ಸಿಬಿಐ ದಾಳಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಅಲ್ಲ: ಜೇಟ್ಲಿ

ಸಿಬಿಐ ದಾಳಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧವಲ್ಲ ಬದಲಾಗಿ ಅವರ ಕಚೇರಿಯ ಪಕ್ಕಕ್ಕಿದ್ದ ಅಧಿಕಾರಿಯ ಮೇಲೆ ಎಂದಿರುವ ಕೇಂದ್ರ ವಿತ್ತ ಸಚಿವ
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ
Updated on: 

ನವದೆಹಲಿ: ಸಿಬಿಐ ದಾಳಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧವಲ್ಲ ಬದಲಾಗಿ ಅವರ ಕಚೇರಿಯ ಪಕ್ಕಕ್ಕಿದ್ದ ಅಧಿಕಾರಿಯ ಮೇಲೆ ಎಂದಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಆಮ್ ಆದ್ಮಿ ಪಕ್ಷದ ಈ ದೂರು ಸುಳ್ಳು ಎಂದಿದ್ದಾರೆ.

ತೃಣಮೂಲ ಕಾಂಗ್ರೆಸ್ ನ ಸದಸ್ಯ ಡೆರೆಕ್ ಓ ಬ್ರೇನ್ ಅವರು ರಾಜ್ಯಸಭೆಯಲ್ಲಿ ಸಿಬಿಐ ದಾಳಿಯ ವಿಷಯ ಪ್ರಸ್ತಾಪಿಸಿ "ಆಧುನಿಕ ಭಾರತದ ಇತಿಹಾಸದಲ್ಲಿಯೇ ಇದು ಮೊದಲ ಬಾರಿಗೆ ನಡೆದಿದೆ" ಎಂದು ದೂರಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಜೇಟ್ಲಿ "ಕೇಜ್ರಿವಾಲ್ ಅವರಾಗಲೀ ಅವರ ದೆಹಲಿ ಆಡಳಿತಕ್ಕಾಗಲೀ ಸಿಬಿಐ ದಾಳಿ ಸಂಬಧಿಸಿದ್ದಲ್ಲ. ಅವರು ಮುಖ್ಯಮಂತ್ರಿ ಆಗುವುದಕ್ಕಿಂತಲೂ ಮೊದಲಿನ ಅಧಿಕಾರಿಯೊಬ್ಬರ ಕಚೇರಿ ಮುಖ್ಯಮಂತ್ರಿ ಕಚೇರಿಯ ಪಕ್ಕದಲ್ಲಿದ್ದು, ಆ ಅಧಿಕಾರಿಯ ಕಚೇರಿಯ ಮೇಲೆ ನಡೆದ ದಾಳಿ ಇದು" ಎಂದಿದ್ದಾರೆ.

ಮಂಗಳವಾರ ಬೆಳಗ್ಗೆ ಟ್ವೀಟ್ ಮಾಡಿದ್ದ ಅರವಿಂದ್ ಕೇಜ್ರಿವಾಲ್ ಅವರು ಇದು ರಾಜಕೀಯ ದುರುದ್ದೇಶ "ಮೋದಿ ನನ್ನನ್ನು ರಾಜಕೀಯವಾಗಿ ಹಣೆಯಲು ಸಾಧ್ಯವಾಗದೆ, ಹೇಡಿತನ ತೋರಿದ್ದಾರೆ. ಅವರು ಸೈಕೋಪಾತ್" ಎಂದು ಬರೆದಿದ್ದರು.

ಅರುಣ್ ಜೇಟ್ಲಿ ಅವರ ಸ್ಪಶ್ಟೀಕರಣವನ್ನು ತಳ್ಳಿಹಾಕಿರುವ ಕೇಜ್ರಿವಾಲ್ "ವಿತ್ತ ಸಚಿವ ಸಂಸತ್ತಿನಲ್ಲಿ ಸುಳ್ಳು ಹೇಳಿದ್ದಾರೆ. ನನ್ನ ವಿರುದ್ಧ ಸಾಕ್ಷ್ಯಗಳನ್ನು ಕಲೆ ಹಾಕಲು ನನ್ನ ಕಚೇರಿಯ ಕಡತಗಳನ್ನು ಸಿಬಿಐ ತಪಾಸಣೆ ನಡೆಸಿದ್ದಾರೆ" ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com