ಮುಂಬೈ ವಿಮಾನ ನಿಲ್ದಾಣದಲ್ಲಿ ಬೆದರಿಕೆ ಸಂದೇಶ ಪತ್ತೆ

ಗಣರಾಜ್ಯೋತ್ಸವ ದಿನದಂದು ದಾಳಿ ನಡೆಸುತ್ತೇವೆ ಎಂದು ಇಸ್ಲಾಮಿಕ್ ರಾಷ್ಟ್ರ (ಇಸಿಸ್) ಸಂಘಟನೆ ಬರೆದ ಬೆದರಿಕೆ...
ಬೆದರಿಕೆ ಸಂದೇಶ
ಬೆದರಿಕೆ ಸಂದೇಶ

ಮುಂಬೈ: ಗಣರಾಜ್ಯೋತ್ಸವ ದಿನದಂದು ದಾಳಿ ನಡೆಸುತ್ತೇವೆ ಎಂದು ಇಸ್ಲಾಮಿಕ್ ರಾಷ್ಟ್ರ (ಇಸಿಸ್) ಸಂಘಟನೆ ಬರೆದ ಬೆದರಿಕೆ ಸಂದೇಶವೊಂದು ಮುಂಬೈ ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಶುಕ್ರವಾರ ಪತ್ತೆಯಾಗಿದೆ.

9 ದಿನಗಳ ಹಿಂದೆ ಇದೇ ರೀತಿಯ ಸಂದೇಶ ಪತ್ತೆಯಾಗಿತ್ತು.

ವಿಮಾನ ನಿಲ್ದಾಣದ ಟರ್ಮಿನಲ್ 1A ಯಲ್ಲಿರುವ ಶೌಚಾಲಯದ ಗೋಡೆಯಲ್ಲಿ ಬೆದರಿಕೆ ಸಂದೇಶ ಪತ್ತೆಯಾಗಿದೆ. ಜನವರಿ 7ರಂದು 2 A ಯಲ್ಲಿರುವ ಶೌಚಾಲಯದ ಗೋಡೆಯಲ್ಲಿ ಇಸಿಸ್ ಬೆದರಿಕೆ ಸಂದೇಶ ಪತ್ತೆಯಾಗಿತ್ತು.

ಎರಡೆರಡು ಬಾರಿ ಬೆದರಿಕೆ ಸಂದೇಶ ಸಿಕ್ಕಿರುವುದರಿಂದ ಇದೀಗ ಮುಂಬೈ ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com