ಭಾರತದ ಎನ್ಎಸ್​ಜಿ ಸದಸ್ಯತ್ವದ ಬಗ್ಗೆ ಅಮೆರಿಕದಿಂದ ತಪ್ಪು ಹೇಳಿಕೆ: ಚೀನಾ

ಚೀನಾ ವಿರೋಧದಿಂದಾಗಿಯೇ ಭಾರತಕ್ಕೆ ಪರಮಾಣು ಪೂರೈಕೆದಾರರ ಸಮೂಹದ(ಎನ್ಎಸ್​ಜಿ) ಸದಸ್ಯತ್ವ ಕೈತಪ್ಪಿತು ಎಂಬ ಅಮೆರಿಕ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ನವದೆಹಲಿ: ಚೀನಾ ವಿರೋಧದಿಂದಾಗಿಯೇ ಭಾರತಕ್ಕೆ ಪರಮಾಣು ಪೂರೈಕೆದಾರರ ಸಮೂಹದ(ಎನ್ಎಸ್​ಜಿ) ಸದಸ್ಯತ್ವ ಕೈತಪ್ಪಿತು ಎಂಬ ಅಮೆರಿಕ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಚೀನಾ, ಅಮೆರಿಕ ವಾಸ್ತಾಂಶಗಳನ್ನು ಬದಿಗೊತ್ತಿ, ತಪ್ಪು ಹೇಳಿಕೆಗಳನ್ನು ನೀಡುತ್ತಿದೆ ಎಂದು ಅಮೆರಿಕ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದೆ.
ಚೀನಾ ನೇತೃತ್ವದ ರಾಷ್ಟ್ರಗಳ ಗುಂಪು ವಿರೋಧ ವ್ಯಕ್ತಪಡಿಸಿದ ಕಾರಣದಿಂದ ಭಾರತಕ್ಕೆ ಎನ್​ಎಸ್​ಜಿ ಸದಸ್ಯತ್ವ ದೊರೆಯಲಿಲ್ಲ ಎಂದು ಅಮೆರಿಕದ ರಾಜಕೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿ ಟಾಮ್ ಶನ್ನನ್ ಅವರು ನಿನ್ನೆ ಹೇಳಿದ್ದರು. 
ಇಂದು ಅಮೆರಿಕಕ್ಕೆ ತಿರುಗೇಟು ನೀಡಿರುವ ಚೀನಾ, ಚೀನಾದ ವಿದೇಶಾಂಗ ವ್ಯವಹಾರಗಳ ಅಧಿಕಾರಿ ಹಾಂಗ್ ಲೀ, ಅಮೆರಿಕದ ಅಧಿಕಾರಿಗಳು ಸತ್ಯವನ್ನು ಬದಿಗೊತ್ತಿ ಚೀನಾದ ವಿರುದ್ಧ ವೃಥಾ ಆರೋಪ ಹೊರಿಸುತ್ತಿದ್ದಾರೆ. ಎನ್​ಎಸ್​ಜಿ ಸಭೆಯಲ್ಲಿ ಭಾರತದ ಸದಸ್ಯತ್ವದ ಅಜೆಂಡಾ ಮಾತ್ರ ಇರಲಿಲ್ಲ. ಹಲವಾರು ವಿಷಯಗಳ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಯಾವುದೇ ಒಂದು ರಾಷ್ಟ್ರವನ್ನು ಎನ್​ಎಸ್​ಜಿಗೆ ಸೇರ್ಪಡೆ ಮಾಡಿಕೊಳ್ಳುವ ಸಂಬಂಧ ಚರ್ಚೆ ನಡೆಸಲಾಗಿಲ್ಲ. ಸಭೆಯಲ್ಲಿ ಸದಸ್ಯತ್ವ ನೀಡುವ ಸಂಬಂಧ ಇರುವ ತಾಂತ್ರಿಕ, ಶಾಸನಾತ್ಮಕ ಮತ್ತು ರಾಜಕೀಯ ವಿಚಾರಗಳ ಕುರಿತು ಮಾತ್ರ ಚರ್ಚೆ ನಡೆಸಲಾಯಿತು ಎಂದು ಅಮೆರಿಕದ ವಿರುದ್ಧ ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com