ಪ್ರಧಾನ ಸುದ್ದಿ

ಮೋದಿ ಪ್ರಮಾಣ ವಚನ ಸಮಾರಂಭ

Published On :

ಈ ಹಿಂದಿನ ಪ್ರಧಾನಿಗಳ ಪ್ರಮಾಣ ವಚನ ಸಮಾರಂಭಕ್ಕಿಂತ ಮೂರು ಪಟ್ಟು ದೊಡ್ಡಮಟ್ಟದಲ್ಲಿ ಮೋದಿಯವರ ಪ್ರಮಾಣ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ನೆರೆದೇಶಗಳ ವಿವಿಧ ನಾಯಕರಲ್ಲದೇ, ದೇಶದ ಹಿರಿಯ ರಾಜಕಾರಣಿಗಳು, ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಸಿನಿಮಾ ಹಾಗೂ ಕ್ರೀಡಾಲೋಕದ ತಾರೆಯರು ಆಗಮಿಸಿ ಮೋದಿಯವರಿಗೆ ಶುಭ ಕೋರಲಿದ್ದಾರೆ.

ದಿನಾಂಕ
 ಮೇ 26,
ಸೋಮವಾರ

ಸ್ಥಳ
ರಾಷ್ಟ್ರಪತಿ ಭವನದ ಮುಂಭಾಗ

ಸಮಯ
ಸಂಜೆ 6 ಗಂಟೆಗೆ

ವಾಜಪೇಯಿ (1998-2004), ಚಂದ್ರಶೇಖರ್ (1990-91) ನಂತರ, ಪ್ರಧಾನಿಯಾಗಿ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಮೂರನೇ ವ್ಯಕ್ತಿ ಮೋದಿ. ಸಾಮಾನ್ಯವಾಗಿ, ಪ್ರಧಾನಿ ಪ್ರಮಾಣ ವಚನ ದರ್ಬಾರ್ ಹಾಲ್‌ನಲ್ಲಿ ನಡೆಯುತ್ತಿತ್ತು. ಅಲ್ಲಿ, ಸುಮಾರು 450-500 ಜನರಿಗೆ ಆಸನ ವ್ಯವಸ್ಥೆ ಮಾಡಬಹುದು. ಈ ಬಾರಿ, ಮೋದಿಯವರ ಆಯ್ಕೆಯಂತೆ ರಾಷ್ಟ್ರಪತಿ ಭವನದ ಮುಂದೆ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ಇಲ್ಲಿ ಸುಮಾರು 5000 ಜನರ ಆಸನ ವ್ಯವಸ್ಥೆಗೆ ಅವಕಾಶವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.