69 ದಿನಗಳ ರಂಜನೆ ಮನರಂಜನೆ

ಮಾ.5ರಂದು ಚುನಾವಣೆ ದಿನಾಂಕ ಘೋಷಣೆಯಾದಂದಿನಿಂದ ಕೊನೆಯ ಹಂತದ ಮತದಾನದ ವರೆಗಿನ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಹಬ್ಬ ಅನೇಕ ವಿಚಿತ್ರ, ವಿಕ್ಷಿಪ್ತ ವಿಶೇಷಗಳನ್ನು ಜನರ ಮನಸ್ಸಿನಲ್ಲಿ ನೆಟ್ಟುಹೋಯಿತು. ಈ 69 ದಿನಗಳ ಈ ಮತರಂಗಿನಾಟದ ಕುರಿತು ಇಲ್ಲಿದೆ ಒಂದು ಇಣುಕು ನೋಟ...
Chaiwallah
ಈ ದೇಶವನ್ನು ಮುನ್ನಡೆಸಲು 'ಚಾಯ್ವಾಲಾ' ಸೂಕ್ತ ವ್ಯಕ್ತಿಯಲ್ಲ ಎನ್ನುವ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಅವರ ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ಅಯ್ಯರ್ ಅವರ ಈ ಹೇಳಿಕೆಯನ್ನೇ ಬಿಜೆಪಿ ತನ್ನ ಪ್ರಚಾರಾಂದೋಲನದ ಭಾಗವಾಗಿ ಬಳಸಿಕೊಂಡಿತು. ದೇಶಾದ್ಯಂತ ಚಾಯ್ಪೆ ಚರ್ಚಾ ಕಾರ್ಯಕ್ರಮಗಳನ್ನು ನಡೆಸಿತು. ಉಚಿತ ಚಹಾ ನೀಡಿತು. ಇದರಿಂದ ಪ್ರೇರೇಪಿತರಾಗಿ ಲಾಲೂ ಪ್ರಸಾದ್ ಯಾದವ್ 'ದೂದ್ವಾಲಾ' ಅಭಿಯಾನ ಆರಂಭಿಸಿದರು.
Shehzada
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು 'ಶೆಹಜಾದಾ' ಎಂದು ಕರೆಯುವ ಮೂಲಕ ವಂಶಪಾರಂಪರ್ಯ ರಾಜಕೀಯದ ವಿಚಾರವನ್ನು ಮತ್ತೆ ಚರ್ಚೆಗೆ ಎಳೆದು ತಂದರು.
Zehar ki khethi
ಗಾಂಧಿ ಕುಟುಂಬದ ಕುರಿತ ಮೋದಿಯ ಕುಹಕ, ಟೀಕೆಗಳಿಗೆ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು 'ಜೆಹರ್ ಕಿ ಖೇತಿ' ಪ್ರತಿಕ್ರಿಯೆ ಮೂಲಕ. ಈ ಹೇಳಿಕೆ 2007ರ ಗುಜರಾತ್ ಚುನಾವಣೆ ವೇಳೆ ಸೋನಿಯಾ ಗಾಂಧಿ ಮಾಡಿದ್ದ 'ಮೌತ್ ಕಾ ಸೌದಾಗರ್' ಹೇಳಿಕೆಯ ಮುಂದುವರಿದ ಭಾಗ ಇದು. ಸೋನಿಯಾ ಹಾಗೂ ಕಾಂಗ್ರೆಸ್ ಪಕ್ಷ ಚುನಾವಣೆಯುದ್ದಕ್ಕೂ ಬಿಜೆಪಿಯ ಸಿದ್ಧಾಂತ ದೇಶವನ್ನು ವಿಭಜಿಸುವುದು ಹಾಗೂ ವಿಭಜನೆಯ ಬೀಜ ಬಿತ್ತುವುದು ಎಂದು ಪದೇ ಪದೆ ಆರೋಪಿಸಿತ್ತು.
Toffee model
ಗುಜರಾತ್ ಅಭಿವೃದ್ಧಿ ಮಾದರಿಯನ್ನು ರಾಹುಲ್ ಗಾಂಧಿ ಹೋಲಿಕೆ ಮಾಡಿದ್ದು ಟಾಫಿ(ಚಾಕಲೇಟ್)ಗೆ. ಈ ಹೋಲಿಕೆ ಸಾಕಷ್ಟು ಪ್ರಚಾರವನ್ನೂ ಪಡೆಯಿತು. ಗುಜರಾತ್ ಮಾದರಿ ಅಭಿವೃದ್ಧಿಯಿಂದ ಅದಾನಿಯಂಥ ಕಂಪನಿಗಷ್ಟೇ ಅನುಕೂಲವಾಗಿದೆ. ಚಾಕಲೇಟ್ನ ದರದಲ್ಲಿ(1) ಅದಾನಿ ಕಂಪನಿಗೆ ಭೂಮಿ ನೀಡಲಾಗಿದೆ ಎಂದು ಆರೋಪಿಸಿದರು ರಾಹುಲ್.
Adani & Ambani
ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್ ಬಾಯಿಂದ ಪದೇ ಪದೆ ಹೊರಬೀಳುತ್ತಿದ್ದ ಉದ್ಯಮಿಗಳ ಹೆಸರುಗಳಿವು. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಬಂಡವಾಳಶಾಹಿಗಳ ಹಿಡಿತದಲ್ಲಿವೆ. ನರೇಂದ್ರ ಮೋದಿ ಅದಾನಿ ಹಾಗೂ ಕಾಂಗ್ರೆಸ್ ಅಂಬಾನಿಗೆ ಅನುಕೂಲ ಮಾಡಿಕೊಡುತ್ತಿದೆ. ಜನಸಾಮಾನ್ಯರನ್ನು ಕಡೆಗಣಿಸುತ್ತಿದೆ ಎಂಬುದು ಕೇಜ್ರಿವಾಲ್ ಆರೋಪ.
551,300,000
ಇಷ್ಟು ಮಂದಿ ಮತದಾರರು ತಮ್ಮ ಮತಚಲಾಯಿಸಿದ್ದು ಇದೇ ಮೊದಲು.
465,000
ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಈ ಚುನಾವಣೆ ವೇಳೆ ಕ್ರಮಿಸಿದ ದೂರ. ಮೋದಿ ಅವರೊಬ್ಬರೇ 3 ಲಕ್ಷ ಕಿ.ಮೀ. ಕ್ರಮಿಸಿದ್ದರು.
ಮಗ್ಗುಲು ಬದಲಾಯ್ಸಿದವರು
ರಾಮ್ ವಿಲಾಸ್ ಪಾಸ್ವಾನ್
2002ರ ಗುಜರಾತ್ ಗಲಭೆ ಬಳಿಕ ಬಿಜೆಪಿ ಮೈತ್ರಿ ಕಡಿದುಕೊಂಡಿದ್ದ ಎಲ್ಜೆಪಿಯ ರಾಮ್ ವಿಲಾಸ್ ಪಾಸ್ವಾನ್ ಮತ್ತೆ ಎನ್ಡಿಎಗೆ ಮರಳಿದರು.
ಭಗೀರಥ್ ಪ್ರಸಾದ್
ಮಧ್ಯಪ್ರದೇಶದ ಭಿಂಡ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡ ಕೆಲ ಗಂಟೆಗಳಲ್ಲೇ ಬಿಜೆಪಿಗೆ ಹಾರಿದ ಸಾಧನೆ ಮಾಡಿದವರು. ಈಗ ಇವರು ಬಿಜೆಪಿ ಅಭ್ಯರ್ಥಿ.
ರಮೇಶ್ ಚಂದ್ ತೋಮಾರ್
ಕಾಂಗ್ರೆಸ್ನ ಗೌತಮಬುದ್ಧನಗರ ಕ್ಷೇತ್ರದ ಅಭ್ಯರ್ಥಿಯಾಗಿದ್ದ ತೋಮಾರ್ ಕೊನೇ ಕ್ಷಣದಲ್ಲಿ ಬಿಜೆಪಿಗೆ ಹಾರಿದರು. ಕೊನೆ ಕ್ಷಣದಲ್ಲಾದ ಈ ಬೆಳವಣಿಗೆಯಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ಇಲ್ಲದ ಹೀನಾಯ ಸ್ಥಿತಿಗೆ ತಲುಪಿತು.
ಮುಜುಗರ
ಕರುಣಾ ಶುಕ್ಲಾ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸೊಸೆ ಕರುಣಾ ಶುಕ್ಲಾ ಅವರು ನರೇಂದ್ರ ಮೋದಿ ಅವರನ್ನು ಟೀಕಿಸಿದ ಬಳಿಕ ಕಾಂಗ್ರೆಸ್ ಸೇರಿದರು.
ದಲ್ಜೀತ್ ಕೊಹ್ಲಿ: ಪ್ರಧಾನಿ ಮನಮೋಹನ ಸಿಂಗ್ ಸಹೋದರ ದಲ್ಜೀತ್ ಅವರು ಮೋದಿ ಸಮ್ಮುಖದಲ್ಲಿ ಬಿಜೆಪಿ ಸೇರಿದರು. ಇದು ಮನಮೋಹನ ಸಿಂಗ್ ಪಾಲಿಗೆ ತೀವ್ರ ಮುಜುಗರ ತಂದಿಟ್ಟ ಪ್ರಸಂಗ. ಈ ಕುರಿತು ಸಿಂಗ್ ತಮ್ಮ ಅಸಮಾಧಾನವನ್ನೂ ಹೊರಗೆಡವಿದರು.
ಮೂಲೆಗುಂಪಾದವರ ಚುಚ್ಚು ಮಾತು
ಜಸ್ವಂತ್ ಸಿಂಗ್
ಬಿಜೆಪಿಯ ಹಿರಿಯ ಮುಖಂಡ ಜಸ್ವಂತ್ ಸಿಂಗ್ ತಮ್ಮ ಕೊನೆಯ ಚುನಾವಣೆಯಲ್ಲಿ ಪಕ್ಷವನ್ನು ಎದುರು ಹಾಕಿಕೊಂಡರು. ಕರ್ನಲ್ ಸೋನಾರಾಮ್ ಅವರನ್ನು ರಾಜಸ್ಥಾನದ ಬಾರ್ಮರ್ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದ ಹೊರತಾಗಿಯೂ ಪಕ್ಷೇತರ ಅಭ್ಯರ್ಥಿಯಾಗಿ ಜಸ್ವಂತ್ ಸ್ಪರ್ಧಿಸಿದರು.
ಜಗದಂಬಿಕಾ ಪಾಲ್
ಉತ್ತರಪ್ರದೇಶದ ಕಾಂಗ್ರೆಸ್ ಮುಖಂಡ ಜಗದಂಬಿಕಾ ಪಾಲ್ ಲೋಕಸಭಾ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರಿದರು. ಈ ವೇಳೆ ಹಿರಿಯ ನಾಯಕರ ಕಡೆಗಣನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಮ್ ಕೃಪಾಲ್ ಯಾದವ್
ಒಂದು ಕಾಲದಲ್ಲಿ ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಆತ್ಮೀಯ. ಆದರೆ, ಟಿಕೆಟ್ ವಿಚಾರವಾಗಿ ಲಾಲೂ ಜತೆ ಮುನಿಸಿಕೊಂಡು ಬಿಜೆಪಿ ಸೇರ್ಪಡೆಗೊಂಡರು. ತಾವು ಸ್ಪರ್ಧಿಸಬಯಸಿದ್ದ ಕ್ಷೇತ್ರದಲ್ಲಿ ಲಾಲೂ ಅವರು ಪುತ್ರಿ ಮೀಸಾದೇವಿಗೆ ಟಿಕೆಟ್ ನೀಡಿದ್ದೇ ಯಾದವ್ ಕೋಪಕ್ಕೆ ಕಾರಣ.
ಪ್ರಮುಖರ ಮೊದಲ ಅನುಭವ
ಅರವಿಂದ ಕೇಜ್ರಿವಾಲ್
ಬಹುತೇಕರ ಪಾಲಿಗೆ ಇದು ಆತ್ಮಹತ್ಯೆ, ರಾಜಕೀಯ ಪಂಡಿತರಿಗೆ ಇದು ಎಳಸು ನಿರ್ಧಾರ. ಆದರೆ, ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್ ಮೊದಲೇ ಹೇಳಿದಂತೆ ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿಯುವ ಸಾಹಸ ಪ್ರದರ್ಶಿಸಿದರು.
ಅರುಣ್ ಜೇಟ್ಲಿ
1980ರಿಂದ ಬಿಜೆಪಿಯಲ್ಲಿದ್ದರೂ ಸಂಸತ್ತಿನ ಪಡಸಾಲೆಗೆ ಜೇಟ್ಲಿ ತಲುಪುತ್ತಿದ್ದುದು ರಾಜ್ಯಸಭೆಯ ಟಿಕೆಟ್ ಮೂಲಕ. ಆದರೆ, ಇದೇ ಮೊದಲ ಬಾರಿ ಈ ಬಾರಿ ಪಂಜಾಬ್ನ ಅಮೃತಸರದಿಂದ ಲೋಕಸಭೆಗೆ ಸ್ಪರ್ಧಿಸಿದ್ದಾರೆ. ಎನ್ಡಿಎ ಏನಾದರೂ ಅಧಿಕಾರಕ್ಕೆ ಬಂದರೆ ಅವರು ಹಣಕಾಸು ಅಥವಾ ಗೃಹದಂಥ ಪ್ರಮುಖ ಖಾತೆಯನ್ನು ಪಡೆಯುವ ನಿರೀಕ್ಷೆ ಇದೆ.
ಮತ ಮಾತು
ನಾ ಘರ್ಕಾ ನಾ ಘಾಟ್ಕಾ, ವೋ ಹೈನ್ ನೇತಾ 'ಆಪ್' ಕಾ(ಎಲ್ಲಿಯೂ ಸಲ್ಲದವನು )
ಆಮ್ ಆದ್ಮಿ ಪಕ್ಷದ ವಿರುದ್ಧ ಕಾಂಗ್ರೆಸ್ನ ಟೀಕೆ
ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ
- ಕಾಂಗ್ರೆಸ್ನ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಘೋಷಣೆ
ಪೂರ್ಣ ಊಟ ಮಾಡುತ್ತೇವೆ, 100 ದಿನ ಕೆಲಸ ಮಾಡುತ್ತೇವೆ, ಔಷಧ ತೆಗೆದುಕೊಳ್ಳುತ್ತೇವೆ ಮತ್ತು ಕಾಂಗ್ರೆಸ್ ಅನ್ನು ಗೆಲ್ಲಿಸುತ್ತೇವೆ.
ಯುಪಿಎ ಸಾಧನೆ ಕುರಿತು ರಾಹುಲ್ ಗಾಂಧಿ ಹೇಳಿಕೆ
ಚುನಾವಣೆಗಾಗಿ ಸರ್ಕಾರ ಮಾಡಿದ ವೆಚ್ಚ ರು. 3,426 ಕೋಟಿ
ಈ ಚುನಾವಣೆಯಲ್ಲಿ ವಶಪಡಿಸಿಕೊಂಡ ಹಣ 314 ಕೋಟಿ
ಮಾತಿನ ಏಟು?
ತನ್ನ ಬಗ್ಗೆ ಮಾತ್ರ ಮಾತನಾಡುತ್ತಾ ದೊಡ್ಡ-ದೊಡ್ಡ ಸಮರ್ಥನೆ ನೀಡುತ್ತಿದ್ದ ಇನ್ನೊಬ್ಬ ನಾಯಕ ಅಂದ್ರೆ ಅದು ಹಿಟ್ಲರ್.
ರಾಹುಲ್ ಗಾಂಧಿ, ಗುಜರಾತಿನಲ್ಲಿ ಮೋದಿ ಸಾಧನೆ ಕುರಿತು
ನಾನು ಪ್ರಧಾನಿಯಾಗದಿದ್ದರೆ ಮರಳಿ ಚಹಾ ಮಾರೋದಕ್ಕೆ ಹೋಗಬಲ್ಲೆ. ಆದರೆ ರಾಹುಲ್ ಏನು ಮಾಡ್ತಾರೆ?
ನರೇಂದ್ರ ಮೋದಿ, ಅಮೇಠಿಯಲ್ಲಿ
ಅವನು ಕತ್ತೇನಾ?
ಮಮತಾ, ಮೋದಿ ಕುರಿತು
ಅವರು ದಲಿತ ಹೆಣ್ಣು ಮಗಳನ್ನು ಮದುವೆಯಾಗಿದ್ದಿದ್ದರೆ ಭಾಗ್ಯ ಖುಲಾಯಿಸಿ ಅವರು ಪ್ರಧಾನಿಯಾಗುತ್ತಿದ್ದರೇನೋ?
ಬಾಬಾ ರಾಮ್ದೇವ್, ರಾಹುಲ್ ಕುರಿತು
ಸಮಾಜವಾದಿ ಪಕ್ಷವನ್ನು ಯಾರೊಬ್ಬ ಮುಸ್ಲಿಂ ವಿರೋಧಿಸಿದರೆ ಡಿ.ಎನ್.ಎ ಪರೀಕ್ಷೆ ಮಾಡಿಸಿ. ಅವನು ಆರೆಸ್ಸೆಸ್ನವನಾಗಿರುವ ಸಾಧ್ಯತೆಯಿದೆ.
ಅಬು ಅಜ್ಮಿ, ಸಮಾಜವಾದಿ ಪಕ್ಷದ ನಾಯಕ
ರಾಜಕೀಯದಲ್ಲಿ ಬೇಕಾಗಿರುವುದು ವಿಶಾಲ ಹೃದಯ, ದೊಡ್ಡ ಎದೆಯಲ್ಲ... ಮೋದಿಗೆ 56 ಇಂಚಿನ ಹೊಟ್ಟೆಯಿದೆ.
ಅಖಿಲೇಶ್ ಯಾದವ್, ಮೋದಿಗೆ ನೀಡಿದ ಉತ್ತರ
ತೀರಾ ಜಾತ್ಯತೀತರಾಗಬೇಡಿ. ಮುಸ್ಲಿಮರು ಬಹಳ ಜಾತ್ಯತೀತರು, ಆದರೆ ಅವರು ಕೋಮುವಾದಿಗಳಾಗಬೇಕು.
ಶಾಜಿಯಾ ಇಲ್ಮಿ, ಎಎಪಿ ನಾಯಕಿ
ನೀವು ಜನರನ್ನು ಹತ್ಯೆ ಮಾಡಿದ್ದೀರಿ ಎಂದು ನಾವು ಆಪಾದಿಸುತ್ತಿಲ್ಲ. ನೀವು ನಪುಂಸಕ ಎಂಬುದು ನಮ್ಮ ಆಪಾದನೆ.
ಸಲ್ಮಾನ್ ಖುರ್ಷೀದ್, ಗುಜರಾತಿನ ಗಲಭೆ ಬಗ್ಗೆ ಮೋದಿ ನಿಲುವು ಕುರಿತು
ಪಶ್ಚಿಮ ಉತ್ತರಪ್ರದೇಶದಲ್ಲಿ ಚುನಾವಣೆ ಎಂಬುದು ಮರ್ಯಾದೆಗಾಗಿ, ಅವಮಾನಕ್ಕೆ ಸೇಡು ಮತ್ತು ಅನ್ಯಾಯ ಮಾಡಿದವರಿಗೆ ಪಾಠ ಕಲಿಸಲು ಇರುವ ಪ್ರಕ್ರಿಯೆ.
ಅಮಿತ್ ಶಾ, ಬಿಜೆಪಿ ನಾಯಕ
ಅಮೇಠಿಯ ಮಣ್ಣಿನಲ್ಲಿ ಅವರು ನನ್ನ ಹುತಾತ್ಮ ತಂದೆಯ ಅವಮಾನ ಮಾಡಿದ್ದಾರೆ. ಅಮೇಠಿಯ ಜನ ಅವರ ಈ ಕೃತ್ಯಕ್ಕೆ ಎಂದೂ ಕ್ಷಮಿಸಲ್ಲ.
ಪ್ರಿಯಾಂಕಾ ಗಾಂಧಿ ವಾದ್ರಾ
ಮಾ.5 ಚುನಾವಣೆ ಘೋಷಣೆ
ಮಾ.15
ವಾರಾಣಸಿಯಿಂದ ಮೋದಿ ಸ್ಪರ್ಧಿಸುತ್ತಿರುವುದನ್ನು ಖಚಿತಪಡಿಸಿದ ಬಿಜೆಪಿ. ಕೇಜ್ರಿವಾಲ್ರಿಂದಲೂ ಸ್ಪರ್ಧಿಸುವ ಘೋಷಣೆ.
ಈ ಬಾರಿಯ ಚುನಾವಣೆಯಲ್ಲಿ ಏನು ಹೊಸತು?
NOTA
ನೋಟಾ ಆಯ್ಕೆಯನ್ನು ಉಪಯೋಗಿಸಲು ಅವಕಾಶ ಮಾಡಿಕೊಟ್ಟ ಪ್ರಪ್ರಥಮ ಲೋಕಸಭಾ ಚುನಾವಣೆ ಇದು. ಮತದಾರರಿಗೆ ಎಲ್ಲಾ ಅಭ್ಯರ್ಥಿಗಳ ಪರ ಅಸಮಾಧಾನವಿದ್ದರೆ, ನೋಟಾ ಆಯ್ಕೆಯನ್ನು ಬಳಸಿ ತಮ್ಮ ಮತ ಯಾರಿಗೂ ಹಾಕದೆ ಇರಬಹುದು. 2013ರ ವಿಧಾನಸಭಾ ಚುನಾವಣೆಯಲ್ಲಿ ಈ ಆಯ್ಕೆಯ ಅವಕಾಶ ನೀಡಲಾಗಿತ್ತು.
ಆಮ್ ಆದ್ಮಿಯ ಉದಯ
ಭಾರತದ ಚುನಾವಣೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೊಸದಾಗಿ ಹುಟ್ಟಿದ ಪಕ್ಷವೊಂದು ಬಿಜೆಪಿ ಮತ್ತು ಕಾಂಗ್ರೆಸ್ಗೆ ಸವಾಲಾಗಿ ಪರಿಣಮಿಸಿತು. ದೇಶದಾದ್ಯಂತ ಬೆಂಬಲ ಸಿಕ್ಕ ಆಮ್ ಆದ್ಮಿ ಪಕ್ಷದಷ್ಟು ಬೇರೆ ಯಾವುದೇ ಹೊಸ ಪಕ್ಷಕ್ಕೆ ಈವರೆಗೆ ಈ ಮಟ್ಟಿಗೆ ಬೆಂಬಲ ಸಿಕ್ಕಿಲ್ಲ.
ಹೊಸ ಮಾಧ್ಯಮ
2008ರ ಅಮೆರಿಕದ ಚುನಾವಣಾ ಪ್ರಕ್ರಿಯೆಯನ್ನು ಅನುಕರಿಸಿ ಭಾರತದ ಈ ಬಾರಿಯ ಚುನಾವಣೆ ಸಾಮಾಜಿಕ ಜಾಲತಾಣಗಳ ನೆರವು ಪಡೆಯಿತು. ಟ್ವಿಟರ್ನಲ್ಲಿ ತರಾಟೆ, ಫೇಸ್ಬುಕ್ನಲ್ಲಿ ಫೈಟ್, ಯೂಟ್ಯೂಬ್ ಮತ್ತು ಬ್ಲಿಟ್ಜ್ಕ್ರೀಗ್ಸ್ನಲ್ಲಿ ಚರ್ಚೆ, ಬ್ಲಾಗ್ ಸಮರ ಇತ್ಯಾದಿಗಳಿಗೆ ಈ ಚುನಾವಣೆ ಸಾಕ್ಷಿಯಾಯಿತು.
ಮಾ.31
ವಿವಿಧ ನಾಯಕರಿಂದ ಮೆಗಾ ರ್ಯಾಲಿ. ಮೊನಚುಗೊಂಡ ವಾಗ್ದಾಳಿ.
ಮಾ.7
ಮತದಾನ ಆರಂಭ.
ಮಾ.12
ಕೊನೆಯ ಹಂತದ ಮತದಾನ. ಚುನಾವಣೆ ಮುಕ್ತಾಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


