ಕ್ಯಾನ್ಸರ್ ರೋಗಿಗಳ ವಯಸ್ಸಿನ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ಕಾಯಿಲೆಯಿಂದ ಪ್ರತಿ ವರ್ಷ 5 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ. ಸಾಮಾನ್ಯವಾಗಿ ಪುರುಷರು ಹೊಟ್ಟೆ ಹಾಗೂ ಗಂಟಲು ಕ್ಯಾನ್ಸರ್ ಗೆ ತುತ್ತಾದರೆ, ಮಹಿಳೆಯರು ಸ್ತನ ಹಾಗೂ ಗರ್ಭಕೋಶದ ಕ್ಯಾನ್ಸರ್ ಗೆ ಬಲಿಯಾಗುತ್ತಿದ್ದಾರೆ ಎಂದು ಆರೋಗ್ಯ ಸಚಿವ ಜೆ.ಪಿ.ನಡ್ಡಾ ಸದನಕ್ಕೆ ತಿಳಿಸಿದರು.