ಕೇಂದ್ರ ಸಂಪುಟ ಪುನಾರಚನೆ: ಮೋದಿ ಸಂಪುಟ ಸಚಿವರು ಮತ್ತು ಖಾತೆಗಳ ಸಂಪೂರ್ಣ ವಿವರ

ನಿರೀಕ್ಷೆಯಂತೆಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ 2ನೇ ಬಾರಿಗೆ ಕೇಂದ್ರ ಸಚಿವ ಸಂಪುಟವನ್ನು ಪುನಾರಚನೆ ಮಾಡಿದ್ದು, 5 ಹಾಲಿ ಸಚಿವರಗಿ ಕೊಕ್ ನೀಡಿ, 19 ನೂತನ ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡಿದೆ...
ಪ್ರಧಾನಿ ನರೇಂದ್ರ ಮೋದಿ ಮತ್ತು ನೂತನ ಕೇಂದ್ರ ಸಚಿವರು (ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ ಮತ್ತು ನೂತನ ಕೇಂದ್ರ ಸಚಿವರು (ಸಂಗ್ರಹ ಚಿತ್ರ)

ನವದೆಹಲಿ: ನಿರೀಕ್ಷೆಯಂತೆಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ 2ನೇ ಬಾರಿಗೆ ಕೇಂದ್ರ ಸಚಿವ ಸಂಪುಟವನ್ನು ಪುನಾರಚನೆ ಮಾಡಿದ್ದು, 5 ಹಾಲಿ ಸಚಿವರಗಿ ಕೊಕ್  ನೀಡಿ, 19 ನೂತನ ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡಿದೆ.

ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರೂ ಸೇರಿದಂತೆ ಕೇಂದ್ರ ಸಂಪುಟದ ಎಲ್ಲ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಕೇಂದ್ರ ಸಚಿವರ ನೂತನ ಖಾತೆಗಳ ಪಟ್ಟಿ ಇಂತಿವೆ.

#ನರೇಂದ್ರ ಮೋದಿ - ಪ್ರಧಾನ ಮಂತ್ರಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಇಲಾಖೆ, ಬಾಹ್ಯಾಕಾಶ, ಎಲ್ಲಾ ಪ್ರಮುಖ ನೀತಿ ಸಮಸ್ಯೆಗಳು ಮತ್ತು ಅಣುಶಕ್ತಿ ಇಲಾಖೆ

ಕೇಂದ್ರ ಸಚಿವರು
1. ರಾಜನಾಥ್ ಸಿಂಗ್-ಗೃಹ ಖಾತೆ
2. ಸುಷ್ಮಾ ಸ್ವರಾಜ್ - ವಿದೇಶಾಂಗ ಇಲಾಖೆ
3. ಅರುಣ್ ಜೇಟ್ಲಿ - ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳು
4. ವೆಂಕಯ್ಯ ನಾಯ್ಡು - ನಗರಾಭಿವೃದ್ಧಿ, ವಸತಿ ಮತ್ತು ನಗರ ಬಡತನ ನಿರ್ಮೂಲನೆ, ಸಂಸದೀಯ ವ್ಯವಹಾರಗಳು
5. ನಿತಿನ್ ಗಡ್ಕರಿ - ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಶಿಪ್ಪಿಂಗ್
6.  ಮನೋಹರ್ ಪರಿಕ್ಕರ್ - ರಕ್ಷಣಾ ಇಲಾಖೆ
7. ಸುರೇಶ್ ಪ್ರಭು - ರೈಲ್ವೇ ಖಾತೆ
8. ಡಿವಿ ಸದಾನಂದಗೌಡ - ಅಂಕಿಅಂಶ ಹಾಗೂ ಕಾರ್ಯಕ್ರಮ ಅನುಷ್ಠಾನ
9. ಉಮಾ ಭಾರತಿ - ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ
10. ಡಾ. ನಜ್ಮಾ ಹೆಪ್ಟುಲ್ಲಾ - ಅಲ್ಪಸಂಖ್ಯಾತ ವ್ಯವಹಾರಗಳು
11.ರಾಮ್ ವಿಲಾಸ್ ಪಾಸ್ವಾನ್ - ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ
12. ಕಲ್ರಾಜ್ ಮಿಶ್ರಾ - ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು
13. ಮನೇಕಾ ಸಂಜಯ್ ಗಾಂಧಿ- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
14. ಅನಂತ್ ಕುಮಾರ್ - ರಸಗೊಬ್ಬರ ಸಂಸದೀಯ ವ್ಯವಹಾರಗಳ
15. ರವಿ ಶಂಕರ್ ಪ್ರಸಾದ್ - ಕಾನೂನು ಮತ್ತು ನ್ಯಾಯ, ವಿದ್ಯುನ್ಮಾನ (ಎಲೆಕ್ಟ್ರಾನಿಕ್ಸ್) ಮತ್ತು ಮಾಹಿತಿ ತಂತ್ರಜ್ಞಾನ
16. ಜಗತ್ ಪ್ರಕಾಶ್ ನಡ್ಡಾ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
17. ಅಶೋಕ್ ಗಜಪತಿ ರಾಜು ಪಶುಪತಿ - ನಾಗರಿಕ ವಿಮಾನಯಾನ
18. ಅನಂತ್ ಗೀತೆ - ಭಾರೀ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮ
19. ಹರ್ಸೀಮ್ರತ್ ಕೌರ್ ಬಾದಲ್ - ಆಹಾರ ಸಂಸ್ಕರಣೆ
20. ನರೇಂದ್ರ ಸಿಂಗ್ ಥೋಮರ್ - ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕುಡಿವ ನೀರು ಹಾಗೂ ಒಳಚರಂಡಿ
21. ಚೌದರಿ ಬಿರೇಂದರ್ ಸಿಂಗ್ - ಉಕ್ಕು
22. ಜುವಲ್ ಓರಮ್ - ಬುಡಕಟ್ಟು ವ್ಯವಹಾರ
23. ರಾಧಾ ಮೋಹನ್ ಸಿಂಗ್ - ಕೃಷಿ ಮತ್ತು ರೈತರ ಕಲ್ಯಾಣ
24. ಥಾವರ್ ಚಂದ್ ಗೆಹ್ಲೂಟ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
25. ಸ್ಮೃತಿ ಇರಾನಿ - ಜವಳಿ
26. ಡಾ. ಹರ್ಷ ವರ್ಧನ್ - ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ
27. ಪ್ರಕಾಶ್ ಜವಡೇಕರ್ - ಮಾನವ ಸಂಪನ್ಮೂಲ ಅಭಿವೃದ್ಧಿ

ರಾಜ್ಯ ಖಾತೆ ಸಚಿವರು (ಸ್ವತಂತ್ರ ಹೊಣೆಗಾರಿಕೆ)
1. ರಾವ್ ಇಂದರ್ ಜೀತ್ - ಯೋಜನೆ
2. ಬಂಡಾರು ದತ್ತಾತ್ರೆಯ - ಕಾರ್ಮಿಕ ಮತ್ತು ಉದ್ಯೋಗ
3. ರಾಜೀವ್ ಪ್ರತಾಪ್ ರೂಡಿ - ಕೌಶಲ್ಯ ಅಭಿವೃದ್ಧಿ ಹಾಗೂ ವಾಣಿಜ್ಯೋದ್ಯಮ
4. ವಿಜಯ್ ಗೋಯಲ್ - ಯುವ ವ್ಯವಹಾರ ಹಾಗೂ ಕ್ರೀಡಾ ಖಾತೆ
5. ಶ್ರೀಪಾದ್ ಯಸ್ಸೋ ನಾಯಕ್ - ಆಯುಷ್
6. ಧರ್ಮೇಂದ್ರ ಪ್ರಧಾನ್ - ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ
7. ಪಿಯೂಶ್ ಗೋಯಲ್ - ಇಂಧನ, ಕಲ್ಲಿದ್ದಲು, ಹೊಸ ಮತ್ತು ನವೀಕರಿಸಬಹುದಾದ ಇಂಧನ, ಗಣಿ
8. ಡಾ. ಜಿತೇಂದ್ರ ಸಿಂಗ್ - ಈಶಾನ್ಯ ಪ್ರದೇಶದ ಅಭಿವೃದ್ಧಿ
9. ನಿರ್ಮಲಾ ಸೀತಾರಾಮನ್ - ವಾಣಿಜ್ಯ ಮತ್ತು ಕೈಗಾರಿಕೆ
10. ಡಾ. ಮಹೇಶ್ ಶರ್ಮಾ - ಸಂಸ್ಕೃತಿ ಮತ್ತು ಪ್ರವಾಸ
11. ಮನೋಜ್ ಸಿನ್ಹಾ - ಸಂಪರ್ಕ ಸಂವಹನ
12. ಅನಿಲ್ ಮಾಧವ್ ಡಾವೆ - ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ

ರಾಜ್ಯ ಖಾತೆ ಸಚಿವರು

1. ಜನರಲ್ ವಿಕೆ ಸಿಂಗ್ - ವಿದೇಶಾಂಗ ವ್ಯವಹಾರ
2. ಸಂತೋಷ್ ಕುಮಾರ್ ಗಂಗ್ವರ್ - ಹಣಕಾಸು
3. ಫಗ್ಗಾನ್ ಸಿಂಗ್ ಕಲುಸ್ಟೆ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
4.ಮುಖ್ತಾರ್ ಅಬ್ಬಾಸ್ ನಖ್ವಿ - ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಸಂಸದೀಯ ವ್ಯವಹಾರಗಳು
5. ಎಸ್ ಎಸ್ ಅಹ್ಲುವಾಲಿಯಾ - ಕೃಷಿ ಮತ್ತು ರೈತರು ಕಲ್ಯಾಣ ಸಂಸದೀಯ ವ್ಯವಹಾರಗಳು
6. ರಾಮ್ ದಾಸ್ ಅಥವಾಲೆ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
7. ರಾಮ್ ಕೃಪಾಲ್ ಯಾದವ್ - ಗ್ರಾಮೀಣಾಭಿವೃದ್ಧಿ
8. ಹರಿಭಾಯ್ ಪರ್ತಿಭಾಯ್ ಚೌದರಿ - ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು
9. ಗಿರಿರಾಜ್ ಸಿಂಗ್ - ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು
10. ಹಂಸರಾಜ್ ಗಂಗಾರಾಮ್ ಅಹಿರ್ - ಗೃಹ ವ್ಯವಹಾರ
11.ಜಿ ಎಂ ಸಿದ್ದೇಶ್ವರ - ಭಾರೀ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮ
12. ರಮೇಶ್ ಚಂದಪ್ಪ ಜಿಗಜಿಣಗಿ - ಕುಡಿವ ನೀರು ಹಾಗೂ ಒಳಚರಂಡಿ
13. ರಾಜನ್ ಗೊಹೆನ್ - ರೈಲ್ವೇ ಖಾತೆ
14.ಪುರುಷೋತ್ತಮ ರೂಪಾಲ - ಕೃಷಿ ಮತ್ತು ರೈತರ ಕಲ್ಯಾಣ, ಪಂಚಾಯತಿ ರಾಜ್
15. ಎಂ ಜೆ ಅಕ್ಬರ್ - ವಿದೇಶಾಂಗ ವ್ಯವಹಾರ
16. ಉಪೇಂದ್ರ ಕುಶ್ವಾಹ - ಮಾನವ ಸಂಪನ್ಮೂಲ ಅಭಿವೃದ್ಧಿ
17. ಪಿ ರಾಧಾ ಕೃಷ್ಣನ್ - ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಶಿಪ್ಪಿಂಗ್
18. ಕಿರೆಣ್ ರಿಜಿಜು - ಗೃಹ ಖಾತೆ
19. ಕೃಷ್ಣಾ ಪಾಲ್- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
20. ಜಸ್ವತ್ ಸಿನ್ಹ್ ಸುಮನ್ ಭಾಯ್ ಭಭೋರ್ - ಬುಡಕಟ್ಟು ವ್ಯವಹಾರ
21. ಡಾ. ಸಂಜೀವ್ ಕುಮಾರ್ ಬಲ್ಯನ್ - ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ
22. ವಿಷ್ಣು ಡಿಯೋ ಸಾಯಿ - ಉಕ್ಕು
23. ಸುದರ್ಶನ್ ಭಗತ್ - ಕೃಷಿ ಮತ್ತು ರೈತರ ಕಲ್ಯಾಣ
24. ವೈಎಸ್ ಚೌದರಿ - ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನ
25. ಜಯಂತ್ ಸಿನ್ಹಾ - ನಾಗರಿಕ ವಿಮಾನಯಾನ
26. ರಾಜ್ಯ ವರ್ಧನ್ ಸಿಂಗ್ ರಾಥೋಡ್ - ಮಾಹಿತಿ ಮತ್ತು ಪ್ರಸಾರ
27. ಬಬುಲ್ ಸುಪ್ರಿಯೋ - ನಗರಾಭಿವೃದ್ಧಿ, ವಸತಿ ಮತ್ತು ನಗರ ಬಡತನ ನಿರ್ಮೂಲನೆ
28. ಸಾಧ್ವಿ ನಿರಂಜನ್ ಜ್ಯೋತಿ - ಆಹಾರ ಸಂಸ್ಕರಣೆ
29. ವಿಜಯ್ ಸಂಪ್ಲಾ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
30. ಅರ್ಜುನ್ ರಾಮ್ ಪಾಲ್ ಮೇಘ್ವಾಲ್ - ಹಣಕಾಸು, ಕಾರ್ಪೊರೇಟ್ ವ್ಯವಹಾರಗಳು
31. ಡಾ. ಮಹೇಂದ್ರ ನಾಥ್ ಪಾಂಡೆ - ಮಾನವ ಸಂಪನ್ಮೂಲ ಅಭಿವೃದ್ಧಿ
32. ಅಜಯ್ ತಮ್ಟಾ - ಜವಳಿ ಖಾತೆ
33. ಕೃಷ್ಣ ರಾಜ್ - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
34. ಮನ್ಸುಖ್ ಎಲ್ ಮಾಂಡವಿಯಾ - ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಹಡಗು, ರಸಗೊಬ್ಬರ
35. ಅನುಪ್ರಿಯಾ ಪಟೇಲ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
36. ಸಿಆರ್ ಚೌದರಿ - ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ
37. ಪಿಪಿ ಚೌದರಿ - ಕಾನೂನು ಮತ್ತು ನ್ಯಾಯ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ
38. ಡಾ.ಸುಭಾಷ್ ರಾಮ್ ರಾವ್ ಭಮ್ರೆ - ರಕ್ಷಣಾ ಇಲಾಖೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com