ದಾದ್ರಿ ಹತ್ಯೆ: ದಾಳಿಗೆ ಪ್ರೇರೇಪಿಸಿದ್ದು ಸ್ಥಳೀಯ ಬಿಜೆಪಿ ಮುಖಂಡನ ಪುತ್ರ?

ಮೊಹಮ್ಮದ್ ಇಖ್ಲಾಕ್ ಮನೆಯಲ್ಲಿ ಗೋಮಾಂಸವಿಟ್ಟುಕೊಂಡಿದ್ದಾರೆ ಎಂದು ಆರೋಪ ಮಾಡಿ ಅವರ ಮನೆ ಮೇಲೆ ದಾಳಿ ಮಾಡುವಂತೆ ಪ್ರೇರಿಪಿಸಿದ್ದು ಸ್ಥಳೀಯ ಬಿಜೆಪಿ ಮುಖಂಡನೊಬ್ಬನ...
ಕಣ್ಣೀರಿಡುತ್ತಿರುವ ಇಖ್ಲಾಕ್ ನ ಕುಟುಂಬ
ಕಣ್ಣೀರಿಡುತ್ತಿರುವ ಇಖ್ಲಾಕ್ ನ ಕುಟುಂಬ
Updated on: 
ಗ್ರೇಟರ್‌ನೋಯ್ಡಾ : ದಾದ್ರಿ ಬಳಿಯ ಬಿಶಾದಾ ಗ್ರಾಮದಲ್ಲಿರುವ ಮೊಹಮ್ಮದ್ ಇಖ್ಲಾಕ್ ಮನೆಯಲ್ಲಿ  ಗೋಮಾಂಸವಿಟ್ಟುಕೊಂಡಿದ್ದಾರೆ ಎಂದು ಆರೋಪ ಮಾಡಿ ಅವರ ಮನೆ ಮೇಲೆ ದಾಳಿ ಮಾಡುವಂತೆ ಪ್ರೇರೇಪಿಸಿದ್ದು ಸ್ಥಳೀಯ ಬಿಜೆಪಿ ಮುಖಂಡನೊಬ್ಬನ ಪುತ್ರ ಎಂದು ವರದಿಯೊಂದು ಹೇಳಿದೆ.
ಸುದ್ದಿ ಪತ್ರಿಕೆಯೊಂದರ ವರದಿಯ ಪ್ರಕಾರ ಸ್ಥಳೀಯ ಬಿಜೆಪಿ ಮುಖಂಡನೊಬ್ಪನ ಪುತ್ರ ಸೇರಿದಂತೆ ಐದು ಮಂದಿಯ ತಂಡ ಇಖ್ಲಾಕ್‌ನ ಮನೆ ಮೇಲೆ ದಾಳಿ ಮಾಡಲು ಪ್ರೇರೇಪಿಸಿದೆ.
ತಮ್ಮ ಮನೆಯ ಮೇಲೆ ದಾಳಿ ಮಾಡಿದ್ದು  ವಿಶಾಲ್, ಚಂದ್ರಪಾಲ್, ಅರುಣ್, ಹರಿ ಓಂ ಮತ್ತು ಆತನ ಸಹೋದರರು ಎಂದು ಇಖ್ಲಾಕ್‌ನ ಕುಟುಂಬದವರು ಆರೋಪಿಸಿದ್ದಾರೆಂದು ಹೆಚ್ಚುವರಿ ಜಿಲ್ಲಾ ಮೆಜಿಸ್ಟ್ರೇಟ್ ರಾಜೇಶ್ ಯಾದವ್ ಹೇಳಿಕೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಶಾಲ್ ಎಂಬಾತ ಬಿಜೆಪಿ ಮುಖಂಡನ ಮಗನಾಗಿದ್ದಾನೆ.
ಮನೆಯಲ್ಲಿ ಗೋವು ಹತ್ಯೆ ಮಾಡಿ ಅದರ ಮಾಂಸವನ್ನು ಇರಿಸಲಾಗಿದೆ ಎಂದು ವಿಶಾಲ್ ಅವರೇ ದೇವಾಲಯದ ಪೂಜಾರಿಗೆ ಹೇಳಿದ್ದು ಎಂದು ಇಖ್ಲಾಕ್‌ನ ಕುಟುಂಬ ಆರೋಪಿಸಿದೆ.
ಗುರುವಾರ ಸಿಎನ್‌ಎನ್ ಐಬಿಎನ್ ಸುದ್ದಿವಾಹಿನಿಯಲ್ಲಿ ಮಾತನಾಡಿದ ದೇವಾಲಯದ ಪೂಜಾರಿ, ಇಖ್ಲಾಕ್ ಮನೆಯಲ್ಲಿ ಗೋಮಾಂಸ ದಾಸ್ತಾನು ಮಾಡಿದ್ದಾರೆ ಎಂಬ ಸುದ್ದಿಯನ್ನು ಘೋಷಿಸುವಂತೆ ಇಬ್ಬರು ಯುವಕರು ನನ್ನನ್ನು ಒತ್ತಾಯಿಸಿದ್ದಾರೆ ಎಂದು ಹೇಳಿದ್ದಾರೆ.
ಮನೆಯಲ್ಲಿ ಗೋ ಹತ್ಯೆ ಮಾಡಿ ಗೋಮಾಂಸವನ್ನಿರಿಸಿಕೊಂಡಿದ್ದಾರೆ ಎಂಬ ಆರೋಪದ ಮೇರೆಗೆ ಕಳೆದ ಸೋಮವಾರ ರಾತ್ರಿ ಸುಮಾರು 200 ಮಂದಿಯ ಗುಂಪು ಇಖ್ಲಾಕ್ ಮನೆಗೆ ದಾಳಿ ಮಾಡಿ ಆತನ ಹತ್ಯೆ ಮಾಡಿದ್ದರು.
ಇಖ್ಲಾಕ್ ನ್ನು ಹೊಡೆದು ಸಾಯಿಸಿದ ಗುಂಪು, ಆತನ 22ರ ಹರೆಯದ ಮಗನಿಗೂ ಯದ್ವಾತದ್ವ ಥಳಿಸಿದೆ. ಇಖ್ಲಾಕ್‌ನ ಮಗ ಧನಿಷ್ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಏತನ್ಮಧ್ಯೆ, ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಬಿಡಿ. ನಮಗೆ ಏನು ಹೇಳಬೇಕಿದೆಯೋ ಅದನ್ನೆಲ್ಲಾ ಹೇಳಿಯಾಗಿದೆ. ನಮಗೆ ತೊಂದರೆ ಕೊಡಬೇಡಿ ಎಂದು ಇಖ್ಲಾಕ್‌ನ ಇನ್ನೊಬ್ಬ ಪುತ್ರ  ಸತ್‌ರಾಜ್ ಸಾರ್ವಜನಿಕರಿಗೆ ಮತ್ತು ಮಾಧ್ಯಮದವರಲ್ಲಿ ಮನವಿ ಮಾಡಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com