ಪ್ರಧಾನ ಸುದ್ದಿ

ಪ್ರಧಾನಿ 'ಹಿಂದೂಸ್ತಾನದ ಮನ್ ಕಿ ಬಾತ್' ಕೇಳಬೇಕು: ರಾಹುಲ್ ಗಾಂಧಿ

ಬಿಜೆಪಿ ನಾಯಕರ ವಿರುದ್ಧ ಹಲವಾರು ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ

ಪ್ರಧಾನಿ 'ಹಿಂದೂಸ್ತಾನದ ಮನ್ ಕಿ ಬಾತ್' ಕೇಳಬೇಕು: ರಾಹುಲ್ ಗಾಂಧಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
Published On :

ನವದೆಹಲಿ: ಬಿಜೆಪಿ ನಾಯಕರ ವಿರುದ್ಧ ಹಲವಾರು ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಪ್ರಧಾನಿ 'ಹಿಂದೂಸ್ತಾನದ ಮನ್ ಕಿ ಬಾತ್' ಕೇಳಬೇಕು ಎಂದು ಮಂಗಳವಾರ ಹೇಳಿದ್ದಾರೆ.

"ಪ್ರಧಾನಿ 'ಮನ್ ಕಿ ಬಾತ್' ಕಾರ್ಯಕ್ರಮ ನಡೆಸಲು ಇಚ್ಚಿಸುತ್ತಾರೆ ಬದಲಾಗಿ ಅವರು  'ಹಿಂದೂಸ್ತಾನದ ಮನ್ ಕಿ ಬಾತ್ ಕೇಳಬೇಕು'. ರಾಜೀನಾಮೆಗಾಗಿ ಆಗ್ರಹಿಸುತ್ತಿರುವುದು ಕಾಂಗ್ರೆಸ್ ಅಲ್ಲ, ದೇಶದ ಪ್ರಜೆಗಳು" ಎಂದಿದ್ದಾರೆ ರಾಹುಲ್.

೩೫ ಕಾಂಗ್ರೆಸ್ ಸಂಸದರನ್ನು ಅಮಾನತು ಮಾಡಿರುವುದು ಈ ಸರ್ಕಾರ ರಾಷ್ಟ್ರದಾದ್ಯಂತ ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಏನು ಮಾಡುತ್ತಿದೆ ಎಂದು ಸಾಂಕೇತಿಕವಾಗಿ ತಿಳಿಯುತ್ತದೆ ಎಂದಿದ್ದಾರೆ.

"ಅವರು ನಮ್ಮನ್ನು ಸಂಸತ್ತಿನಿಂದ ಹೊರಗೆಸಯಬಹುದು ಇದಕ್ಕೆ ನಾವು ಹೆದರುವುದಿಲ್ಲ" ಎಂದಿದ್ದಾರೆ.

"ನಮ್ಮನ್ನು ಸಂಸತ್ತಿನಿಂದ ಹೊರಗೆಸೆದರೂ ನಾವು ಅವರ ವಿರುದ್ಧ ಒತ್ತಡ ಹೇರುವುದನ್ನು ಕಡಿಮೆ ಮಾಡುವುದಿಲ್ಲ... ವ್ಯಾಪಂ ಹಗರಣ ಸಾವಿರಾರು ಜನರ ಜೀವನವನ್ನು ಹಾಳುಗೆಡವಿದೆ, ಸುಷ್ಮಾ ಸ್ವರಾಜ್ ಅವರು ಕಾನೂನು ಉಲ್ಲಂಘಿಸಿದ್ದಾರೆ, ರಾಜಸ್ಥಾನ ಮುಖ್ಯಮಂತ್ರಿ ಆರೋಪಿ ಲಲಿತ್ ಮೋದಿ ಅವರೊಂದಿಗೆ ಹಣಕಾಸು ವ್ಯವಹಾರ ನಡೆಸಿದ್ದಾರೆ" ಎಂದು ಅವರು ತಿಳಿಸಿದ್ದಾರೆ.

ಸಂಸತ್ ಆವರಣದಲ್ಲಿ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಸದಸ್ಯರ ನಾಯಕತ್ವ ವಹಿಸಿದ್ದ ರಾಹುಲ್ ಗಾಂಧಿ, ನಮ್ಮನ್ನು ಮೌನಕ್ಕೆ ಶರಣು ಮಾಡಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಅವರ ನಾಯಕತ್ವದ ಎನ್ ಡಿ ಎ ಅರ್ಥ ಮಾಡಿಕೊಳ್ಳಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.