ಸಭೆಯಲ್ಲಿ ತೂಕಡಿಸಿದ್ದಕ್ಕೆ ಉತ್ತರ ಕೊರಿಯಾ ರಕ್ಷಣಾ ಸಚಿವನಿಗೆ ಮರಣ ಶಿಕ್ಷೆ ನೀಡಿದ ಕಿಮ್ ಜಾಂಗ್

ಉತ್ತರ ಕೊರಿಯಾದ ಸರ್ವಾಧ್ಯಕ್ಷ ಕಿಮ್ ಜಾಂಗ್-ಎನ್ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ನಿದ್ದೆ ಹೋದ ಎಂಬ ಆರೋಪದ ಮೇಲೆ ರಕ್ಷಣಾ ಸಚಿವನನ್ನು ಸೇನೆಯಲ್ಲಿ
ಕಿಮ್ ಜಾಂಗ್-ಎನ್
ಕಿಮ್ ಜಾಂಗ್-ಎನ್
Updated on: 

ಉತ್ತರ ಕೊರಿಯಾದ ಸರ್ವಾಧ್ಯಕ್ಷ ಕಿಮ್ ಜಾಂಗ್-ಎನ್ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ನಿದ್ದೆ ಹೋದ ಎಂಬ ಆರೋಪದ ಮೇಲೆ ರಕ್ಷಣಾ ಸಚಿವನನ್ನು ಸೇನೆಯಲ್ಲಿ ಬಳಸುವ ಬೃಹತ್ ಶಸ್ತ್ರಾಸ್ತ್ರ ಬಳಸಿ ಕೊಲ್ಲಲಾಗಿದೆ ಎಂದು ದಕ್ಷಿಣ ಕೊರಿಯಾದ ಗುಪ್ತಚರ ಏಜೆನ್ಸಿಯೊಂದು ವರದಿ ಮಾಡಿದೆ.

ಏಪ್ರಿಲ್ ೩೦ ರಂದು ಸೇನಾ ತರಬೇತಿ ಕೇಂದ್ರದಲ್ಲಿ ಜನರಲ್ ಹ್ಯೋನ್ ಯಾಂಗ್ ಚಾಲ್ ಅವರನ್ನು ಕೊಲ್ಲಲಾಗಿದೆ ಎಂದು ಗುಪ್ತಚರ ಏಜೆನ್ಸಿ ದಕ್ಷಿಣ ಕೊರಿಯಾ ಸರ್ಕಾರಕ್ಕೆ ತಿಳಿಸಿದೆ.

೨೦೧೧ ರಲ್ಲಿ ತಮ್ಮ ತಂದೆಯ ನಿಧನದ ನಂತರ ೩೦ ವರ್ಷದ ಕಿಮ್ ಉತ್ತರ ಕೊರಿಯಾದ ಸರ್ವಾಧ್ಯಕ್ಷರಾಗಿ ಗದ್ದುಗೆ ಏರಿದ ಮೇಲೆ ಈ ವರ್ಷವೇ ಸುಮಾರು ೧೪ ಜನ ಹಿರಿಯ ಅಧಿಕಾರಿಗಳನ್ನು ಕೊಲ್ಲಿಸಿದ್ದಾರೆಂಬ ವರದಿ ಇದೆ. ಈ ವಾರದ ಮೊದಲ ಭಾಗದಲ್ಲಿ ತಮ್ಮ ಚಿಕ್ಕಮ್ಮ ಕಿಮ್ ಕ್ಯೋಂಗ್ ಹ್ಯು ಅವರನ್ನು ಕೂಡ ಬಂಧಿಸಲು ಆದೇಶ ನೀಡಿದ್ದರು ಹಾಗು ಅವರ ಪತಿಯನ್ನು ಕೂಡ ಮರಣ ದಂಡನೆಗೆ ಗುರಿಪಡಿಸಿದ್ದರು.

ರಕ್ಷಣಾ ಸಚಿವ ಹ್ಯೋನ್ ಯಾಂಗ್ ಚಾಲ್ ಅವರು ಕಿಮ್ ಗೆ ಎದುರುತ್ತರ ನೀಡಿ ಸಭೆಯಲ್ಲಿ ನಿದ್ದೆ ಹೋದರು ಎಂಬ ಆರೋಪದ ಮೇಲೆ ಆಂಟಿ ಏರಕ್ರಾಫ್ಟ್ ನಿಂದ ಶೆಲ್ ಗಳ ಮಳೆಗೆರೆದು ಕೊಲ್ಲಲಾಗಿದೆ ಎಂದು ವರದಿಯಾಗಿದೆ.

ಉತ್ತರ ಕೊರಿಯಾ ದೇಶ ೨೦ ಕ್ಕೂ ಹೆಚ್ಚು ನ್ಯೂಕ್ಲಿಯಾರ್ ಶಸ್ತ್ರಾಸ್ತ್ರಗಳನ್ನು ಹೊಂದಿದೆ ಎಂದು ನಂಬಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com