ಬೆಂಗಳೂರು, ಕರಾಚಿ ವಿಶ್ವದಲ್ಲೇ ಚೀಪೆಸ್ಟ್ ನಗರಗಳು: ಸಮೀಕ್ಷೆ

ಸಿಲಿಕಾನ್ ಸಿಟಿ ಬೆಂಗಳೂರು ಭಾರಿ ಕಾಸ್ಟ್ಲಿಆಗ್ತಿದೆ ಕಣ್ರೀ... ಈ ಐಟಿ ಬಿಟಿ ಬಂದ್ಮೇಲೆ ಅಂತೂ ಜನಸಾಮಾನ್ಯರು ಬದುಕೊದೇ ಕಷ್ಟ ಆಗಿದೆ ಅಂತ ಉದ್ಘಾರ ತೆಗೆಯುತ್ತಿದ್ದವರಿಗೊಂದು...
ಬೆಂಗಳೂರು
ಬೆಂಗಳೂರು
Updated on: 

ಲಂಡನ್: ಸಿಲಿಕಾನ್ ಸಿಟಿ ಬೆಂಗಳೂರು ಭಾರಿ ಕಾಸ್ಟ್ಲಿಆಗ್ತಿದೆ ಕಣ್ರೀ... ಈ ಐಟಿ ಬಿಟಿ ಬಂದ್ಮೇಲೆ ಅಂತೂ ಜನಸಾಮಾನ್ಯರು ಬದುಕೊದೇ ಕಷ್ಟ ಆಗಿದೆ ಅಂತ ಉದ್ಘಾರ ತೆಗೆಯುತ್ತಿದ್ದವರಿಗೊಂದು ಶಾಕಿಂಗ್ ನ್ಯೂಸ್. ಹೌದು ನಮ್ಮ ಬೆಂಗಳೂರು ದುಬಾರಿ ಅಲ್ಲ. ವಿಶ್ವದಲ್ಲೇ ಬೆಂಗಳೂರು ಹಾಗೂ ಪಾಕಿಸ್ತಾನದ ಕರಾಚಿ ಜೀವನ ಮಾಡಲು ಅತಿ ಕಡಿಮೆ ವೆಚ್ಚದ ನಗರಗಳು ಎಂದು ಜಾಗತಿಕ ಸಮೀಕ್ಷೆಯೊಂದು ಹೇಳಿದೆ.

ಇನ್ನು ದೇಶದ ವಾಣಿಜ್ಯ ನಗರಿ ಮುಂಬೈ, ಚೆನ್ನೈ ಹಾಗೂ ದೆಹಲಿ ಸಹ ಎಕನಾಮಿಕ್ ಇಂಟೆಲಿಜೆನ್ಸ್ ಯೂನಿಟ್(ಇಐಯು) ಸಮೀಕ್ಷೆ ನಡೆಸಿ ಸಿದ್ಧಪಡಿಸಿರುವ 'ವಿಶ್ವದಾದ್ಯಂತ ಜೀವನ ವೆಚ್ಚ ವರದಿ 2015'ರಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿವೆ. ವಿಶ್ವದ ಆರು ಅತಿ ಕಡಿಮೆ ಜೀವನ ವೆಚ್ಚದ ನಗರಗಳ ಪೈಕಿ ಭಾರತದ ನಾಲ್ಕು ನಗರಗಳು ಸ್ಥಾನ ಪಡೆದುಕೊಂಡಿವೆ.

ಅಮೆರಿಕದ ನ್ಯೂಯಾರ್ಕ್ ನಗರವನ್ನು ಆಧಾರವಾಗಿಟ್ಟುಕೊಂಡು, ತೈಲ ಬೆಲೆ ಕಡಿಯಾಗುತ್ತಿರುವುದು ಸೇರಿದಂತೆ ಅಲ್ಲಿನ ವೇತನ, ಮಾರುಕಟ್ಟೆಯ ಸೂಕ್ಷ್ಮತೆಯನ್ನು ಗಮನಿಸಿ ವಿಶ್ವದ 133 ನಗರಗಳಲ್ಲಿ ಸಮೀಕ್ಷೆ ನಡೆಸಿ ಈ ವರದಿ ಸಿದ್ಧಪಡಿಸಲಾಗಿದೆ ಎಂದು ಇಐಯು ಹೇಳಿದೆ.

ನಗರಗಳ ಜೀವನ ವೆಚ್ಚ ವರದಿಯಲ್ಲಿ ಬೆಂಗಳೂರು ಹಾಗೂ ಕರಾಚಿ ಕಡೆಯ ಸ್ಥಾನ ಪಡೆದುಕೊಂಡಿದ್ದು, ಮುಂಬೈ, 130, ಚೆನ್ನೈ 129, ಹಾಗೂ ದೆಹಲಿ 128ನೇ ಸ್ಥಾನ ಪಡೆದುಕೊಂಡಿವೆ. ಪಟ್ಟಿಯಲ್ಲಿ ಸಿಂಗಾಪುರ ಮೊದಲ ಸ್ಥಾನ ಪಡೆಯುವ ಮೂಲಕ ವಿಶ್ವದ ದುಬಾರಿ ನಗರ ಎನಿಸಿಕೊಂಡಿದೆ.

ಕಳೆದ ವರ್ಷ ಟಾಪ್ 5 ದುಬಾರಿ ನಗರ ಸ್ಥಾನ ಪಡೆದಿದ್ದ ಪ್ಯಾರಿಸ್, ಓಸ್ಲೊ, ಝುರಿಚ್ ಮತ್ತು ಸಿಡ್ನಿ ಈ ವರ್ಷವೂ ಅದೇ ಸ್ಥಾನದಲ್ಲಿ ಮುಂದುವರಿದಿವೆ. ಆದರೆ ಕಳೆದ ಬಾರಿ ಅತ್ಯಂತ ದುಬಾರಿ ನಗರ ಎನಿಸಿಕೊಂಡಿದ್ದ ಟೋಕಿಯೋ ಈ ಬಾರಿ 12ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com