ನಮೋ ಟ್ವಿಟರ್ ಸರ್ಕಾರ್!

ಸಾಮಾಜಿಕ ಮಾಧ್ಯಮ ಅದರಲ್ಲೂ ವಿಶೇಷವಾಗಿ ಟ್ವಿಟ್ಟರ್ ಈ ಬಾರಿ ಚುನಾವಣೆಯ ಜನಾಭಿಪ್ರಾಯವನ್ನು ಒಂದು ಹಂತದಲ್ಲಿ ರೂಪಿಸುವಲ್ಲಿ ವಿಶೇಷ ಪಾತ್ರವನ್ನು ನಿರ್ವಹಿಸಿದೆ ಎಂಬ ಅಂಶವನ್ನು ತಳ್ಳಿ ಹಾಕುವುದಕ್ಕೆ ಆಗದು. ತಾಸುಗಟ್ಟಲೇ ಟಿವಿ ಚರ್ಚೆ, ವಿವರ ಲೇಖನಗಳು ಮೂಡಿಸದ ಬೆರಗನ್ನು 140 ಶಬ್ದಗಳ ಟ್ವಿಟ್ಟರ್ ತೆರೆದಿರಿಸುತ್ತ ಬಂತು. ಅಭಿಪ್ರಾಯ ನಿರೂಪಣೆಯ ನಿಜ ಹೀರೋಗಳು ಇವರೇ. ಹೀಗಾಗಿ ಬಿಜೆಪಿ ವಿಜಯದ ಬಗ್ಗೆ ಟ್ವಿಟ್ಟರ್ ಎಂಬ ಚಿಲಿಪಿಲಿ ಕಟ್ಟೆಯಲ್ಲಿ ವ್ಯಕ್ತವಾದ ಚುರುಕು ನೋಟಗಳನ್ನೇ ನಿಮ್ಮೆದುರು ಇರಿಸುತ್ತಿದ್ದೇವೆ.
1998ರಲ್ಲಿ ಸೋನಿಯಾ ಗಾಂಧಿ ಅವರು ನಮ್ಮದು 'ತೂ ಸೆವೆಂತಿ ತೂ' ಅಂತ ಬೀಗಿದ್ದರು. ಇವತ್ತು ಟಿವಿ ನೋಡಿದರೆ ಥೂ ಥೂ ಥೂ!
-ಜೆ. ಗೋಪಾಲಕೃಷ್ಣ
ನರೇಂದ್ರ ಮೋದಿ ನೇತೃತ್ವದ ಬಿಜೆಪಿ-ಎನ್ಡಿಎಗೆ ಗೆಲುವಾಗಿದೆ. ನಾವು ಅವರ ವಿರುದ್ಧ ಪಕ್ಷದಲ್ಲಿದ್ದೆವು. ಆದರೆ ರಾಷ್ಟ್ರದ ಜನಮತವನ್ನು ವಿನಮ್ರವಾಗಿ ಒಪ್ಪಿಕೊಳ್ಳುತ್ತೇವೆ.
-ಬೈಜಯಂತ್ ಜೆ ಪಾಂಡಾ (ಬಿಜೆಡಿ ನಾಯಕ)
ಪತ್ರಕರ್ತೆ ಸಾಗರಿಕಾ ಘೋಷ್ 'ಇದು ಹಿಂದೂರಾಷ್ಟ್ರಕ್ಕೆ ಸಿಕ್ಕ ಮತವಾ' ಅಂತ ಟ್ವೀಟ್ ಮಾಡುತ್ತಾರೆ. ಇವರೆಲ್ಲ ಸುಧಾರಿಸುವವರೇ ಅಲ್ಲ.
-ಅಶೋಕ್
ಗಾರ್ಡಿಯನ್, ನ್ಯೂಯಾರ್ಕ್ ಟೈಮ್, ಇಕನಾಮಿಸ್ಟ್ ಇಂಥ ಪಾಶ್ಚಾತ್ಯ ಮಾಧ್ಯಮಗಳು ಮೋದಿ ವಿರುದ್ಧ ಮಾಡಿದ ಎಲ್ಲ ಅಪಪ್ರಚಾರಗಳಿಗೆ ಭಾರತದ ಮತದಾರ ಇಂದು ಉತ್ತರ ಕೊಟ್ಟಿದ್ದಾನೆ.
-ಮಿನ್ಹಾಜ್ ಮರ್ಚೆಂಟ್
ಭಾರತದ ರಾಜಕಾರಣದಲ್ಲಿ ಹೊಸದೊಂದು ಅಧ್ಯಾಯ ಪ್ರಾರಂಭವಾಗಿದೆ. ಭಾರತ ಮತ್ತು ಆಕೆಯ ಎಲ್ಲ ಜನಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಇದು ದಾರಿಯಾಗಲಿ.
-ಫರ್ಹಾನ್ ಅಖ್ತರ್
ದುಸ್ವಪ್ನಗಳು ಮುಗಿದಿವೆ. ಒಳ್ಳೆಯ ದಿನಗಳು ಮತ್ತೆ ಬಂದಿವೆ.
-ರಾಜೀವ್ ಚಂದ್ರಶೇಖರ್
ಎಡರಂಗದವರು ಆವಿಯೇ ಆಗಿಹೋಗಿದ್ದಾರೆ. -ವಿಕ್ರಮ ಚಂದ್ರ
ಇದು ವಿಭಜಕ ಸೆಕ್ಯುಲರಿಸಮ್ ನೀತಿ ಮತ್ತು ಪ್ರತಿಷ್ಠಿತರ ಅಹಂಕಾರದ ವಿರುದ್ಧ ಚಲಾವಣೆ ಆಗಿರುವ ಮತ.
-ಪ್ರಭು ಚಾವ್ಲಾ
ಭಾರತ ನಿಜಕ್ಕೂ ಭ್ರಷ್ಟಾಚಾರದ ವಿರುದ್ಧ ಮತ ಹಾಕಿತೇ? ತಾವು ಮುಗ್ಧರು ಎಂದು ಎ. ರಾಜಾ ಹೇಳಿದ್ದನ್ನು ನೀಲಗಿರಿ ಮತದಾರರು ಒಪ್ಪಿಕೊಂಡಂತಿಲ್ಲ.
- ದ ನ್ಯೂಸ್ ಮಿನಿಯಟ್
ಅಸ್ಸಾಂ ಮುಖ್ಯಮಂತ್ರಿ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ನಿತೀಶ್ ಅವರೂ ಇದನ್ನು ಅನುಸರಿಸುವರೇ?
-ಡಾ. ರಾಕೇಶ್ ಸಿನ್ಹಾ
ಬಿಜೆಪಿ ವನ್, ಕಾಂಗ್ರೆಸ್ ಗಾನ್, ಆಪ್ ಕೌನ್!
-ಶಿಖಾರ್ ಸಿಂಗ್
ಆ ಕಾಲದಲ್ಲಿ ಚಾಣಕ್ಯ. ಈಗ ಅಮಿತ್ ಶಾ!
-ಅನುರಾಗ್ ಉದಯ್
ನರೇಂದ್ರ ಮೋದಿ ಮತ್ತು ಬಿಜೆಪಿಯ ಗೆಲವಿನಲ್ಲಿ ಅಮಿತ್ ಶಾ ಅವರು ವಹಿಸಿದ ಪಾತ್ರವನ್ನು ಮರೆಯದಿರೋಣ. ಉತ್ತರ ಪ್ರದೇಶದ ಚಿತ್ರಣವನ್ನೇ ಅವರು ಬದಲಾಯಿಸಿಬಿಟ್ಟರು.
-ರಾಜೀವ್ ಜುನೇಜ
ರಾಹುಲ್ ಗಾಂಧಿಯವರೇ ಬಿಹಾರದ 243 ವಿಧಾನಸಭೆ ಕ್ಷೇತ್ರಗಳಲ್ಲಿ ನಿಮಗಿರುವುದು ನಾಲ್ಕು ಸ್ಥಾನಗಳು. ಉತ್ತರ ಪ್ರದೇಶದ 403 ವಿಧಾನಸಭೆ ಸ್ಥಾನಗಳಲ್ಲಿ 28 ಸ್ಥಾನ. 543 ಸ್ಥಾನಗಳ ಲೋಕಸಭೆ ಸ್ಥಾನದಲ್ಲಿ ಸುಮಾರು 45 ಸ್ಥಾನ. ಎಂಥ ಅದ್ಭುತ ನಾಯಕರು ನೀವು!
-ಅಖಿಲೇಶ್ ಮಿಶ್ರ
ನನಗೆ ಮೈಕ್ರೋಸ್ಕೋಪ್ ಕೊಡಿ. ದೇಶದಲ್ಲಿ ಕಾಂಗ್ರೆಸ್ ಎಲ್ಲಿ ಇದೆ ಅಂತ ಹುಡುಕಬೇಕಿದೆ.
-ಸೇಮುಭಟ್
ಒಬ್ಬ ಮನುಷ್ಯನ ಹಾಡಿಗೆ ಇಡೀ ದೇಶ ಕುಣಿಯುವ ಇಂಥ ಕ್ಷಣ ಇತಿಹಾಸದಲ್ಲಿ ವಿರಳ!
-ಮಿಹಿರ್ ಜಾ
ಇದೊಂದು ವಾಸ್ತವ: ಆಪ್ ಏನಾದರೂ ಕಾಂಗ್ರೆಸ್ ವಿರೋಧಿ ನೀತಿಯನ್ನೇ ಬಲವಾಗಿ ಅನುಸರಿಸಿದ್ದರೆ ಈ ಚುನಾವಣೆಯಲ್ಲಿ ಬಿಜೆಪಿಗೆ ಎಷ್ಟು ಸ್ಥಾನ ಬಂದಿದೆಯೋ ಅಷ್ಟು ಮಾತ್ರ ಎನ್ಡಿಎಗೆ ಬರುತ್ತಿತ್ತು.
-ಫ್ಯಾನ್ ಆಫ್ ಅರುಣ್ ಶೌರಿ
ಸಂಜಯ್ ಜಾ ಅವರೇ. ನೀವು ಕಾಂಗ್ರೆಸ್ನಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಧನ್ಯವಾದ. ಮೋದಿ ಅಲೆ ಜತೆಗೆ ಜನ ಬಿಜೆಪಿಗೆ ಮತ ಹಾಕುವುದಕ್ಕೆ ನಿಮ್ಮ ಕೊಡುಗೆಯೇ ಇದೆ.
-ಬಾಬು ಭಯ್ಯಾ
ಮತದಾರರೊಂದಿಗಿನ ಸಂಪರ್ಕದಲ್ಲಿ ಎಡವಟ್ಟಾಯಿತು. ಇಲ್ಲದಿದ್ದರೆ ಕಾಂಗ್ರೆಸ್ 500 ಸ್ಥಾನಗಳನ್ನು ಗೆದ್ದುಬಿಡುತ್ತಿತ್ತು!
-ಗಪ್ಪಿಸ್ತಾನ್ ರೇಡಿಯೋ
ಮ್ಯಾನ್ ಆಫ್ ದಿ ಮ್ಯಾಚ್ ಅಮಿತ್ ಶಾ. ಮ್ಯಾನ್ ಆಫ್ ದಿ ಸಿರೀಸ್ ರಾಜನಾಥ್ ಸಿಂಗ್. ಮ್ಯಾನ್ ಆಫ್ ದಿ ಟ್ವಿಟ್ಟರ್ ಮೀಡಿಯಾಕ್ರೂಕ್ಸ್. ಕೆಟ್ಟ ಆಟ ಚುನಾವಣಾ ಆಯೋಗ. ಶ್ರೇಷ್ಠ ವ್ಯಕ್ತಿತ್ವ ನರೇಂದ್ರ ಮೋದಿ.
-ನಮೋ ಜೀಲ್ ವಿಶ್ಪರ್
ಆಪ್ ಈಗ ಆಟೊ ಪಾರ್ಟಿ ಆಗಿದೆ. ಇನ್ನೋವಾ ಕೂಡ ಬೇಕಾಗಲ್ಲ.
-ಸಂಘ್ಪರಿವಾರ್
ಹೋಯಿತು ರೋಮ್ ಸಾಮ್ರಾಜ್ಯ, ಶುರುವಾಯಿತು ರಾಮ ಸುರಾಜ್ಯ.
-ಸುಬ್ರಮಣಿಯನ್ ಸ್ವಾಮಿ, ಬಿಜೆಪಿ
ಭಾರತವು ಡಿಎನ್ಎ (ಗಾಂಧಿ ವಂಶವಾಹಿ)ವಿರೋಧಿಸಿ ಎನ್ಡಿಎ ಅಪ್ಪಿಕೊಂಡಿದೆ.
-ಟ್ರಿಕಿ ಡೋನರ್
ಜಯಲಲಿತಾ ಅವರ ಸ್ಥಿತಿ ತುಂಬ ಚೆನ್ನಾಗಿ ಡ್ರೆಸ್ ಮಾಡಿಕೊಂಡು ಎಲ್ಲಿಗೂ ಹೋಗದ ರೀತಿ. ತಮ್ಮ ರಾಜ್ಯದಲ್ಲಿ ಭರ್ಜರಿ ಫಲಿತಾಂಶವನ್ನೇ ನೀಡಿದರೂ ಮೋದಿಯವರು ಬೇರೆ ಚಿತ್ರಕತೆಯನ್ನೇ ಹರವಿಟ್ಟರು.
-ರಾಹುಲ್ ಕನ್ವಾಲ್
ಟಿವಿ ಪತ್ರಕರ್ತ
ವಾಜಪೇಯಿಯವರು ಒಮ್ಮೆ ಹೇಳಿದ್ದರು. 'ಕತ್ತಲು ಕಳೆಯುವುದು, ಬೆಳಕು ಹರಿಯುವುದು, ಕಮಲ ಅರಳುವುದು'. ಇವತ್ತು ಕಮಲ ನಳನಳಿಸಿದೆ ಹಾಗೂ ಆಸೆಯ ಹೊಸ ಬೆಳಗು ತೆರೆದುಕೊಂಡಿದೆ.
-ರಾಜನಾಥ ಸಿಂಗ್,
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


