ರಾಜ್ಯಸಭೆ ತಿದ್ದುಪಡಿ ತಿರಸ್ಕರಿಸಿ, ಲೋಕಸಭೆಯಲ್ಲಿ ಆಧಾರ್ ಮಸೂದೆ ಅಂಗೀಕಾರ

ರಾಜ್ಯಸಭೆ ಸೂಚಿಸಿದ್ದ ತಿದ್ದುಪಡಿಗಳನ್ನು ಬುಧವಾರ ಲೋಕಸಭೆಯಲ್ಲಿ ತಿರಸ್ಕರಿಸಿದ ನಂತರ, ವಿಶಿಷ್ಟ ಗುರುತು ಸಂಖ್ಯೆ...
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
Updated on: 
ನವದೆಹಲಿ: ರಾಜ್ಯಸಭೆ ಸೂಚಿಸಿದ್ದ ತಿದ್ದುಪಡಿಗಳನ್ನು ಬುಧವಾರ ಲೋಕಸಭೆಯಲ್ಲಿ ತಿರಸ್ಕರಿಸಿದ ನಂತರ, ವಿಶಿಷ್ಟ ಗುರುತು ಸಂಖ್ಯೆ (ಆಧಾರ್) ಶಾಸನಬದ್ಧ ಸ್ಥಾನ ನೀಡುವ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿತು. 
ರಾಷ್ಟ್ರಪತಿಗಳ ಅಂಕಿತ ಬಿದ್ದ ಕೂಡಲೆ ಇದು ಕಾನೂನಾಗಲಿದೆ. ಆಧಾರ್ (ಹಣಕಾಸು ಮತ್ತು ಇತರ ಸಹಾಯಧನ, ಪ್ರಯೋಜನ ಮತ್ತು ಸೇವೆಗಳ ವಿತರಣೆ) ಮಸೂದೆ 2016ಕ್ಕೆ ಕಾಂಗ್ರೆಸ್ ನ ಜೈರಾಮ್ ರಮೇಶ್ ಐದು ತಿದ್ದುಪಡಿಗಳನ್ನು ಮಂಡಿಸಿದರು. ರಾಜ್ಯಸಭೆಯಲ್ಲಿ ಎನ್ ಡಿಎಗೆ ಬಹುಮತ ಇಲ್ಲ. ಹಾಗಾಗಿ, ಈ ತಿದ್ದುಪಡಿಗಳು ಅಂಗೀಕಾರವಾದವು. ನಂತರ ಈ ತಿದ್ದುಪಡಿಗಳ ಮಸೂದೆಯನ್ನು ರಾಜ್ಯಸಭೆಯು ಲೋಕಸಭೆಗೆ ಕಳುಹಿಸಿತು. ಆದರೆ, ಲೋಕಸಭೆಯಲ್ಲಿ ಈ ತಿದ್ದುಪಡಿಗಳನ್ನು ತಿರಸ್ಕರಿಸಿ ಆಧಾರ್ ಮಸೂದೆಯನ್ನು ಅಂಗೀಕರಿಸಲಾಯಿತು.
ರಾಜ್ಯಸಭೆ ಒಪ್ಪಿಗೆ ಕಡ್ಡಾಯವಲ್ಲ: ರಾಜ್ಯಸಭೆಯು ಮಸೂದೆಗೆ 11 ತಿದ್ದುಪಡಿಗಳನ್ನು ಸೂಚಿಸಿ ಅದನ್ನು ಬುಧವಾರ ಲೋಕಸಭೆಗೆ ಮರಳಿಸಿತ್ತು. ರಾಜ್ಯಸಭೆಯು ತಿದ್ದುಪಡಿಗಳನ್ನು ಮಾಡಲು ಅವಕಾಶವಿರಲಿಲ್ಲ, ಅದು ತಿದ್ದುಪಡಿಗಾಗಿ ಲೋಕಸಭೆಗೆ ಶಿಫಾರಸುಗಳನ್ನು ಸೂಚಿಸಬಹುದಾಗಿತ್ತು. ರಾಜ್ಯಸಭೆಯು ಸೂಚಿಸಿದ ಶಿಫಾರಸುಗಳನ್ನು ಅಳವಡಿಸಿಕೊಂಡು ಅಥವಾ ಅವುಗಳನ್ನು ಕೈಬಿಟ್ಟು ಲೋಕಸಭೆಯು ಧನ ವಿಧೇಯಕವನ್ನು ಅಂಗೀಕರಿಸಿದರೆ ಸಂಸತ್ತಿನ ಉಭಯ ಸದನಗಳೂ ಅದನ್ನು ಅಂಗೀಕರಿಸಿವೆ ಎಂದು ಪರಿಗಣಿಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com