

ಕೋಲ್ಕತ್ತ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಚೇರಿ ಮೇಲೆ ಸಿಬಿಐ ಮಂಗಳವಾರ ನಡೆಸಿದ ದಾಳಿಯಿಂದ ಆಘಾತವಾಗಿದೆ ಎಂದಿದ್ದಾರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.
"ಮುಖ್ಯಮಂತ್ರಿ ಕಚೇರಿಗೆ ಬೀಗ ಜಡೆಯುವುದನ್ನು ಹಿಂದೆಂದೂ ನೋಡಿಲ್ಲ. ನನಗೆ ಆಘಾತವಾಗಿದೆ" ಎಂದು ಮಮತಾ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅರವಿಂದ್ ಕೇಜ್ರಿವಾಲ್ "ಮಮತಾ ಡಿ, ಇದು ಅಘೋಷಿತ ತುರ್ತುಪರಿಸ್ಥಿತಿ" ಎಂದಿದ್ದಾರೆ.