ಪ್ರಧಾನ ಸುದ್ದಿ

ಚಿನ್ನದ ದರ ಭಾರಿ ಇಳಿಕೆ

Published On :

ಮುಂಬೈ: ಚಿನ್ನ ಕೊಳ್ಳುವವರಿಗೆ ಇದು ಸುಗ್ಗಿಯ ಕಾಲ.
ಗುರುವಾರ ಒಂದೇ ದಿನ ಹಳದಿ ಲೋಹದ ದರ 10ಗ್ರಾಂಗೆ 806 ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ 28 ಸಾವಿರದ ಗಡಿಯಿಂದ ಕೆಳಕ್ಕಿಳಿದಿದ್ದು, ಇದು ಕಳೆದ 10 ತಿಂಗಳಲ್ಲೇ ಆಗುತ್ತಿರುವ ಅತಿ ಹೆಚ್ಚಿನ ಇಳಿಕೆಯಾಗಿದೆ. ಹಳದಿ ಲೋಹದ ಆಮದಿನ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸಡಿಲಗೊಳಿಸಿದ್ದೇ ಚಿನ್ನದ ದರ ಗಣನೀಯವಾಗಿ ಇಳಿಕೆಯಾಗಲು ಕಾರಣ. ಆರ್‌ಬಿಐ ನಿರ್ಧಾರವು ಚಿನಿವಾರ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿತು. ಹೀಗಾಗಿ ಚಿನ್ನದ ದರ ಭಾರಿ ಇಳಿಕೆ ಕಂಡಿತು. ಗುರುವಾರ ಬೆಂಗಳೂರು ಚಿನಿವಾರ ಮಾರುಕಟ್ಟೆಯಲ್ಲಿ ಸ್ಟ್ಯಾಂಡರ್ಡ್ ಚಿನ್ನದ ದರ 10 ಗ್ರಾಂಗೆ 28,250 ಆಗಿದ್ದರೆ, ಆಭರಣ ಚಿನ್ನದ ದರ ಗ್ರಾಂಗೆ 2,628 ಆಗಿದೆ. ದೆಹಲಿಯಲ್ಲಿ 10ಗ್ರಾಂ ಸ್ಟ್ಯಾಂಡರ್ಡ್ ಚಿನ್ನಕ್ಕೆ 27,690, ಶುದ್ಧ ಚಿನ್ನಕ್ಕೆ ರು. 27,840 ಆಗಿದೆ.

ಮತ್ತೆ ಜಿಗಿದ ಷೇರುಪೇಟೆ
ಮುಂಬೈ: ಷೇರು ಮಾರುಕಟ್ಟೆ ಏರಿಕೆಯ ಹಾದಿ ಮುಂದುವರಿದಿದೆ. ಬುಧವಾರವಷ್ಟೇ ಸ್ವಲ್ಪಮಟ್ಟಿನ ಇಳಿಕೆ ಕಂಡಿದ್ದ ಷೇರುಪೇಟೆ ಮತ್ತೆ ಚೇತರಿಸಿಕೊಂಡಿದೆ. ಹೂಡಿಕೆದಾರರು ಷೇರುಗಳ ಖರೀದಿಯಲ್ಲಿ ಆಸಕ್ತಿ ವಹಿಸಿದ ಕಾರಣ ಗುರುವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 76 ಅಂಕ ಏರಿಕೆಯಾಗಿ, ದಿನಾಂತ್ಯಕ್ಕೆ 24,374ರಲ್ಲಿ ಕೊನೆಗೊಂಡಿತು. ನಿಫ್ಟಿ ಕೂಡ 23 ಅಂಕ ಏರಿಕೆಯಾಗಿ, 7,276ರಲ್ಲಿ ಕೊನೆಗೊಂಡಿತು. ರಿಲಯನ್ಸ್, ಎಸ್‌ಬಿಐ, ಟಿಸಿಎಸ್, ಎನ್‌ಟಿಪಿಸಿ, ಐಟಿಸಿ, ಐಸಿಐಸಿಐ ಬ್ಯಾಂಕು ಮತ್ತಿತರ ಷೇರುಗಳು ಲಾಭ ಗಳಿಸಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.