ಲಿಬಿಯಾದ ಶೆಲ್ ದಾಳಿಯಲ್ಲಿ ಕೇರಳ ಮೂಲದ ಇಬ್ಬರ ಸಾವು

ಲಿಬಿಯಾದ ಸಬ್ರಾಥ ನಗರದಲ್ಲಿ ನಡೆದ ಶೆಲ್ ದಾಳಿಯಲ್ಲಿ, ತಮ್ಮ ಮನೆಯ ಮೇಲೆ ಅಪ್ಪಳಿಸಿದ ಶೆಲ್ ನಿಂದ ಕೇರಳ ಮೂಲದ ನರ್ಸ್ ಮತ್ತು ಅವರ ಪುತ್ರ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕೊಟ್ಟಾಯಂ: ಲಿಬಿಯಾದ ಸಬ್ರಾಥ ನಗರದಲ್ಲಿ ನಡೆದ ಶೆಲ್ ದಾಳಿಯಲ್ಲಿ, ತಮ್ಮ ಮನೆಯ ಮೇಲೆ ಅಪ್ಪಳಿಸಿದ ಶೆಲ್ ನಿಂದ ಕೇರಳ ಮೂಲದ ನರ್ಸ್ ಮತ್ತು ಅವರ ಪುತ್ರ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ವಸತಿ ಸಮುಚ್ಚಯಕ್ಕೆ ಶೆಲ್ ಅಪ್ಪಳಿಸಿದ್ದರಿಂದ ಈ ದುರ್ಮರಣ ಉಂಟಾಗಿದೆ. ಮನೆಯ ಒಳಗಿದ್ದ ಸುನು ಮತ್ತು ಅವರ 18 ತಿಂಗಳ ಮಗು ಮೃತಪಟ್ತಿದ್ದರೆ, ಮನೆಯಿಂದ ಹೊರಗಿದ್ದ ಸುನು ಅವರ ಪತಿ ವಿಪಿನ್ ಬದುಕುಳಿದಿದ್ದಾರೆ.

ಈ ಇಬ್ಬರಷ್ಟೇ ಅಲ್ಲದೆ ಇನ್ನೂ ಕೆಲವರು ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ. ವಿಪಿನ್ ಮತ್ತು ಸುನು ನರ್ಸ್ ಜೋಡಿ, ೨೦೧೨ ರಲ್ಲಿ ತಮ್ಮ ಮದುವೆಯ ನಂತರ ಲಿಬಿಯಾಗೆ ಬಂದಿದ್ದರು.

ಕೇರಳ ಮೂಲದ ಜನರ ಸುರಕ್ಷತೆಗಾಗಿ ಲಿಬಿಯಾದೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಕೇರಳ ಮುಖ್ಯಮಂತ್ರಿ ಒಮ್ಮನ್ ಚಾಂಡಿ ಅವರ ಕಚೇರಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com