ಬ್ರಹ್ಮೋಸ್, ಆಕಾಶ ಕ್ಷಿಪಣಿ ಸೇರಿದಂತೆ ಭಾರತದ ವಾಯುಪಡೆ, ಜಲಪಡೆ, ಸೇನಾ ಪಡೆಗಳ ಶಕ್ತಿ ಪ್ರದರ್ಶನ, ಬಾನಿನಲ್ಲಿ ಯುದ್ಧ ವಿಮಾನಗಳಿಂದ ಚಿತ್ತಾರ, ಮೋಟಾರು ಬೈಕ್ ಸಾಹಸಗಳು ಗಮನ ಸೆಳೆದವು. ಕರಾವಳಿ ಕಾವಲು ಪಡೆ, ಸಿಆರ್ಪಿಎಫ್, ಎನ್ಸಿಸಿ, ಸ್ಕೌಟ್ಸ್, ಗೈಡ್ಸ್ ಮತ್ತಿತರರು ಪಾಲ್ಗೊಂಡ ಪೆರೇಡ್ನಲ್ಲಿ 17 ರಾಜ್ಯಗಳು, 6 ಕೇಂದ್ರಾಡಳಿತ ಪ್ರದೇಶಗಳ ಸಾಧನೆಗಳನ್ನು ಬಿಂಬಿಸುವ ಸ್ತಬ್ಧ ಚಿತ್ರಗಳು ಗಮನ ಸೆಳೆದವು. ಕರ್ನಾಟಕದ ಕಾಫಿ ಕುರಿತ ಸ್ತಬ್ಧಚಿತ್ರ ವಿಶೇಷವಾಗಿತ್ತು. ಇದೇ ಮೊದಲ ಬಾರಿಗೆ ನಿವೃತ್ತ ಯೋಧರ ಸ್ತಬ್ಧಚಿತ್ರ ಸಹ ಪಾಲ್ಗೊಂಡಿತ್ತು.