ಪ್ರಧಾನ ಸುದ್ದಿ

ಪಂಚ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾ ದಾಳಿ

ಪಂಚ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾ ದಾಳಿ
Published On :

ಕ.ಪ್ರ. ವಾರ್ತೆ ಬೆಂಗಳೂರು ಮೇ 29
ಎಂ.ಎಸ್.ಐ.ಎಲ್ ವ್ಯವಸ್ಥಾಪಕ ನಿರ್ದೇಶಕ ಐಎಫ್‌ಎಸ್ ಅಧಿಕಾರಿ ಹರಿಕುಮಾರ್ ಝಾ ಸೇರಿ ರಾಜ್ಯದ ಐವರು ಭ್ರಷ್ಟ ಅಧಿಕಾರಿಗಳ ನಿವಾಸಗಳ ಮೇಲೆ ಗುರುವಾರ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು 15 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.
ಲೋಕೋಪಯೋಗಿ ಇಲಾಖೆ (ನೀರಾವರಿ) ಅಧೀಕ್ಷಕ ಎಂಜಿನಿಯರ್ ಬಿ.ಎಲ್.ರವೀಂದ್ರ ಬಾಬು, ಕೆಎಸ್‌ಆರ್‌ಟಿಸಿ ಹಣಕಾಸು ನಿರ್ದೇಶಕ ಎಸ್.ಪದ್ಮನಾಭನ್, ಕರ್ನಾಟಕ ಪ್ರದೇಶಾಭಿವದ್ಧಿ ಮಂಡಳಿ ಸಹಾಯಕ ಕಾರ್ಯದರ್ಶಿ ಆರ್.ಭಾಸ್ಕರ್, ಚಿಕ್ಕಬಳ್ಳಾಪುರ ಅಬಕಾರಿ ಇಲಾಖೆ ಉಪ ಆಯುಕ್ತ ಶ್ರೀನಿವಾಸ ಮೂರ್ತಿ ಅವರ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ.
ಹಲವು ವರ್ಷಗಳ ನಂತರ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಐಎಫ್‌ಎಸ್ ಅಧಿಕಾರಿಗಳಿಗೆ ಮನೆ ಕಟ್ಟಿಸಿಕೊಳ್ಳಲೆಂದು ಎಚ್‌ಎಸ್‌ಆರ್ ಬಡಾವಣೆಯಲ್ಲಿ ಸರ್ಕಾರ ಮಂಜೂರು ಮಾಡಿದ್ದ ಭೂಮಿಯನ್ನು ವಾಣಿಜ್ಯ ಭೂಮಿಯಾಗಿ ಪರಿವರ್ತಿಸಿಕೊಂಡಿರುವ ಹರಿಕುಮಾರ್ ಝಾ ಅವರು ವಾಣಿಜ್ಯ ಸಂಕೀರ್ಣ ನಿರ್ಮಿಸುತ್ತಿದ್ದಾರೆ. ನಿರ್ಮಾಣ ಹಂತದ ಈ ಕಟ್ಟಡದ ಮೌಲ್ಯವೇ 1.40 ಕೋಟಿಯಾಗಿದೆ.

ಯಾರ ಆಸ್ತಿ ಎಷ್ಟು?
ಬಿ.ಎಲ್.ರವೀಂದ್ರ ಬಾಬು, ಅಧೀಕ್ಷಕ ಎಂಜಿನಿಯರ್,ಲೋಕೋಪಯೋಗಿ ಇಲಾಖೆ (ನೀರಾವರಿ)

ಸೇವೆಗೆ ಸೇರಿದ್ದು: 1984
ಅಂದಾಜು ಆಸ್ತಿ: 10.72 ಕೋಟಿ
ಅಸಮತೋಲನ ಆಸ್ತಿ: 9.04 ಕೋಟಿ. ಶೇ.324.9
ಜಯನಗರ 4ನೇ ಟೀ ಬ್ಲಾಕ್‌ನಲ್ಲಿ 45/90 ವಿಸ್ತೀರ್ಣದಲ್ಲಿ 3 ಅಂತಸ್ತಿನ ವಾಣಿಜ್ಯ ಸಂಕೀರ್ಣ ಮೌಲ್ಯ 3 ಕೋಟಿ. 40/65 ನಿವೇಶನ ಮೌಲ್ಯ 93 ಲಕ್ಷ, ಜಯನಗರದಲ್ಲಿ 40/60 ನಿವೇಶನದಲ್ಲಿ ನಿರ್ಮಿಸುತ್ತಿರುವ ಕಟ್ಟಡ ಮೌಲ್ಯ 2.50 ಕೋಟಿ. ಜಯನಗರ 1ನೇ ಬ್ಲಾಕ್‌ನಲ್ಲಿ 40/60 ಮನೆ ಮೌಲ್ಯ 67 ಲಕ್ಷ. ಕಗ್ಗಲಹಳ್ಳಿಯಲ್ಲಿ 3 ಎಕರೆ ಜಮೀನಿನ ಮೌಲ್ಯ 96 ಲಕ್ಷ. ಜೆ.ಪಿ ನಗರ 2ನೇ ಹಂತದಲ್ಲಿ ಸಿ.ಎ ನಿವೇಶನ ಮೌಲ್ಯ 17 ಲಕ್ಷ.
ಚರಾಸ್ತಿ: ಬ್ಯಾಂಕ್ ಶಿಲ್ಕು 1.94 ಕೋಟಿ, 1 ಕೆಜಿ 250 ಗ್ರಾಂ ಚಿನ್ನಾಭರಣ, 2.75 ಕೆಜಿ ಬೆಳ್ಳಿ, ನಗದು 7.59 ಲಕ್ಷ, ಟೋಯೋಟಾ ಫಾರ್ಚ್ಯೂನರ್ ಕಾರು ಮೌಲ್ಯ 22 ಲಕ್ಷ, ವರ್ನಾ ಕಾರು 7 ಲಕ್ಷ, ಇಟಿಯೋಸ್ ಕಾರು ಮೌಲ್ಯ 6 ಲಕ್ಷ, ಕ್ವಾಲಿಸ್ 5.50 ಲಕ್ಷ, ಗೃಹೋಪಯೋಗಿ ವಸ್ತುಗಳು 5 ಲಕ್ಷ.

ಹರಿಕುಮಾರ್ ಝಾ, ಹೆಚ್ಚುವರಿ ಪಿಸಿಸಿಎಫ್ ಮತ್ತು ಎಂಎಸ್‌ಐಎಲ್ ಎಂ.ಡಿ
ಸೇವೆಗೆ ಸೇರಿದ್ದು: 1987
ಅಂದಾಜು ಆಸ್ತಿ: 2.65 ಕೋಟಿ.
ಅಸಮತೋಲನ ಆಸ್ತಿ: 1.74 ಕೋಟಿ. ಶೇ.99.67
ಎಚ್‌ಎಸ್‌ಆರ್ ಬಡಾವಣೆಯಲ್ಲಿ ಸೈಟ್ ಸಂಖ್ಯೆ 87ರಲ್ಲಿ 1.40 ಕೋಟಿ ಮೌಲ್ಯದ ನಿರ್ಮಾಣ ಹಂತದ ವಾಣಿಜ್ಯ ಸಂಕೀರ್ಣ. ಆರ್.ಎಂ.ವಿ ಬಡಾವಣೆಯಲ್ಲಿ ಮನೆ ಮೌಲ್ಯ 60 ಲಕ್ಷ. ಕರಿಷ್ಮಾ ಹಿಲ್ಸ್‌ನಲ್ಲಿ 22 ಗುಂಟೆ ನಿವೇಶನ ಮೌಲ್ಯ 10 ಲಕ್ಷ. ಬಿಹಾರದಲ್ಲಿ ಕೃಷಿ ಭೂಮಿ 7 ಲಕ್ಷ.
ಚರಾಸ್ಥಿ: ಮಾರುತಿ ಸ್ವಿಫ್ಟ್ ಕಾರು 6 ಲಕ್ಷ, ಐ10 ಕಾರು 6 ಲಕ್ಷ, ಐ20 ಕಾರು 6 ಲಕ್ಷ, ದ್ವಿಚಕ್ರ ವಾಹನ, ಠೇವಣೆ 2.5 ಲಕ್ಷ, ಎಲ್‌ಐಸಿ 5 ಲಕ್ಷ, ಎಂ.ಎಸ್.ಐ.ಎಲ್ ಚಿಟ್ 8 ಲಕ್ಷ, 349 ಗ್ರಾಂ ಚಿನ್ನಾಭರಣ, 6 ಕೆಜಿ ಬೆಳ್ಳಿ 1.29 ಲಕ್ಷ ನಗದು.

ಎಸ್.ಪದ್ಮನಾಭನ್, ಕೆಎಸ್‌ಆರ್‌ಟಿಸಿ ಹಣಕಾಸು ನಿರ್ದೇಶಕ
ಸೇವೆಗೆ ಸೇರಿದ್ದು:1981
ಅಂದಾಜು ಆಸ್ತಿ: 3.15 ಕೋಟಿ
ಅಸಮತೋಲನ ಆಸ್ತಿ: 2.35 ಕೋಟಿ. ಶೇ.107.19
ಪಾಪರೆಡಿಪಾಳ್ಯದಲ್ಲಿ 62.5/40 ವಿಸ್ತೀರ್ಣದಲ್ಲಿ ಮನೆ ಮೌಲ್ಯ 45 ಲಕ್ಷ, ಅದೇ ನಿವೇಶನದಲ್ಲಿ 3 ಅಂತಸ್ತಿನ ಕಟ್ಟಡ 80 ಲಕ್ಷ, 50/80 ನಿವೇಶನದಲ್ಲಿ ವಾಣಿಜ್ಯ ಮಳಿಗೆ ಹಾಗೂ ಖಾಲಿ ಜಾಗ ಮೌಲ್ಯ 55 ಲಕ್ಷ. ರಾಜಾಜಿನಗರದಲ್ಲಿ 30/46ನಲ್ಲಿ 3 ಅಂತಸ್ತಿನ ವಾಣಿಜ್ಯ ಮಳಿಗೆ ಹಾಗೂ ಖಾಲಿ ನಿವೇಶನ 25 ಲಕ್ಷ, ನಾಗವಾರದಲ್ಲಿ ಫ್ಲ್ಯಾಟ್ ಮೌಲ್ಯ 15 ಲಕ್ಷ, ಶೇಷಾದ್ರಿಪುರದಲ್ಲಿ ಫ್ಲ್ಯಾಟ್ 46 ಲಕ್ಷ, ಬಂತಗಳ್ಳಿ ಗ್ರಾಮದಲ್ಲಿ 2.37 ಎಕರೆ ಜಮೀನು 30 ಲಕ್ಷ.
ಚರಾಸ್ಥಿ: 2 ಲಕ್ಷ ನಗದು, 138 ಗ್ರಾಂ ಚಿನ್ನ, 2.34 ಕೆಜಿ ಬೆಳ್ಳಿ, 3 ಬ್ಯಾಂಕ್ ಲಾಕರ್‌ಗಳಲ್ಲಿರುವ ವಸ್ತುಗಳು ಮೌಲ್ಯಮಾಪನ ಮಾಡಬೇಕಿದೆ. 6 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು, ರೆನಾಲ್ಟ್ ಡಸ್ಟರ್ ಕಾರು ಮೌಲ್ಯ 10.50 ಲಕ್ಷ, 2 ಮೊಬೈಲ್ ಫೋನ್ 1 ಲಕ್ಷ.

ಆರ್.ಭಾಸ್ಕರ್, ಸಹಾಯಕ ಕಾರ್ಯದರ್ಶಿ
ಸೇವೆಗೆ ಸೇರಿದ್ದು:1981
ಅಂದಾಜು ಆಸ್ತಿ: 1.34 ಕೋಟಿ
ಅಸಮತೋಲನ ಆಸ್ತಿ: 89.05 ಲಕ್ಷ ಶೇ.127.21
ಆಡುಗೋಡಿಯಲ್ಲಿ ಮನೆ ಮೌಲ್ಯ 25 ಲಕ್ಷ, ಎಚ್‌ಎಸ್‌ಆರ್ ಬಡಾವಣೆಯಲ್ಲಿ ಮನೆ 45 ಲಕ್ಷ, ವಿಶ್ವಪ್ರಿಯನಗರದಲ್ಲಿ ನಿವೇಶನ 13 ಲಕ್ಷ, ಅರ್ಕಾವತಿ ಬಡಾವಣೆಯಲ್ಲಿ 2 ನಿವೇಶನ 4 ಲಕ್ಷ, ಬೇಗೂರಿನಲ್ಲಿ ನಿವೇಶನ 16 ಲಕ್ಷ, ಸೇಲಂ, ಬೇಗೂರು, ಡೌಡಸಂದ್ರದಲ್ಲಿ 3 ನಿವೇಶನಗಳ ಮೌಲ್ಯ 15 ಲಕ್ಷ.
ಚರಾಸ್ಥಿ: ಸ್ಯಾಂಟ್ರೋ ಕಾರ್, ಇನ್ನೋವಾ ಕಾರ್ 7 ಲಕ್ಷ, ಬುಲೆಟ್ ಬೈಕ್ 1.25 ಲಕ್ಷ, ಗೃಹೋಪಯೋಗಿ ವಸ್ತುಗಳು 6 ಲಕ್ಷ, 525 ಗ್ರಾಂ ಚಿನ್ನಾಭರಣ, 2 ಕೆ.ಜಿ ಬೆಳ್ಳಿ ಹಾಗೂ 2 ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಬೇಕಿದೆ.

ಶ್ರೀನಿವಾಸಮೂರ್ತಿ, ಉಪ ಆಯುಕ್ತರು ಅಬಕಾರಿ ಇಲಾಖೆ
ಸೇವೆಗೆ ಸೇರಿದ್ದು: 1978
ಅಂದಾಜು ಆಸ್ತಿ: 2.17 ಕೋಟಿ
ಅಸಮತೋಲನ ಆಸ್ತಿ: 1.65 ಕೋಟಿ ಶೇ.207.14
ಇಸ್ರೋ ಬಡಾವಣೆಯಲ್ಲಿ ಕಟ್ಟಡ ಮೌಲ್ಯ 1 ಕೋಟಿ, ಜೆ.ಪಿ ನಗರದಲ್ಲಿ ಕಟ್ಟಡದ 20 ಲಕ್ಷ, ಸೈಟ್ 10 ಲಕ್ಷ, ಸರ್ಜಾಪುರದಲ್ಲಿ 2 ಜಮೀನುಗಳು 16 ಲಕ್ಷ. ಮೈಸೂರಿನ ಬೋಗಾದಿಯಲ್ಲಿ ಆಸ್ತಿ ಪರಿಶೀಲನೆ.
ಚರಾಸ್ತಿ: ಇನ್ನೋವಾ ಕಾರು ಮೌಲ್ಯ 12 ಲಕ್ಷ, ಐ10 ಕಾರ್ 5 ಲಕ್ಷ, ಪುಂಟೋ ಕಾರು 4.50 ಲಕ್ಷ, 1 ಕೆಜಿ 145 ಗ್ರಾಂ ಚಿನ್ನಾಭರಣ ಹಾಗೂ ವಜ್ರಾಭರಣಗಳ ಮೌಲ್ಯ 33 ಲಕ್ಷ, ಗೃಹೋಪಯೋಗಿ ವಸ್ತುಗಳು 10 ಲಕ್ಷ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.