ನವದೆಹಲಿ: ತಮ್ಮ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಶುಭಾಶಯ ಮತ್ತು ಪ್ರತಿ ಧನ್ಯವಾದಗಳ ಸಂಭಾಷಣೆ ನಡೆದದ್ದು ಟ್ವಿಟ್ಟರ್ ಮೈಕ್ರೋಬ್ಲಾಗಿಂಗ್ ತಾಣದಲ್ಲಿ.
ಜೂನ್ ೧೯ ಅಂದರೆ ಇಂದಿಗೆ ರಾಹುಲ್ ಗಾಂಧಿ ಅವರಿಗೆ ೪೫ ವರ್ಷ ತುಂಬಿದೆ. ಸಕ್ರಿಯ ರಾಜಕಾರಣಕ್ಕೆ ಬಂದ ಮೇಲೆ ಇದೇ ಮೊದಲಬಾರಿಗೆ ಭಾರತದಲ್ಲಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವುದು ಎನ್ನಲಾಗಿದೆ.
ಇಲ್ಲಿವೆ ಟ್ವೀಟ್ ಗಳು .