಿ ಉಪನ್ಯಾಸಕರಿಗೆ 15 ನೀಡಲಾಗುತ್ತಿತ್ತು. ಗೌರವಧನ ಏರಿಕೆ ಮನವಿಗೆ ಸ್ಪಂದಿಸಿ 21ಕ್ಕೆ ಹೆಚ್ಚಿಸಿತ್ತು. ಈ ಹೆಚ್ಚುವರಿ ಹೊರೆ ಸರಿದೂಗಿಸಲು ಹಿಂದಿನ ವರ್ಷವೇ ಶುಲ್ಕ ಹೆಚ್ಚಿಸಲಾಗಿತ್ತು. ಮತ್ತೆ ಈ ವರ್ಷ ಶೇ.20 ಹೆಚ್ಚಿಸಲಾಗಿದೆ. ಇದರಿಂದ ಸಾಮಾನ್ಯ ವಿದ್ಯಾರ್ಥಿ ಅರ್ಜಿ ಸಲ್ಲಿಸುವುದೇ ದೂರದ ಮಾತು.


2013ರ ಮಾಹಿತಿ

  •  ಝೆರಾಕ್ಸ್ಗೆ ಬಂದ ಅರ್ಜಿ    21,743
  • ಒಟ್ಟು ಝೆರಾಕ್ಸ್    45,865
  •  ಪ್ರತಿ ಝೆರಾಕ್ಸ್ಗೆ 420 ಶುಲ್ಕದಂತೆ ಸಂಗ್ರಹ 1,92,63,300
  • ರಿವ್ಯಾಲ್ಯುಯೇಷನ್ಗೆ ಅರ್ಜಿ    8571
  •  ರಿವ್ಯಾಲ್ಯುಯೇಷನ್ನಿಂದ 89,99,950
  •  ಮರು ಎಣಿಕೆಯಿಂದ 1,45,880
  •  ಒಟ್ಟಾರೆ ಹಣ ಸಂಗ್ರಹ 2.80 ಕೋಟಿ
336
ರು.-ಮರು ಎಣಿಕೆಗೆ
21
ರು.- ಶಿಕ್ಷಕರಿಗೆ ಗೌರವ ಧನ
501
ರು. - ಪ್ರತಿ ಝೆರಾಕ್ಸ್ಗ
1250
ರು.- ಮರುಮೌಲ್ಯಮಾಪನಕ್ಕೆ
 -ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.