

ನ್ಯೂಯಾರ್ಕ್: ವಿದ್ಯಾರ್ಥಿನಿಯೊಬ್ಬಳ ಕೊಠಡಿಗೆ ತೆರಳಿ ಲೈಂಗಿಕ ಕಿರುಕುಳ ಕೊಟ್ಟ ಆರೋಪದ ಮೇಲೆ ೧೮ ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಅಮೇರಿಕಾದಲ್ಲಿ ಬಂಧಿಸಲಾಗಿದೆ.
ನವದೆಹಲಿ ಮೂಲದ ಅಭಯ್ ಪಂತ್ ನ್ಯೂಯಾರ್ಕ್ ನ ಆಸ್ವೇಗೊದ ಸ್ಟೇಟ್ ಯುನಿವರ್ಸಿಟಿ ಆಫ್ ನ್ಯೂಯಾರ್ಕ್ ನ ವಿದ್ಯಾರ್ಥಿ. ವಿಶ್ವವಿದ್ಯಾಲಯದ ದಿನಪತ್ರಿಕೆ 'ದ ಆಸ್ವೆಗೋನಿಯನ್' ಪ್ರಕಾರ ಮೊದಲ ಡಿಗ್ರೀ ರೇಪ್ ಆಪಾದನೆಯಲ್ಲಿ ವಿಶ್ವವಿದ್ಯಾಲಯ ಪೊಲೀಸರು ಪಂತ್ ಅವರನ್ನು ಬಂಧಿಸಿದ್ದಾರೆ.
ಈಗ ಸದ್ಯಕ್ಕೆ ಆಸ್ವೇಗೋದ ಸುಧಾರಣ ಗೃಹದಲ್ಲಿ ಬಂದಿತನಾಗಿದ್ದಾನೆ.