ನೇತಾಜಿ ಸಂಬಂಧಿತ ಮಹತ್ವ ದಾಖಲೆಗಳು ಬಹಿರಂಗ

ತೀವ್ರ ಕುತೂಹಲ ಮೂಡಿಸಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಪಟ್ಟ ಗುಪ್ತ ದಾಖಲೆಗಳನ್ನು ಪಶ್ಚಿಮ ಬಂಗಾಳ...
ನೇತಾಜಿ-ಮ್ಯೂಸಿಯಂನಲ್ಲಿರುವ ಮೂಲ ದಾಖಲೆ
ನೇತಾಜಿ-ಮ್ಯೂಸಿಯಂನಲ್ಲಿರುವ ಮೂಲ ದಾಖಲೆ

ಕೊಲ್ಕತಾ: ತೀವ್ರ ಕುತೂಹಲ ಮೂಡಿಸಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಪಟ್ಟ ಗುಪ್ತ ದಾಖಲೆಗಳನ್ನು ಪಶ್ಚಿಮ ಬಂಗಾಳ ಸರ್ಕಾರ ಇಂದು ಬಿಡುಗಡೆಗೊಳಿಸಿದೆ.

ನೇತಾಜಿ ಅವರಿಗೆ ಸಂಬಂಧಪಟ್ಟಂತ 64 ಕಡತಗಳನ್ನು ಶುಕ್ರವಾರ ಬಿಡುಗಡೆಗೊಳಿಸಲಾಗಿದ್ದು, ನೇತಾಜಿ ಕುಟುಂಬಕ್ಕೆ ಗಣಕೀಕೃತ ದಾಖಲೆಗಳನ್ನು ಹಸ್ತಾಂತರ ಮಾಡಲಾಗಿದೆ. ಕೊಲ್ಕತಾ ಪೊಲೀಸ್ ಆಯುಕ್ತರು 64 ದಾಖಲೆಗಳಿದ್ದ ಡಿವಿಡಿ ಸೆಟ್ ನ್ನು ಹಸ್ತಾಂತರ ಮಾಡಿದ್ದಾರೆ. 

ಸದ್ಯ ಪೊಲೀಸ್ ಮ್ಯೂಸಿಯಂನಲ್ಲಿ ಮೂಲ ದಾಖಲೆಗಳಿದ್ದು, ದಾಖಲೆ ವೀಕ್ಷಿಸಲು ಸಾರ್ವಜನಿಕರಿಗೆ ಸರ್ಕಾರ ಅವಕಾಶ ಕಲ್ಪಿಸಲಿದ್ದು, ಸೋಮವಾರದಿಂದ ದಾಖಲೆಗಳನ್ನು ಜನತೆ ವೀಕ್ಷಿಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com