ಬಿಜೆಪಿ ಸೇರಿದ ನಟಿ ರೂಪಾ ಗಂಗೂಲಿ

ಪ್ರಸಿದ್ಧ ನಟಿ, ಗಾಯಕಿ ರೂಪ ಗಂಗೂಲಿ ಬುಧುವಾರ ಬಿಜೆಪಿಗೆ
ರೂಪ ಗಂಗೂಲಿ
ರೂಪ ಗಂಗೂಲಿ

ಕೋಲ್ಕತ್ತ: ಪ್ರಸಿದ್ಧ ನಟಿ, ಗಾಯಕಿ ರೂಪ ಗಂಗೂಲಿ ಬುಧುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಹೌರಾದ್ ನ ಶರತ್ ಸದನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಮಂತ್ರಿ ಅರುಣ್ ಜೈಟ್ಲಿ ಸಮಕ್ಷಮದಲ್ಲಿ ಇವರು ಬಿಜೆಪಿಗೆ ಸೇರಿದ್ದಾರೆ. ಇವರಿಗೆ ಬಿಜೆಪಿ ಬಾವುಟ ಕೊಡುವುದರ ಮೂಲಕ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರಿಸಿಕೊಳ್ಳಲಾಗಿದೆ.

ಟಿವಿ ಧಾರಾವಾಹಿ  'ಮಹಾಭಾರತ'ದಲ್ಲಿ ದ್ರೌಪದಿ ಪಾತ್ರದ ಮೂಲಕ ಇವರು ಪ್ರಸಿದ್ಧಿಯಾಗಿದ್ದರು. ಗೌತಮ್ ಘೋಷ್ ಅವರ 'ಪದ್ಮ ನದಿರ್ ಮಾಜ್ ಹಿ', ಅಪರ್ಣಾ ಸೇನ್ ಅವರ 'ಯುಗಾಂತ', ರಿತುಪರ್ಣಘೋಷ್ ಅವರ 'ಅಂತರ್ ಮಹಲ್' ಸಿನಿಮಾಗಳು ಇವರಿಗೆ ಉತ್ತಮ ಹೆಸರು ತಂದುಕೊಟ್ಟಿದ್ದವು.  'ಅಬೊಷೆಷೆ ' ಬೆಂಗಾಲಿ ಸಿನಿಮಾದಲ್ಲಿಯ ಇವರ  ಗಾಯಕನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಪ್ರಮುಖ ಬಾಲಿವುಡ್ ಗಾಯಕ ಕುಮಾರ್ ಸಾನು ಕೂಡ ಇತ್ತೀಚೆಗೆ ಬಿಜೆಪಿ ಸೇರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com