ಲೋಕಸಭೆಯಲ್ಲಿ ಆಧಾರ್ ಮಸೂದೆ ಅಂಗೀಕಾರ, ಪಿತೂರಿ ಎಂದ ಕಾಂಗ್ರೆಸ್

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಆರಂಭಿಸಿದ್ದ ಆಧಾರ್ ಕಾರ್ಡ್ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ನವದೆಹಲಿ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಆರಂಭಿಸಿದ್ದ ಆಧಾರ್ ಕಾರ್ಡ್ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರದ್ದುಗೊಳ್ಳುವುದೇನೋ ಎಂಬ ಆತಂಕ ವ್ಯಕ್ತವಾಗಿತ್ತು. ಆದರೆ ಆ ಆಧಾರ್‌ ಕಾರ್ಡ್ ಗೆ ನರೇಂದ್ರ ಮೋದಿ ಸರ್ಕಾರ ಶುಕ್ರವಾರ ಕಾನೂನಿನ ಮಾನ್ಯತೆ ನೀಡಿದೆ.
ಆಧಾರ್‌ ಪ್ರಾಧಿಕಾರಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಉದ್ದೇಶದಿಂದ ಆಧಾರ್ ಮಸೂದೆ 2016ರನ್ನು ಹಣಕಾಸು ಮಸೂದೆ ಎಂದು ಪರಿಗಣಿಸಿ ಶುಕ್ರವಾರ ಲೋಕಸಭೆಯಲ್ಲಿ ಎನ್ ಡಿಎ ಸರ್ಕಾರ ಮಂಡಿಸಿ, ಅಂಗೀಕಾರ ಪಡೆದುಕೊಂಡಿದೆ. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷ ಕಾಂಗ್ರೆಸ್, ರಾಜ್ಯಸಭೆಯನ್ನು ಹಾಳುಮಾಡುವ ಪಿತೂರಿ ಇದು ಎಂದು ಆರೋಪಿಸಿದೆ.
ಹಣಕಾಸು ಮಸೂದೆ ಒಂದು ಬಾರಿ ಲೋಕಸಭೆಯಲ್ಲಿ ಅಂಗೀಕಾರವಾಗಿ ರಾಜ್ಯಸಭೆ ಕಳುಹಿಸಿದರೆ, ಅಲ್ಲಿ ಮಸೂದೆ ಬಗ್ಗೆ ಕೇವಲ ಚರ್ಚೆ ಮಾಡಬಹುದು. ಆದರೆ ಯಾವುದೇ ತಿದ್ದುಪಡಿ ಮಾಡುವಂತಿಲ್ಲ ಮತ್ತು ಅದನ್ನು ತಕ್ಷಣವೇ ಚರ್ಚಗೆ ತೆಗೆದುಕೊಳ್ಳಬೇಕು. 14 ದಿನಗಳಲ್ಲಿ ರಾಜ್ಯಸಭೆಯಲ್ಲಿ ಮಸೂದೆಯನ್ನು ಮಂಡಿಸಿ, ಚರ್ಚಿಸದಿದ್ದರೆ ಮಸೂದೇ ಅಂಗೀಕಾರವಾಗಿದೆ ಎಂದು ಪರಿಗಣಿಸಲಾಗುತ್ತದೆ.
ಅಧಾರ್ ಮಸೂದೆ ಮಂಡಿಸಿ ಮಾತನಾಡಿದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಆಧಾರ್ ಕಾರ್ಡ್ ವಿಚಾರದಲ್ಲಿ ರಾಜಕೀಯ ಭಿನ್ನಾಭಿಪ್ರಾ ಇಲ್ಲ. ಶೇ.97ರಷ್ಟು ಯುವಕರು ಈ ಆಧಾರ ಕಾರ್ಡ್ ಹೊಂದಿದ್ದು, ಅದನ್ನು ದುರ್ಬಳಕೆ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com