ಜಕಾರ್ತಾ: ಸಿಂಗಾಪುರ್ ಬಳಿಯ ಭಾತಮ್ ದ್ವೀಪಕ್ಕೆ ತೆರಳುತ್ತಿದ್ದ, ೧೩ ಜನರನ್ನು ಹೊತ್ತೊಯ್ದಿದ್ದ ಇಂಡೋನೇಷಿಯಾ ಪೊಲೀಸ್ ವಿಮಾನ ಶನಿವಾರ ಸಂಪರ್ಕ ಕಳೆದುಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸುಮಾತ್ರ ದ್ವೀಪದಿಂದ ದಕ್ಷಿಣಕ್ಕಿರುವ ಬಾಂಗ್ಕ ದ್ವೀಪದಿಂದ ಹೊರಟಿದ್ದ ಈ ವಿಮಾನದಲ್ಲಿ ಐದು ಜನ ವಿಮಾನ ಸಿಬ್ಬಂದಿ ಮತ್ತು ೮ ಜನ ಪ್ರಯಾಣಿಕರಿದ್ದರು. ಮೇಲೇರಿದ ೫೦ ನಿಮಿಷಗಳಲ್ಲಿ ವಿಮಾನ ಸಂಪರ್ಕ ಕಳೆದುಕೊಂಡಿದೆ.
ಮೆನ್ಸನಾಕ್ ಮತ್ತು ಸೆಬಂಕಾ ದ್ವೀಪಗಳ ನಡುವೆ ಸಮುದ್ರದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದೇವೆ ಎಂದು ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ದಳದ ಅಧ್ಯಕ್ಷ ಹೆನ್ರಿ ಬಂಬಂಗ್ ಸೊಎಲಿಸ್ಟ್ಯೋ ಹೇಳಿದ್ದಾರೆ.
ಗ್ರಾಮಸ್ಥರಿಗೆ ಆ ವಿಮಾನದ ಆಸನ, ಪೊಲೀಸರ ದಾಖಲೆಗಳು ಮತ್ತು ಫೋನ್ ಸಿಕ್ಕಿದೆ ಎಂದು ಕೂಡ ಅವರು ಹೇಳಿದ್ದಾರೆ.