ರಾಜ್ಯಪಾಲರಿಗೆ ನೂತನ ಸಚಿವರ ಪಟ್ಟಿ: ಸಿಎಂ ಸಿದ್ದರಾಮಯ್ಯ
ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ಅನುಮತಿ ನೀಡಿದ ಬೆನ್ನಲ್ಲೇ ಭಾನುವಾರ ಸಂಜೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ...

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ಅನುಮತಿ ನೀಡಿದ ಬೆನ್ನಲ್ಲೇ ಭಾನುವಾರ ಸಂಜೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ನಾಳೆ ಸಂಜೆ ರಾಜಭವನದಲ್ಲಿ 13 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ನೂತನ 13 ಮಂದಿ ಸಚಿವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಸಂಜೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ಸಚಿವರ ಪಟ್ಟಿಯನ್ನು ರಾಜ್ಯಪಾಲ ವಜುಭಾಯಿವಾಲಾ ಅವರಿಗೆ ನೀಡಲಿದ್ದು, ಆ ಮೂಲಕ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಅಧಿಕೃತ ಸಿದ್ಧತೆ ಆರಂಭಗೊಳ್ಳುತ್ತದೆ.
ಇನ್ನು 13 ಮಂದಿ ಹಾಲಿ ಸಚಿವರನ್ನು ನೂತನ ಸಂಪುಟದಿಂದ ಕೈಬಿಡಲಾಗಿದ್ದು, ಅವರ ಬದಲಿಗೆ 12 ಮಂದಿ ಹೊಸಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ. ಇನ್ನು ಹಾಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸಚಿವ ಸ್ಥಾನ ಪಡೆದಿರುವ ಹಿನ್ನಲೆಯಲ್ಲಿ ಅವರು ಸ್ಪೀಕರ್ ಸ್ಥಾನವನ್ನು ತೆರವುಗೊಳಿಸುತ್ತಿದ್ದು, ಅವರ ಸ್ಥಾನಕ್ಕೆ ಕೆಬಿ ಕೋಳಿವಾಡ ಅವರನ್ನು ನೇಮಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಉಳಿದಂತೆ ರಾಜ್ಯ ಸಂಪುಟ ಪುನಾರಚನೆಯಲ್ಲಿ ಕೈ ಬಿಡಲಾಗುವ ಮತ್ತು ಸೇರ್ಪಡೆಯಾಗುವ ಸಂಭವನೀಯ ಸಚಿವರ ಪಟ್ಟಿ ಇಂತಿದೆ.
ಸಂಪುಟದಿಂದ ಕೈಬಿಡಲಾಗುವ ಸಂಭವನೀಯ ಸಚಿವರು
ಪಿಟಿ ಪರಮೇಶ್ವರ್ ನಾಯಕ್ (ಕಾರ್ಮಿಕ ಸಚಿವ)
ವಸತಿ ಸಚಿವ ಅಂಬರೀಶ್ (ವಸತಿ ಸಚಿವ)
ಕಿಮ್ಮನೆ ರತ್ನಾಕರ್ (ಶಿಕ್ಷಣ ಸಚಿವ)
ಅಭಯ್ ಚಂದ್ರ ಜೈನ್ (ಮೀನುಗಾರಿಕೆ ಸಚಿವ)
ಕೃಷ್ಣ ಬೈರೇಗೌಡ (ಕೃಷಿ ಸಚಿವ)
ದಿನೇಶ್ ಗುಂಡೂರಾವ್ (ಆಹಾರ-ನಾಗರಿಕ ಪೂರೈಕೆ ಸಚಿವ)
ವಿನಯ್ ಕುಮಾರ್ ಸೊರಕೆ (ನಗರಾಭಿವೃದ್ಧಿ ಸಚಿವ)
ಶ್ಯಾಮನೂರು ಶಿವಶಂಕರಪ್ಪ (ತೋಟಗಾರಿಕೆ ಸಚಿವ)
ವಿ ಶ್ರೀನಿವಾಸ್ ಪ್ರಸಾದ್ (ಕಂದಾಯ ಸಚಿವ)
ಎಸ್ ಆರ್ ಪಾಟೀಲ್ (ಐಟಿ ಬಿಟಿ ಸಚಿವ)
ಖಮರುಲ್ ಇಸ್ಲಾಂ (ಅಲ್ಪ ಸಂಖ್ಯಾತ ಸಚಿವ)
ಸತೀಶ್ ಜಾರಕಿಹೊಳಿ (ಸಣ್ಣ ಕೈಗಾರಿಕೆ ಸಚಿವ)
ಬಾಬೂರಾವ್ ಚಿಂಚನಸೂರ (ಜವಳಿ ಸಚಿವ)
ಶಿವರಾಜ್ ತಂಗಡಗಿ (ಸಣ್ಣ ನೀರಾವರಿ ಸಚಿವ)
ಸಂಪುಟ ಸೇರುವ ನೂತನ ಸಂಭವನೀಯ ಸಚಿವರು
ರುದ್ರಪ್ಪ ಲಮಾಣಿ (ಹಾವೇರಿ ಶಾಸಕ)
ಸಂತೋಷ್ ಲಾಡ್ (ಧಾರವಾಡ ಜಿಲ್ಲೆಯ ಕಲಘಟಗಿ )
ತನ್ವೀರ್ ಸೇಠ್- (ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ)
ಶಿವಮೂರ್ತಿ ನಾಯಕ್ ಅಥವಾ ಗೋಪಾಲಕೃಷ್ಣ
ಎನ್ ಎ ಹ್ಯಾರಿಸ್ಗೆ (ಶಾಂತಿನಗರ ಶಾಸಕ)
ಕೆ ಸುಧಾಕರ್ (ಚಿಕ್ಕಬಳ್ಳಾಪುರ ಶಾಸಕ)
ಕಾಗೋಡು ತಿಮ್ಮಪ್ಪ (ಸಾಗರ ಶಾಸಕ)
ಸುಧಾಕರ್ (ಹಿರಿಯೂರು ಶಾಸಕ )
ಎಂ ಕೃಷ್ಣಪ್ಪ (ವಿಜಯನಗರ ಶಾಸಕ)
ರಮೇಶ್ ಕುಮಾರ್ (ಶ್ರೀನಿವಾಸಪುರ ಶಾಸಕ)
ಪ್ರಮೋದ್ ಮದ್ವರಾಜ್ (ಉಡುಪಿ ಶಾಸಕ)
ಎಸ್ ಎಸ್ ಮಲ್ಲಿಕಾರ್ಜುನ್ (ದಾವಣಗೆರೆ ಉತ್ತರ)
ಪ್ರಿಯಾಂಕ್ ಖರ್ಗೆ (ಚಿತ್ತಾಪುರ ಶಾಸಕ)
ಅಪ್ಪಾಜಿ ನಾಡಗೌಡ ಅಥವಾ ಸಿದ್ದು ನ್ಯಾಮಗೌಡ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


