ಪಾಕ್ ನಲ್ಲಿ ಪ್ರಧಾನಿ ಮೋದಿ ದಾವೂದ್ ನನ್ನು ಭೇಟಿಯಾಗಿದ್ದರು: ಅಜಂ ಖಾನ್

ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ ವೇಳೆ ನವಾಜ್ ಶರೀಫ್ ಅವರ ನಿವಾಸದಲ್ಲಿ ಭೂಗತ ಪಾತಕಿ ದಾವೂದ್...
ನವಾಜ್ ಷರೀಫ್-ನರೇಂದ್ರ ಮೋದಿ
ನವಾಜ್ ಷರೀಫ್-ನರೇಂದ್ರ ಮೋದಿ
Updated on: 
ಲಖನೌ/ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ ವೇಳೆ ನವಾಜ್ ಶರೀಫ್ ಅವರ ನಿವಾಸದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಭೇಟಿಯಾಗಿದ್ದರು ಎಂದು ಉತ್ತರ ಪ್ರದೇಶದ ಸಚಿವ ಅಜಂ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನವಾಜ್ ಷರೀಫ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಲಾಹೋರ್ ಗೆ ತೆರಳಿದ್ದ ವೇಳೆ ಮೋದಿ ಅವರು ದಾವೂದ್ ಇಬ್ರಾಹಿಂನನ್ನು ನವಾಜ್ ಷರೀಫ್ ನಿವಾಸದಲ್ಲಿ ಭೇಟಿಯಾಗಿದ್ದರು ಎಂದು ಅವರು ಆರೋಪಿಸಿದ್ದಾರೆ. 
ಆದರೆ, ಅಜಂ ಖಾನ್ ಅವರ ಹೇಳಿಕೆಯನ್ನು ತಳ್ಳಿ ಹಾಕಿರುವ ಕೇಂದ್ರ ಸರ್ಕಾರ ಇದೊಂದು ಅಸಂಬದ್ಧ ಹೇಳಿಕೆಯಾಗಿದ್ದು, ಸತ್ಯಕ್ಕೆ ದೂರವಾದುದು ಎಂದು ತಿಳಿಸಿದೆ. 
ಪ್ರಧಾನಿಯೇ ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿ ಪಾಕಿಸ್ತಾನಕ್ಕೆ ತೆರಳಿದ್ದಾರೆ. ಅಲ್ಲದೇ, ಅಲ್ಲಿ ಷರೀಫ್ ನಿವಾಸದಲ್ಲಿ ಪಾತಕಿ ದಾವೂದ್ ನನ್ನು ಭೇಟಿಯಾಗಿದ್ದಾರೆ. ಈ ವೇಳೆ ಷರೀಫ್ ಅವರ ತಾಯಿ, ಮಗಳು ಮತ್ತು ಪತ್ನಿ ಕೂಡ ಹಾಜರಿದ್ದರು. ಇದನ್ನು ಪ್ರಧಾನಿ ಮೋದಿ ಹೇಗೆ ನಿರಾಕರಿಸುತ್ತಾರೋ ನೋಡೋಣ ಎಂದು ಅಜಂ ಖಾನ್ ಸವಾಲು ಹಾಕಿದ್ದಾರೆ.
ಅಜಂ ಖಾನ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಅಖಿಲೇಶ್ ಸರ್ಕಾರ ಅಜಂ ಖಾನ್ ಅವರನ್ನು ವಜಾಗೊಳಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com