

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2015-16ನೇ ಸಾಲಿಗೆ ದ್ವಿತೀಯ ಹಾಗೂ ತೃತೀಯ ಬಿಎ, ಬಿ.ಕಾಂ ಮತ್ತು ಅಂತಿಮ ಎಂ.ಎ, ಎಂ.ಕಾಂ ಶಿಕ್ಷಣ ಕ್ರಮಗಳ ಪ್ರವೇಶಾತಿ ನವೀಕರಣಕ್ಕೆ ದಿನಾಂಕ ನಿಗದಿಗೊಳಿಸಿದೆ ಎಂದು ವಿವಿ ಕುಲಸಚಿವ ಪ್ರೊ.ಪಿ.ಎಸ್. ನಾಯಕ್ ತಿಳಿಸಿದ್ದಾರೆ.
ದ್ವಿತೀಯ ಬಿಎ, ಬಿ.ಕಾಂ ಪ್ರವೇಶಾತಿಗೆ ದಂಡ ಶುಲ್ಕವಿಲ್ಲದೆ ಶುಲ್ಕ ಪಾವತಿಸಲು 2016ರ ಜ.4, ರು.200 ದಂಡ ಶುಲ್ಕದೊಂದಿಗೆ ಶುಲ್ಕ ಪಾವತಿಸಲು ಜ.18 ಹಾಗೂ ರು. 400 ದಂಡ ಶುಲ್ಕದೊಂದಿಗೆ ಶುಲ್ಕ ಪಾವತಿಸಲು ಜ.28 ಕೊನೆಯ ದಿನ. ತೃತೀಯ ಬಿಎ, ಬಿ.ಕಾಂ ಪ್ರವೇಶಾತಿಗೆ ದಂಡ ಶುಲ್ಕವಿಲ್ಲದೆ ಶುಲ್ಕ ಪಾವತಿಸಲು 2016ರ ಜ.5, ರು.200 ದಂಡ ಶುಲ್ಕದೊಂದಿಗೆ ಶುಲ್ಕ ಪಾವತಿಸಲು ಜ.19 ಹಾಗೂ ರು. 400 ದಂಡ ಶುಲ್ಕದೊಂದಿಗೆ ಶುಲ್ಕ ಪಾವತಿಸಲು ಜ.29 ಕೊನೆಯ ದಿನ. ಅಂತಿಮ ಎಂಎ, ಎಂ.ಕಾಂ ಪ್ರವೇಶಾತಿಗೆ ದಂಡ ಶುಲ್ಕವಿಲ್ಲದೆ ಶುಲ್ಕ ಪಾವತಿಸಲು 2016ರ ಜ.6, ರು. 200 ದಂಡ ಶುಲ್ಕದೊಂದಿಗೆ ಶುಲ್ಕ ಪಾವತಿಸಲು ಜ.20 ಹಾಗೂ ರು. 400 ದಂಡ ಶುಲ್ಕದೊಂದಿಗೆ ಶುಲ್ಕ ಪಾವತಿಸಲು ಜ.30 ಕೊನೆಯ ದಿನ. ನಿಗದಿತ ದಿನಾಂಕದೊಳಗೆ ಪ್ರವೇಶಾತಿ ನವೀಕರಣ ಮಾಡಿಕೊಳ್ಳುವಂತೆ ಕುಲಸಚಿವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ karnatakastate openuniversity.in ವೆಬ್‍ಸೈಟ್ ಸಂಪರ್ಕಿಸಿ.