ಪ್ರಧಾನ ಸುದ್ದಿ

ಬೆರಳ ತುದಿಯಲ್ಲಿ ಬೆಂಕಿ ಸುದ್ದಿ!! ನೂತನ ವಿನ್ಯಾಸದೊಂದಿಗೆ ಕನ್ನಡಪ್ರಭ.ಕಾಂ

ಬೆರಳ ತುದಿಯಲ್ಲಿ ಬೆಂಕಿ ಸುದ್ದಿ!! ನೂತನ ವಿನ್ಯಾಸದೊಂದಿಗೆ ಕನ್ನಡಪ್ರಭ.ಕಾಂ
Published On :

ಪ್ರಿಯ ಓದುಗರೇ ಕನ್ನಡಪ್ರಭ.ಕಾಂ ಗೆ ಆತ್ಮೀಯ ಸ್ವಾಗತ. ಪ್ರಾದೇಶಿಕ, ಕರ್ನಾಟಕ, ದೇಶದ ಹಾಗೂ ಜಾಗತಿಕ ಸುದ್ದಿಗಳನ್ನು ಇನ್ನು ಮುಂದೆ ನೀವು ಈ ಹೊಸ ವಿನ್ಯಾಸದಲ್ಲಿ, ಸಾಂಪ್ರದಾಯಿಕತೆಯನ್ನು ಮುರಿದು ಕಟ್ಟಿರುವ ಈ ನಮ್ಮ ಅಂತರ್ಜಾಲ ತಾಣದಲ್ಲಿ ಓದಬಹುದು, ಪ್ರತಿಕ್ರಿಯಿಸಬಹುದು ಮತ್ತು ಜಗತ್ತಿನ ಜೊತೆ ಹಂಚಿಕೊಳ್ಳಬಹುದು.

ಈ ಹೊಸ ಅವತಾರದಲ್ಲಿ ನಾವು ನಿಮಗೆ ಕ್ಷಣ ಕ್ಷಣದ ಬ್ರೇಕಿಂಗ್ ನ್ಯೂಸ್, ಸುದ್ದಿ ವಿಶ್ಲೇಷಣೆಗಳು ಹಾಗೂ ಅನನ್ಯ ಸುದ್ದಿಗಳನ್ನು ನಿಮಗೆ ಉಣಬಡಿಸಲಿದ್ದೇವೆ. ಇದು ನಮ್ಮ ವಚನ. ಅಂತರ್ಜಾಲದಲ್ಲಿ ಪ್ರಾದೇಶಿಕ ಭಾಷೆಯ ಸುದ್ದಿಯನ್ನು ಬಿತ್ತರಿಸುವ ಹಾಗು ಜನರು ಅದನ್ನು ಓದುವ ದೃಷ್ಟಿಕೋನವನ್ನು ಬದಲಿಸಲಿದ್ದೇವೆ. ಗಡಿಗಳನ್ನು ಮೀರಿ ಯಾವುದೇ ಭಾಷೆಯಲ್ಲಿ ಸುದ್ದಿ ಸ್ಪೋಟಗೊಂಡರೂ ಅದು ನಮ್ಮ ತಾಣದಲ್ಲಿ ಮೊದಲು ಬಿತ್ತರವಾಗುವಂತೆ ವೇಗವನ್ನು ಕಾಯ್ದುಕೊಳ್ಳಲಿದ್ದೇವೆ.

ದೇಶ ವಿದೇಶದ ಸುದ್ದಿಗಳು, ಉದ್ಯಮ, ಮನರಂಜನೆ ಮತ್ತು ಕ್ರೀಡಾ ಸುದ್ದಿಗಳನ್ನು ತಾಜಾತನದಿಂದ ಕ್ಷಣ ಕ್ಷಣಕ್ಕೂ ಬಿತ್ತರಿಸುವುದಲ್ಲದೆ, ಎಲ್ಲವನ್ನೂ ಸುಲಭವಾಗಿ ನೋಡಲು ಗ್ರಹಿಸಲು ಸಾಧ್ಯವಾಗುವಂತೆ ಒಂದೇ ಕಡೆ ಕ್ರೋಢೀಕರಿಸಲು ಪ್ರಯತ್ನಿಸಿದ್ದೇವೆ. ಅತ್ಯುತ್ತಮ ಫೋಟೋ ಸಮುಚ್ಛಯ, ವಿಡಿಯೋಗಳು, ಚರ್ಚೆಗಳು ಈ ನವೀನ ವಿನ್ಯಾಸದ ತಾಣದಲ್ಲಿ ಒಟ್ಟಿಗೆ ಸಿಗುವಂತೆ ನಾವು ಮಾಡಿದ್ದೇವೆ.

ಸುದ್ದಿ ಮಾಧ್ಯಮದ ಇಂದಿನ ಕಾಲಘಟ್ಟದಲ್ಲಿ ಓದುಗನೇ ದೊರೆ. ನಿಮಗೆ ಯಾವ ಸುದ್ದಿ ಬೇಕು, ಅದನ್ನು ನಾವು ಯಾವ ರೀತಿ ಪ್ರಸ್ತುತಪಡಿಸಬೇಕು, ಅದನ್ನು ನೀವು ಯಾವ ರೀತಿ ಬಳಸುತ್ತೀರ ಎಂಬುದನ್ನು ನಿರ್ದೇಶಿಸುವುದು ಓದುಗ ಮಹಾಶಯರೇ. ಇಂತಹ ಸುದ್ದಿ ಮಾಧ್ಯಮದ ಅಭಿವೃದ್ಧಿಯಲ್ಲಿ ನಿಮ್ಮ ಪಾತ್ರ ಗುರುತರವಾದದ್ದು. ನಿಮ್ಮ ಪ್ರತಿಕ್ರಿಯಗಳನ್ನು, ನಿಮ್ಮ ಚಿಂತನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿ. ನಿಮಗೆ ಇಷ್ಟವಾಗುವ ರೀತಿಯಲ್ಲಿ ಸೇವೆ ನೀಡುವ ಜವಾಬ್ದಾರಿ ನಮ್ಮದು. ಅತಿ ಶೀಘ್ರದಲ್ಲೇ ಓದುಗರ ಜೊತೆಗಿನ ಸಂವಾದಕ್ಕೆ ಪ್ರತ್ಯೇಕ ಅವಕಾಶ ನೀಡಲಾಗುವುದು. ನೀವು ನಿಮಗೆ ಬೇಕಾದ ರೀತಿಯಲ್ಲಿ ಕನ್ನಡಪ್ರಭ.ಕಾಂ ಮುನ್ನಡೆಸಬಹುದು.

ಸರಳ ಸ್ಪಷ್ಟ ವಿನ್ಯಾಸ, ಸುದ್ದಿಗಳನ್ನು ಜಾಲಾಡಲು ಸುಲಭ ಕೊಂಡಿಗಳೊಂದಿಗೆ ಮುಖಪುಟದಲ್ಲೇ ಎಲ್ಲ ವಿಭಾಗದ ಸುದ್ದಿಗಳು ನಿಮಗೆ ಲಭ್ಯವಾಗಲಿದೆ. ಹಾಗೆಯೇ ಸರಳ ಗ್ರಹಿಕೆಗಾಗಿ, ಬಳಕೆಗಾಗಿ ಹೊಸ ವಿಭಾಗಗಳನ್ನು ಕೂಡ ಸೇರಿಸಿದ್ದೇವೆ.

ಮತ್ತೆ ಕನ್ನಡಪ್ರಭ.ಕಾಂಗೆ ಆತ್ಮೀಯ ಸ್ವಾಗತ. ನಿಮ್ಮದೇ ತಾಣ ಇದು. ನಿಮ್ಮ ಇಚ್ಛೆಯಂತೆ ಬಳಸಿ, ಬೆಳೆಸಿ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.