ಪ್ರಧಾನ ಸುದ್ದಿ

ಸಿಂಗ್ ಸಾಂಗ್

ಸಿಂಗ್ ಸಾಂಗ್
Published On :

ಹಳಿ ತಪ್ಪುತ್ತಿದ್ದ ದೇಶದ ಆರ್ಥಿಕತೆಗೆ ಹೊಸ ರೂಪ ನೀಡಿದ ಯಶಸ್ವಿ ವಿತ್ತ ಸಚಿವ ಡಾ.ಮನನೋಹನ ಸಿಂಗ್. ಆರ್ಥಿಕ ತಜ್ಞನಾಗಿ, ಹಣಕಾಸು ಸಚಿವನಾಗಿ ಗಳಿಸಿದ ಯಶಸ್ಸನ್ನು ಪ್ರಧಾನಿಯಾಗಿ ಗಳಿಸಲು ಅವರಿಗೆ ಸಾಧ್ಯವಾಗಲಿಲ್ಲ ಎನ್ನುವುದೂ ಅಷ್ಟೇ ಸತ್ಯ. ಜವಾಹರಲಾಲ್ ನೆಹರು ಬಳಿಕ (17 ವರ್ಷ) ಸುದೀರ್ಘ ಅವಧಿಗೆ (10 ವರ್ಷ) ಪ್ರಧಾನಿಯಾಗಿದ್ದವರು ಮನಮೋಹನ ಸಿಂಗ್. ದಶಕ ಕಂಡ ಸಿಂಗ್ ಸರ್ಕಾರಕ್ಕೆ ಶನಿವಾರ ಕೊನೆ ದಿನ. ಅವರ ಆಡಳಿತದಲ್ಲಿ ಸಿಹಿಗಿಂತ ಕಹಿಗಳೇ ಹೆಚ್ಚು. ವಿವಿಧ ಕ್ಷೇತ್ರಗಳಲ್ಲಿ ಅವರ ಸರ್ಕಾರದ ಸಾಧನೆಗಳ ಮೆಲುಕು.



ವಿದೇಶಾಂಗ ನೀತಿ


    ನಾಗರಿಕ ಪರಮಾಣು ಒಪ್ಪಂದ (2005-08)
ಅಮೆರಿಕ ಜತೆಗಿನ ನಾಗರಿಕ ಪರಮಾಣು ಒಪ್ಪಂದಕ್ಕೆ ಎಡಪಕ್ಷಗಳ ವಿರೋಧದ ನಡುವೆಯೂ ಸಂಸತ್ತಿನ ಅನುಮತಿ ಪಡೆದದ್ದು ದೊಡ್ಡ ಸಾಧನೆ. ಒಪ್ಪಂದ ವಿರೋಧಿಸಿದರೆ ಪದತ್ಯಾಗ ಮಾಡುವ ಬೆದರಿಕೆಯನ್ನೂ ಸಿಂಗ್ ಹಾಕಿದ್ದರು.
   ಸೌದಿ ರಾಜನ ಭೇಟಿ (2006)
ಸೌದಿ ರಾಜ ಅಬ್ದುಲ್ಲಾ ಅವರನ್ನು ಗಣರಾಜ್ಯೋತ್ಸವ ಅತಿಥಿಯಾಗಿ ಬರಮಾಡಿಕೊಂಡಿದ್ದು ಗಲ್ಫ್ ರಾಷ್ಟ್ರಗಳ ಜತೆಗಿನ ಸಂಬಂಧ ಸುಧಾರಣೆಗೆ ಕಾರಣವಾಯಿತು. ಮುಖ್ಯವಾಗಿ ತೈಲಕ್ಕಾಗಿ ಇರಾನ್ ಮೇಲಿನ ಅವಲಂಬನೆ ತಪ್ಪಿತು. 2014ರ ಹೊತ್ತಿಗೆ ಈ ಒಪ್ಪಂದ ಭದ್ರತೆ ಮತ್ತು ಮೂಲಸೌಕರ್ಯ ಕ್ಷೇತ್ರಗಳಿಗೂ ವಿಸ್ತರಿಸಿತು.



ಭಯೋತ್ಪಾದನೆ


  •     2008ರ 26/11 ಮುಂಬೈ ದಾಳಿ ಅಮೆರಿಕದಲ್ಲಿ ನಡೆದ 9/11 ದಾಳಿಗಿಂತ ದೊಡ್ಡದು. ದೇಶದ ಭದ್ರತಾ ವೈಫಲ್ಯಗಳನ್ನೂ ಈ ದಾಳಿ ಎತ್ತಿ ತೋರಿಸಿತು.
  •     ಆಂತರಿಕ ಭದ್ರತೆಗೆ ಮಾವೋವಾದಿಗಳು ಬಹುದೊಡ್ಡ ಅಪಾಯವಾಗಿ ಪರಿಣಮಿಸಿದರು. ಇಂಡಿಯನ್ ಮುಜಾಹಿದ್ದೀನ್ ಆಟವೂ ಜೋರಾಯಿತು.
ರಕ್ಷಣೆ
  • ಖಂಡಾಂತರಿ ಕ್ಷಿಪಣಿ ಹೊತ್ತೊಯ್ಯಬಲ್ಲ ಸ್ವದೇಶಿ ನಿರ್ಮಿತ ಯುದ್ಧನೌಕೆ ಐಎನ್ಎಸ್ ಅರಿಹಂತ್, ಅಗ್ನಿ 5 ಕ್ಷಿಪಣಿ ಯಶಸ್ವಿ ಪರೀಕ್ಷೆ, ರಕ್ಷಣಾ ಉದ್ದೇಶಕ್ಕೆಂದೇ ಮೀಸಲಾದ ಉಪಗ್ರಹ ರುಕ್ಮಿಣಿ ಯಶಸ್ವಿ ಉಡಾವಣೆ, ಐಎನ್ಎನ್ ವಿಕ್ರಮಾದಿತ್ಯ ಸೇರ್ಪಡೆ, ಅತ್ಯಾಧುನಿಕ ಯುದ್ಧ ವಿಮಾನಗಳ ಸೇರ್ಪಡೆ.
  •     ವಾಯುಪಡೆ ಮುಖ್ಯಸ್ಥರಾಗಿದ್ದ ಎಸ್.ಪಿ.ತ್ಯಾಗಿ ಹೆಲಿಕಾಪ್ಟರ್ ಖರೀದಿ ಸಂಬಂಧ ತಮಗೆ ಆಗಸ್ಟಾ-ವೆಸ್ಟ್ಲ್ಯಾಂಡ್ ಸಂಸ್ಥೆ ಲಂಚದ ಆಮಿಷ ನೀಡಿತ್ತು ಎಂದು ಆರೋಪಿಸಿದರೆ, ಭೂಸೇನಾ ಮುಖ್ಯಸ್ಥರಾಗಿದ್ದ ವಿ.ಕೆ.ಸಿಂಗ್ 1,676 ತತ್ರಾ ಟ್ರಕ್ಗಳ ಖರೀದಿಗೆ ತಮಗೆ ಆಮಿಷ ಒಡ್ಡಲಾಗಿತ್ತು ಎಂದು ಆಪಾದಿಸಿದರು. ನೌಕಾಪಡೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿತು. ಅಡ್ಮಿರಲ್ ಡಿ.ಕೆ.ಜೋಶಿ ಸೇವಾವಧಿ ಇರುವಾಗಲೇ ನೌಕಾಪಡೆ ಮುಖ್ಯಸ್ಥನ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೊದಲಿಗರಾದರು.

ಆರ್ಥಿಕತೆ
  •     2004-2012ರ ಅವಧಿಯಲ್ಲಿ ತಲಾ ಆದಾಯ ಎರಡೂವರೆಪಟ್ಟು ಹೆಚ್ಚಿತು
  •    ಪೆಟ್ರೋಲ್ (2010) ಮತ್ತು ಡೀಸೆಲ್ (2013) ಬೆಲೆ ನಿಗದಿ ಸರ್ಕಾರದ ನಿಯಂತ್ರಣ ಮುಕ್ತ
  •     ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ನೇರ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ (2012)
  •     ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಳ
  •     ನಷ್ಟದಲ್ಲಿದ್ದ ರೈಲ್ವೆ ಲಾಭದ ಹೊಸ್ತಿಲಲ್ಲಿ
  •     ತೆರಿಗೆ ಸುಧಾರಣೆ, ವಿಮಾ ಕ್ಷೇತ್ರದಲ್ಲಿ ನೇರ ವಿದೇಶಿ ಬಂಡವಾಳ ಹೂಡಿಕೆ ವಿಧೇಯಕ ಅಂಗೀಕಾರ
  •     ಕಳೆದ ಎರಡು ವರ್ಷಗಳಲ್ಲಿ ಹಣದುಬ್ಬರ ಶೇ 8ರ ಗಡಿ ದಾಟಿತು
  •   ವಿತ್ತೀಯ ಕೊರತೆ ಪ್ರಮಾಣ ಹೆಚ್ಚುತ್ತಲೇ ಹೋಯಿತು
  •     ಅನುತ್ಪಾದಕ ಆಸ್ತಿಯಲ್ಲಿ ಹೆಚ್ಚಳ
  •     ಮಹತ್ವದ ತೀರ್ಮಾನ ಕೈಗೊಳ್ಳಲು ವಿಫಲವಾದ್ದರಿಂದ ಆರ್ಥಿಕ ಬೆಳವಣಿಗೆ ಕುಂಠಿತ
ಆಡಳಿತ
  •   2006ರಲ್ಲಿ 200 ಜಿಲ್ಲೆಗಳಲ್ಲಿ ಜಾರಿಗೆ ತಂದ ನರೇಗಾ ಯೋಜನೆಯನ್ನು ದೇಶಾದ್ಯಂತ ವಿಸ್ತರಿಸಿದ್ದು
  •    ಆಂತರಿಕ ಹಿಂಸಾಚಾರದ ವಿರುದ್ಧ ಮಹಿಳೆಯರಿಗೆ ರಕ್ಷಣೆ ನೀಡುವ ಕಾಯ್ದೆ (2005), ರಾಜ್ಯಸಭೆಯಲ್ಲಿ ಮಹಿಳಾ ಮೀಸಲು ವಿಧೇಯಕ ಅಂಗೀಕಾರ
  •     ಮಾಹಿತಿ ಹಕ್ಕು, ಶಿಕ್ಷಣ ಹಕ್ಕು, ಆಹಾರ ಭದ್ರತೆ, ಲೋಕಪಾಲ ವಿಧೇಯಕಗಳ ಅಂಗೀಕಾರ
  •      11ನೇ ಪಂಚವಾರ್ಷಿಕ ಯೋಜನೆಯಲ್ಲಿ 8 ಹೊಸ ಐಐಟಿ, 7 ಐಐಎಂ, 30 ಕೇಂದ್ರೀಯ ವಿಶ್ವವಿದ್ಯಾಲಯಗಳ ಸ್ಥಾಪನೆ ಗುರಿ
  •     ಸಾಮಾಜಿಕ ವೆಚ್ಚ, ಆಹಾರ ಉತ್ಪಾದನೆಯಲ್ಲಿ ಗಣನೀಯ ಏರಿಕೆ ಆಗಿದ್ದರೂ ಭಾರತವನ್ನು ಹಸಿವುಮುಕ್ತ ರಾಷ್ಟ್ರವಾಗಿಸಲು ಸಾಧ್ಯವಾಗಿಲ್ಲ
  •     ಸಂಸತ್ತಿನಲ್ಲಿ 1,000 ಗಂಟೆಯಷ್ಟು ಅಮೂಲ್ಯ ಸಮಯ ಗದ್ದಲದಲ್ಲಿ ವ್ಯರ್ಥ
ಹಗರಣಗಳ ಸಾಲು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.