ಇದು ನನ್ನ ಗೆಲುವಲ್ಲ, ಪಕ್ಷದ ಗೆಲುವು: ರಹೀಂ ಖಾನ್

ಉಪಚುನಾವಣೆಯ ಗೆಲುವು ನನ್ನ ಗೆಲುವಲ್ಲ. ಇದು ಪಕ್ಷದ ಗೆಲವು ಎಂದು ಕಾಂಗ್ರೆಸ್ ಅಭ್ಯರ್ಥಿ ರಹೀಂ ಖಾನ್ ಅವರು ಮಂಗಳವಾರ ಹೇಳಿದ್ದಾರೆ...
ಇದು ನನ್ನ ಗೆಲುವಲ್ಲ, ಪಕ್ಷದ ಗೆಲುವು: ರಹೀಂ ಖಾನ್
ಇದು ನನ್ನ ಗೆಲುವಲ್ಲ, ಪಕ್ಷದ ಗೆಲುವು: ರಹೀಂ ಖಾನ್
ಬೆಂಗಳೂರು: ಉಪಚುನಾವಣೆಯ ಗೆಲುವು ನನ್ನ ಗೆಲುವಲ್ಲ. ಇದು ಪಕ್ಷದ ಗೆಲವು ಎಂದು ಕಾಂಗ್ರೆಸ್ ಅಭ್ಯರ್ಥಿ ರಹೀಂ ಖಾನ್ ಅವರು ಮಂಗಳವಾರ ಹೇಳಿದ್ದಾರೆ. 
ಕುತೂಹಲಕಾರಿ ರಾಜ್ಯದ ಮೂರು ವಿಧಾನಸಭಾ ಕೇತ್ರಗಳಲ್ಲಿ ಒಂದಾದ ಬೀದರ್ ಕ್ಷೇತ್ರದಲ್ಲಿ ಗೆಲವು ಸಾಧಿಸಿದ ಸಂತಸದಲ್ಲಿರುವ ರಹೀಂ ಖಾನ್ ಅವರು ಚುನಾವಣೆ ಕುರಿತಂತೆ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ಇದು ನನ್ನ ಗೆಲುವಲ್ಲ. ಪಕ್ಷದ ಗೆಲವು ಎಂದು ಹೇಳಿದ್ದಾರೆ. 
ನಾನು ಅಲ್ಪಸಂಖ್ಯಾತನಾಗಿದ್ದರೂ ಎಲ್ಲಾ ರೀತಿಯ ಜನರು ನನಗೆ ಮತಹಾಕಿದ್ದಾರೆ. ಗೆಲವು ಸಾಕಷ್ಟು ಸಂತಸವನ್ನುಂಟು ಮಾಡಿದೆ. ಕ್ಷೇತ್ರದ ಅಭಿವೃದ್ಧಿಗೆ ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ. ಮತಹಾಕಿದ ಎಲ್ಲಾ ಜನತೆಗೂ ಎಂದಿರೂ ಚಿರಋಣಿಯಾಗಿರುತ್ತೇನೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com